Advertisement
ಉಪ ಚುನಾವಣೆಗೆ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದ್ದ ಗುರುವಾರ ಯಾವುದೇ ಅಭ್ಯರ್ಥಿಗಳು ಉಮೇದುವಾರಿಕೆ ಹಿಂಪಡೆಯದೆ ಕಣದಲ್ಲೇ ಉಳಿದುಕೊಂಡಿರುವುದರಿಂದ ಮೇ 20 ರಂದು ನಡೆಯುವ ಚುನಾವಣೆಗೆ ಅಭ್ಯರ್ಥಿಗಳ ಅಂತಿಮ ಹಣಾಹಣಿ ಅಖೈರಾಗಿದೆ.
Related Articles
Advertisement
ಇನ್ನು 28ನೇ ವಾರ್ಡ್‌ನಲ್ಲಿ ಮಹಿಳಾ ಮತದಾರರು ಸಹ ಪ್ರಮುಖ ಪಾತ್ರ ವಹಿಸಲಿದ್ದಾರೆ. ಭಗತ್‌ಸಿಂಗ್ ನಗರ ವಾರ್ಡ್‌ನ ಒಟ್ಟು ಮತದಾರರ ಸಂಖ್ಯೆ 8946. ಅವರಲ್ಲಿ ಪುರುಷರು 4467. ಮಹಿಳಾ ಮತದಾರರ ಸಂಖ್ಯೆ 4479. ಪುರುಷರಗಿಂತಲೂ ಮಹಿಳಾ ಮತದಾರರ ಸಂಖ್ಯೆ ಹೆಚ್ಚಿದೆ. ಮಹಿಳೆಯರು ಕೈಗೊಳ್ಳುವ ತೀರ್ಮಾನ ಬಹಳ ಕುತೂಹಲ ಕೆರಳಿಸಿದೆ. ಕಮಲ, ಕೈ ಇಲ್ಲವೇ ತೆನೆ ಹೊತ್ತ ಮಹಿಳೆಗೆ ಆಶೀರ್ವದಿಸುವರೋ ಎಂಬುದನ್ನು ಕಾದು ನೋಡಬೇಕಿದೆ.
37 ನೇ ವಾರ್ಡ್‌ನ ಕೆ.ಇ.ಬಿ. ಕಾಲೋನಿಯಲ್ಲಿ ಕಳೆದ ಬಾರಿಯಂತೆ ಬಿಜೆಪಿಯ ಶ್ವೇತಾ ಶ್ರೀನಿವಾಸ್ ನೇರ ಸ್ಪರ್ಧೆ ಎದುರಿಸುತ್ತಿದ್ದಾರೆ. ಕಾಂಗ್ರೆಸ್‌ನ ಅಚ್ಚರಿಯ ಅಭ್ಯರ್ಥಿ ರೇಖಾರಾಣಿ ಸಕ್ರಿಯ ರಾಜಕಾರಣಕ್ಕೆ ತೀರಾ ಹೊಸಬರು. ಆದರೂ, ಅವರ ಹಿಂದೆ ಸಿದ್ಧಗಂಗಾ ವಿದ್ಯಾಸಂಸ್ಥೆಯ ಹೆಸರಿದೆ. ಕೆಇಬಿ ಕಾಲೋನಿ ವಾರ್ಡ್ ಕಾಂಗ್ರೆಸ್ ಬೆಲ್ಟ್ ಎಂದೇ ಗುರುತಿಸಲ್ಪಡುತ್ತದೆ. ಹಾಗಾಗಿ ಶ್ವೇತಾ ಶ್ರೀನಿವಾಸ್ ಕಳೆದ ಬಾರಿಗಿಂತಲೂ ಹೆಚ್ಚಿನ ಪೈಪೋಟಿ ಎದುರಿಸುವಂತಾಗಿದೆ.
ಕೆಇಬಿ ಕಾಲೋನಿಯಲ್ಲೂ ಮಹಿಳಾ ಮತದಾರರ ಸಂಖ್ಯೆಯೇ ಹೆಚ್ಚಾಗಿದೆ. ಒಟ್ಟಾರೆ 6630 ಮತದಾರರಲ್ಲಿ 3530 ಮಹಿಳಾ ಮತದಾರರಿದ್ದಾರೆ. 3100 ಪುರುಷ ಮತದಾರರಿದ್ದಾರೆ. ಮತಗಟ್ಟೆ ಸಂಖ್ಯೆ 315 ರಲ್ಲೇ 732 ಮಹಿಳಾ ಮತದಾರರಿದ್ದಾರೆ. ಎರಡೂ ವಾರ್ಡ್‌ಗಳಲ್ಲಿ ಮಹಿಳಾ ಮತದಾರರೇ ನಿರ್ಣಾಯಕರಾಗಿದ್ದಾರೆ.
ಅಂತಿಮ ಅಭ್ಯರ್ಥಿಗಳ ಪಟ್ಟಿ ಅಂತಿಮವಾಗುವ ಮುನ್ನವೇ ಎಲ್ಲ ಪಕ್ಷದ ಅಭ್ಯರ್ಥಿಗಳು ಬಿರುಸಿನ ಪ್ರಚಾರ ದಲ್ಲಿ ತೊಡಗಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್ ಜಿದ್ದಿಗೆ ಬಿದ್ದಿರುವಂತೆ ಪ್ರಚಾರ ನಡೆಸುತ್ತಿವೆ. ಮುಂದಿನ ದಿನಗಳಲ್ಲಿ ಸ್ಥಳೀಯ ಮುಖಂಡರು ಸಹ ರಂಗಪ್ರವೇಶ ಮಾಡುವುದರಿಂದ ಚುನಾವಣಾ ರಂಗೇರಲಿದೆ. ಎರಡೂ ಪಕ್ಷದ ಅಭ್ಯರ್ಥಿಗಳು ಗೆಲುವಿಗಾಗಿ ಶತಾಯಗತಾಯ ಪ್ರಯತ್ನ ನಡೆಸುತ್ತಿದ್ದಾರೆ. ಎರಡು ಪಕ್ಷಗಳ ನಡುವೆ 28ನೇ ವಾರ್ಡ್‌ನಲ್ಲಿ ಜೆಡಿಎಸ್ ಒಂದು ಕೈ ನೋಡುವ ಗುರಿಯೊಂದಿಗೆ ಪ್ರಯತ್ನ ಮುಂದುವರೆಸಿದೆ.
-ರಾ. ರವಿಬಾಬು