Advertisement
2018ರ ಮಹಾ ಮಸ್ತಕಾಭಿಷೇಕ ಸಮಾರಂಭಕ್ಕಾಗಿ ಬೆಂಗಳೂರು ಮತ್ತು ಹಂಪಿ ವರ್ತುಲದ ಎಎಸ್‌ಐ ಸುಪರಿಂಟೆಂಡಿಂಗ್ ಆರ್ಕಿಯೋಲಾಜಿಸ್ಟ್ ಆಗಿರುವ ಮೂರ್ತೀಶ್ವರಿ ಅವರು ಈಚೆಗೆ ಶ್ರವಣಬೆಳಗೊಳ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರೊಂದಿಗೆ ನಡೆಸಿದ ಸಭೆಯಲ್ಲಿ ಮಹಾ ಮಸ್ತಕಾಭಿಷೇಕ ಸಂಬಂಧ ಎಎಸ್‌ಐ ಶ್ರವಣಬೆಳಗೊಳದಲ್ಲಿ ಕಾರ್ಯಾನುಷ್ಠ ಮಾಡಲಿರುವ ಯೋಜನೆಗಳ ವಿವರಗಳನ್ನು ನೀಡಿದ್ದಾರೆ.
Related Articles
Advertisement
ಎಎಸ್‌ಐ ಮತ್ತು ಶ್ರವಣಬೆಳಗೊಳ ಪಟ್ಟಣ ಮತ್ತು ದೇವಾಲಯಗಳೊಂದಿಗೆ ಸಂಪರ್ಕ ಹೊಂದಿರುವ ಸಂಸ್ಥೆಗಳು ಪುಸ್ತಕ ರೂಪದಲ್ಲಿ ಒದಗಿಸಿರುವ ಮಾಹಿತಿಗಳನ್ನು ಲಭ್ಯಗೊಳಿಸುವ ನಿಟ್ಟಿನಲ್ಲಿ ವಿಶೇಷ ಕ್ಯೂಆರ್ (ಕ್ವಿಕ್ ರೆಸ್ಪಾನ್ಸ್) ಕೋಡ್‌ಗಳನ್ನು ಎಎಸ್‌ಐ ಪರಿಚಯಿಸಲಿದೆ.
ಸುಮಾರು 58ರಷ್ಟು ಇರುವ ಎಲ್ಲ ಎಎಸ್‌ಐ ತಾಣಗಳನ್ನು ಸಂದರ್ಶಿಸುವುದು ವಿದೇಶಿ ಪ್ರವಾಸಿಗರಿಗೆ ಸಾಧ್ಯವಾಗದ ಕಾರಣ ಅವರು ಈ ಕ್ಯೂಆರ್ ಕೋಡ್‌ಗಳ ಮೂಲಕ ಅವುಗಳ ಸಂಪೂರ್ಣ ಮಾಹಿತಿಯನ್ನು ಪಡೆಯಲು ಸಾಧ್ಯವಿರುತ್ತದೆ. ಅವರು ತಮ್ಮ ಅನುಕೂಲಕರ ಹೊತ್ತಿನಲ್ಲಿ, ಬಿಡುವಿನಲ್ಲಿ ಕ್ಯೂಆರ್ ಕೋಡ್ ಬಳಸಿ ಅಗತ್ಯವಿರುವ ಎಲ್ಲ ಮಾಹಿತಿಗಳನ್ನು ಪಡೆಯಬಹುದಾಗಿರುತ್ತದೆ. ಈ ಮೂಲಕ ಮಾಹಿತಿ ಆಧಾರಿತ ಜ್ಞಾನವು ದೂರದೂರಕ್ಕೂ , ವಿಶ್ವದ ಉದ್ದಗಲಕ್ಕೂ ತಲುಪುವುದು ಸಾಧ್ಯವಿರುತ್ತದೆ ಎಂದು ಮೂರ್ತೀಶ್ವರಿ ಹೇಳಿದರು.
ಶ್ರವಣಬೆಳಗೊಳದಲ್ಲಿನ ಪ್ರಾಚೀನ ಶಿಲಾ ಶಾಸನಗಳು ಮತ್ತು ಮೋನೋಗ್ರಾಫ್ ಗಳನ್ನು ರಕ್ಷಿಸುವ ಕಾರ್ಯವನ್ನು ಎಎಸ್‌ಐ ಮಾಡುತ್ತಿರುವ ಕೆಲಸಗಳನ್ನು ಮೂರ್ತೀಶ್ವರಿ ಅವರು ಸ್ವಾಮೀಜಿಯವರಿಗೆ ವಿವರಿಸಿದರು. ವಿದ್ಯಾಗಿರಿ ಬೆಟ್ಟದ ಮೆಟ್ಟಲುಗಳು , ವಡಗಲ ಬಸದಿ ಮತ್ತು ಶ್ರವಣ ಬೆಳಗೊಳದ ಇನ್ನಿತರ ಹಲವು ಸಣ್ಣ ಪುಟ್ಟ ದೇಗುಲಗಳ ಸಂರಕ್ಷಣೆ ಸಂಬಂಧ ಎಎಸ್‌ಐ ಕೈಗೊಂಡಿರುವ ಕೆಲಸಗಳ ಬಗ್ಗೆ ಅವರು ಮಾಹಿತಿ ನೀಡಿದರು.
ಗೋಮಟೇಶ್ವರ ಬೆಟ್ಟದ ಮೇಲೆ ಯಾತ್ರಿಕರು ಮತ್ತು ಪ್ರವಾಸಿಗರಿಗೆ ವಿಶ್ರಾಮ ತಾಣಗಳನ್ನು ಮಾತ್ರವಲ್ಲದೆ ಕುಡಿಯುವ ನೀರಿನ ಸೌಕರ್ಯವನ್ನು ಕಲ್ಪಿಸಬೇಕೆಂದು ಸ್ವಾಮೀಜಿ ಸಲಹೆ ನೀಡಿದರು. ಕ್ಷೇತ್ರದಲ್ಲಿ ಬಯೋ ಮತ್ತು ಇ-ಟಾಯ್‌ಲೆಟ್‌ಗಳನ್ನು ನಿರ್ಮಿಸುವ ಎಎಸ್‌ಐ ಕೆಲಸವನ್ನು ಸ್ವಾಮೀಜಿ ಪ್ರಶಂಸಿಸಿದರು. ಹಾಗೆಯೇ ಮಹಾ ಮಸ್ತಕಾಭಿಷೇಕದ ವಿಶೇಷ ಅಂಚೆ ಚೀಟಿ ಹೊರತರಲಾಗುವ ಯೋಜನೆಯನ್ನೂ ಅವರು ಮೆಚ್ಚಿದರು.
ಮುನಿಗಳು, ಮಾತೆಯರು ಮತ್ತು ಇತರ ಸನ್ಯಾಸಿಗಳು ಮತ್ತು ಧಾರ್ಮಿಕ ಗಣ್ಯರು ಈಗಾಗಲೇ ಶ್ರವಣ ಬೆಳಗೊಳಕ್ಕೆ ಬರಲು ಆರಂಭಿಸಿದ್ದಾರೆ ಎಂದು ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.
ಫ್ರಾನ್ಸ್‌ನ ಬೋರ್ಡಿಯೋದಿಂದ ಬಂದಿರುವ ಲಿಂಡಾ ಮತ್ತು ರೋಂಡಾ ಎಂಬ ತಾಯಿ-ಮಗಳು ಶ್ರವಣ ಬೆಳಗೊಳಕ್ಕೆ ಬಂದ ಬಳಿಕ ನಮಗೆ ಭೌತಿಕ ಸಂಪತ್ತಿನ ಜಗತ್ತು ಟೊಳ್ಳೆಂಬುದರ ಅರಿವಾಯಿತು; ಶ್ರವಣ ಬೆಳಗೊಳದಲ್ಲಿ ಆಳಕ್ಕೆ ಬೇರು ಬಿಟ್ಟಿರುವ ತತ್ವಶಾಸ್ತ್ರವನ್ನು ನಾವು ತಿಳಿದೆವು ಎಂದು ಉದ್ಗರಿಸಿರುವುದಾಗಿ ಸ್ವಾಮೀಜಿ ಉಲ್ಲೇಖೀಸಿದರು. ಇದೇ ರೀತಿ ಬೆಲ್ಜಿಯಂ ನಿಂದ ಬಂದಿರುವ ಸ್ಟೀವ್ ಮತ್ತು ಆತನ ಪತ್ನಿ ಬ್ರೆಂಡಾ ಶ್ರವಣ ಬೆಳಗೊಳ ಪಟ್ಟಣವನ್ನು ತಾವು ಅದರ ಸರಳತೆಗಾಗಿ ಅಪಾರವಾಗಿ ಮೆಚ್ಚಿಕೊಂಡಿರುವುದಾಗಿ ಹೇಳಿದರು.
ಶ್ರವಣ ಬೆಳಗೊಳದ ವಿವಿಧ ಸ್ಥಳಗಳಿಗೆ ಭೇಟಿ ನೀಡಲು ಯಾತ್ರಿಕರಿಗೆ ಅನುಕೂಲವಾಗುವಂತೆ ಬ್ಯಾಟರಿ ಚಾಲಿತ ಬುಗ್ಗಿಗಳನ್ನು ವ್ಯವಸ್ಥೆಗೊಳಿಸಲಾಗಿದೆ. ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರೇ ತಾವು ಮೊದಲು ಈ ಬುಗ್ಗಿಯಲ್ಲಿ ತಿರುಗಾಟ ನಡೆಸಿ ತೃಪ್ತಿ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನ ಮೋಟಾರ್ ಸೈಕಲ್ ಕಂಪೆನಿಯೊಂದು ಯಾತ್ರಿಕರ ಅನುಕೂಲಕ್ಕಾಗಿ ದ್ವಿಚಕ್ರ ವಾಹನಗಳನ್ನು ಬಾಡಿಗೆಗೆ ಪಡೆದು ಒದಗಿಸುತ್ತಿದೆ ಎಂದು ಸ್ವಾಮೀಜಿ ಹೇಳಿದರು.
ಮೂಡಬಿದಿರೆಯ “ಎಲಿಕ್ಸಿರ್’ ಬ್ರ್ಯಾಂಡ್‌ನ ಎಸ್‌ಕೆಎಫ್ ನೀರು ಶುದ್ಧೀಕರಣ ಉತ್ಪಾದನಾ ಘಟಕ, ರಿವರ್ಸ್ ಓಸ್‌ಮೋಸಿಸ್‌ನ ನೀರು ಶುದ್ಧೀಕರಣ ಯಂತ್ರ ಅಳವಡಿಸಲ್ಪಟ್ಟ ತನ್ನ ಘಟಕಗಳನ್ನು ಶ್ರವಣ ಬೆಳಗೊಳ ಪಟ್ಟಣದಲ್ಲಿ ಸ್ಥಾಪಿಸಿದೆ.