Advertisement
ವೇಣೂರಿನ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಯ ಮಹಾಮಸ್ತಾ ಕಾಭೀಷೇಕದ ಆರನೇ ದಿನವಾದ ಮಂಗಳವಾರ ಯುಗಳ ಮುನಿಗಳಾದ ಪೂಜ್ಯ ಅಮೋಘಕೀರ್ತಿ ಮುನಿ ಮಹಾರಾಜರು ಮತ್ತು ಪೂಜ್ಯ ಅಮರಕೀರ್ತಿ ಮುನಿ ಮಹಾರಾಜರು ಉಪಸ್ಥಿತಿಯಲ್ಲಿ ನಡೆದ ಧಾರ್ಮಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
Related Articles
Advertisement
ಕೆ. ಹೇಮರಾಜ್ ಬೆಳ್ಳಿಬೀಡು ಸ್ವಾಗತಿಸಿ, ಸ್ಮಿತೇಶ್ ಪತ್ರಾವಳಿ ವಂದಿಸಿದರು. ಮಹಾವೀರ ಜೈನ್ ಮೂಡುಕೋಡಿಗುತ್ತು ನಿರ್ವಹಿಸಿದರು.
ಇಂದಿನ ಮಜ್ಜನ ಕಾರ್ಯಕ್ರಮಯುಗಳ ಮುನಿಶ್ರೀಗಳು, ಮೂಡುಬಿದಿರೆ ಜೈನ ಮಠದ ಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿ, ವರೂರು ಜೈನಮಠದ ಶ್ರೀ ಧರ್ಮಸೇನ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾ ಸ್ವಾಮೀಜಿ, ಶ್ರೀ ಕ್ಷೇತ್ರ ಕೊಲ್ಲಾಪುರ ಜೈನ ಮಠದ ಶ್ರೀ ಲಕ್ಷ್ಮೀಸೇನ ಭಟ್ಟಾರಕ ಭಟ್ಟಾಚಾರ್ಯವರ್ಯ ಅವರ ಪಾವನ ಸಾನ್ನಿಧ್ಯದಲ್ಲಿ ರೋಹಿಣಿ ಬಾವಂತಬೆಟ್ಟು ಮತ್ತು ಮಕ್ಕಳು, ಸೊಸೆ, ಅಳಿಯಂದಿರು ಹಾಗೂ ಮೊಮ್ಮಕ್ಕಳ ಸೇವಾರ್ಥ ನಿತ್ಯವಿಧಿ ಸಹಿತ ಯಾಗಮಂಡಲ, ಆರಾಧನೆ, ರಾಜ್ಯಾಭಿಷೇಕ, ರಾಜ್ಯಭಾರ, ಸಂಜೆ 4.05ರ ಕರ್ಕಾಟಕ ಲಗ್ನದಲ್ಲಿ ವೈರಾಗ್ಯಪೂರ್ವಕ ದೀಕ್ಷಾ ವಿಧಿ, ಕೇಶಲೋಚನಾ ವಿಧಿ, ಪರಿಷ್ಕರಣ ಕಲ್ಯಾಣ, ಆಗ್ರೋದಕ ಮೆರವಣಿಗೆ ನಡೆದು ಸಂಜೆ 216 ಕಲಶಗಳಿಂದ ಮಹಾಮಸ್ತಕಾಭಿಷೇಕ ಜರಗಲಿದೆ. ಇಂದಿನ ಧಾರ್ಮಿಕ ಸಭೆ ಕಾರ್ಯಕ್ರಮ
ಅಪರಾಹ್ನ 3ಕ್ಕೆ ಜರಗುವ ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ವಹಿಸಲಿದ್ದಾರೆ. ಮಂಗಳೂರು ನಗರದ ಪೊಲೀಸ್ ಆಯುಕ್ತ ಅನುಪಮ್ ಅಗರ್‌ವಾಲ್, ಚೆನ್ನೈಯ ಐಎಎಫ್ ಇದರ ಗ್ರೂಪ್ ಕ್ಯಾಪ್ಟನ್ ವೀರಚಕ್ರ ಅಭಿನಂದನ್ ವರ್ಧಮಾನ್, ಜೈಪುರದ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಉಮೇಶ ಭಂಡಾರಿ, ಬೆಂಗಳೂರು ಗ್ರೀನ್ ಚೆಫ್ ಸ್ಥಾಪಕಾಧ್ಯಕ್ಷ ಸುಖಲಾಲ್ ಜೈನ್, ಬೆಂಗಳೂರಿನ ಮೈಕ್ರೋ ಲ್ಯಾಬ್ ಅಧ್ಯಕ್ಷ ದಿಲೀಪ್ ಸುರಾನ್, ಉಜಿರೆ ಎಸ್‌ಡಿಎಂ ಸೊಸೈಟಿಯ ಪ್ರಾಜೆಕ್ಟ್ ಡೈರೆಕ್ಟರ್ ಶ್ರೇಯಸ್ ಕುಮಾರ್, ಉದ್ಯಮಿ ಕಿರಣ್ ಜೈನ್ ಆಹ್ವಾನಿತ ಗಣ್ಯರಾಗಿರುವರು, ಸೇವಾಕರ್ತರಾದ ಸ್ವಸ್ತಿಕ್ ಜೈನ್ ಭಾಗವಹಿಸಲಿದ್ದಾರೆ. ಪ್ರಾಧ್ಯಾಪಕಿ ಡಾ| ಪದ್ಮಿನಿ ನಾಗರಾಜ್ ಉಪನ್ಯಾಸ ನೀಡುವರು.ಸಂಜೆ ಸಂಗೀತ ಸುಧೆ, ಭರತನಾಟ್ಯ, ತುಳುನಾಡ ವೈಭವ ಇತ್ಯಾದಿ ಜರಗಲಿವೆ.