Advertisement

ಶರಣ ಸಾಹಿತ್ಯ ಪರಿಷತ್‌ನಿಂದ ಮಹಾಮನೆ ಕಾರ್ಯಕ್ರಮ

09:55 AM Jun 29, 2020 | Suhan S |

ಕಂಪ್ಲಿ: ಪಟ್ಟಣದ ತಾಲೂಕು ಶರಣ ಸಾಹಿತ್ಯ ಪರಿಷತ್‌ 119ನೇ ಮಹಾಮನೆ ಕಾರ್ಯಕ್ರಮ ಹಮ್ಮಿಕೊಂಡಿತ್ತು. ವಾಸವಿ ಅನುದಾನಿತ ಹಿ.ಪ್ರಾ ಶಾಲೆ ಮುಖ್ಯಗುರು ರಾಜು ಬಿಲಂಕರ್‌ “ಶರಣ ಸಾಹಿತ್ಯದ ಔಚಿತ್ಯತೆ’ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಜನಸಾಮಾನ್ಯರಿಗಾಗಿ ಸರಳ ಶೈಲಿಯಲ್ಲಿ ವಚನ ಸಾಹಿತ್ಯ ಸೃಷ್ಟಿಯಾಗುವ ಮೂಲಕ ಕನ್ನಡ ಸಾಹಿತ್ಯದ ವಿಶೇಷ ಸಾಹಿತ್ಯ ಪ್ರಕಾರವಾಗಿ ರೂಪುಗೊಂಡಿದೆ. ಶರಣರು ಎಲ್ಲ ಕಾಯಕಗಳನ್ನು ಸಮಾನ ಮತ್ತು ಶ್ರೇಷ್ಠವೆಂದು ಸಾರಿದ್ದಾರೆ. ಸ್ತ್ರೀ ಸಮಾನತೆ, ವೈಚಾರಿಕ ಪ್ರಜ್ಞೆ ಮೂಡಿಸುವ ಜತೆಗೆ ಮೌಡ್ಯ, ಅಸಮಾನತೆಯನ್ನು, ಶ್ರೇಣಿಕೃತ ಸಮಾಜ ವ್ಯವಸ್ಥೆ ವಿರೋ ಧಿಸುವಲ್ಲಿ ಶರಣರ ವಚನ ಸಾಹಿತ್ಯ ಗಟ್ಟಿ ನೆಲೆಯಾಗಿ ರೂಪುಗೊಂಡಿದೆ ಎಂದು ಹೇಳಿದರು.

Advertisement

ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಜಿ.ಪ್ರಕಾಶ್‌ ಅಧ್ಯಕ್ಷತೆ ವಹಿಸಿ ಮಾತನಾಡಿ, ವರ್ತಮಾನ ಜೀವನವು ಮಾನವೀಯತೆಯ ಮೌಲ್ಯಗಳಿಂದ ವಿಮುಖವಾಗುತ್ತಿದ್ದು, ಕೇವಲ ಭೋಗ ಜೀವನ ಪ್ರೇರೇಪಿಸುತ್ತದೆ ಎಂದು ಅಸಮಧಾನ ವ್ಯಕ್ತಪಡಿಸಿದರು.

ಪರಿಷತ್ತಿನ ಪದಾಧಿಕಾರಿ ಎಸ್‌ .ಡಿ.ಬಸವರಾಜ, ಶಿಕ್ಷಕಿ ಸಾಹಿತಿ ವೀರಮ್ಮ ನಾಗರಾಜ, ಬಂಗಿ ದೊಡ್ಡ ಮಂಜುನಾಥ, ಈರಪ್ಪ ಸೊರಟೂರು, ಬಸವರಾಜ, ಶ್ಯಾಂಸುಂದರರಾವ್‌ ಸೇರಿದಂತೆ ಅನೇಕರಿದ್ದರು. ಈರಪ್ಪ ಸೊರಟೂರು ನಿರೂಪಿಸಿದರು. ಯೋಗ ಗುರು ಬಸವರಾಜ ಸ್ವಾಗತಿಸಿದರು. ಶ್ಯಾಂಸುಂದರರಾವ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next