Advertisement

Mahalingpur; ದುಷ್ಕರ್ಮಿಗಳ ಅಟ್ಟಹಾಸಕ್ಕೆ ಕಮರಿದ ಶಬಾನಾಳ ಖಾಕಿ ಕನಸು

09:34 AM Jul 17, 2024 | Team Udayavani |

ಮಹಾಲಿಂಗಪುರ : ಮಂಗಳವಾರ ಸಮೀಪದ ರನ್ನಬೆಳಗಲಿ ಪಟ್ಟಣ ವ್ಯಾಪ್ತಿಯ ಪೆಂಡಾರಿ ತೋಟದಲ್ಲಿ ಜರುಗಿದ ಸಜೀವ ದಹನ ಪ್ರಕಣದಲ್ಲಿ ತಾಯಿಯೊಂದಿಗೆ ಸಜೀವ ದಹನವಾದ ಶಬಾನಾ ದಸ್ತಗೀರಸಾಬ ಪೆಂಡಾರಿ(29) ಅವರು ಮುಧೋಳದ ಎಸ್.ಆರ್.ಕಂಠಿ ಕಾಲೇಜಿನಲ್ಲಿ ಎಂಎ ಇಂಗ್ಲಿಷ್ ಅಂತಿಮ ಸೆಮಿಸ್ಟೆರ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದರು.

Advertisement

ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಬೇಕೆಂಬ ಇಚ್ಛೆಯುಳ್ಳ ಪ್ರತಿಭಾವಂತೆ ಶಬಾನಾ ಎರಡು ಬಾರಿ(402 ಮತ್ತು 545 ಹುದ್ದೆಗಳ ನೇಮಕಾತಿ) ಪೊಲೀಸ್ ದೈಹಿಕ ಪರೀಕ್ಷೆಯಲ್ಲಿ ಪಾಸಾಗಿದ್ದರು. ಕಳೆದ ಜನವರಿ 23 ರಂದು ಜರುಗಿದ 545 ಹುದ್ದೆಗಳ ನೇಮಕಾತಿಗಾಗಿ ನಡೆದ ಪಿಎಸ್‌ಐ ಮರುಪರೀಕ್ಷೆಯಲ್ಲಿ ಪರೀಕ್ಷೆ ಬರೆದಿದ್ದಾರೆ. ಮಾರ್ಚ್ 1, 2024 ರಂದು ಪ್ರಕಟವಾದ ತಾತ್ಕಾಲಿಕ ಅಂಕಪಟ್ಟಿಯಲ್ಲಿ (ರ.ನಂ : 382255095303 ) ಮೊದಲ ಪೇಪರ್‌ನಲ್ಲಿ 36 , ದ್ವಿತೀಯ ಪೇಪರನಲ್ಲಿ 49.125 ಅಂಕಗಳನ್ನು ಗಳಿಸಿದ್ದಾರೆ. ಆಯ್ಕೆಯ ಅರ್ಹತೆಯ ಅಂತಿಮ ಫಲಿತಾಂಶದ ನಿರೀಕ್ಷೆಯಲ್ಲಿದ್ದರು.

ಕಮರಿದ ಖಾಕಿ ಕನಸು
ವಿಧಿಯಾಟಕ್ಕೆ ಬಲಿಯಾಗಿ ತಾಯಿಯೊಂದಿಗೆ ಸಜೀವ ದಹನವಾಗುವ ಮೂಲಕ ಶಬಾಳ ಖಾಕಿ ಕನಸು ಕೌಟುಂಬಿಕ ದ್ವೇಷದ ದಳ್ಳುರಿಯಲ್ಲಿ ಸುಟ್ಟು ಕರಕಲಾಗಿದೆ. ತಾವೊಂದು ಬಗೆದರೆ ದೈವವೊಂದು ಬಗೆಯುತ್ತದೆ ಎಂಬ ಮಾತಿನಂತೆ ಪೊಲೀಸ್ ಇಲಾಖೆಗೆ ಸೇರಬೆಕೆಂಬ ಬಹುದೊಡ್ಡ ಕನಸು ಕಂಡಿದ್ದ ಅಲ್ಪಸಂಖ್ಯಾಕ ಯುವತಿಯೊಬ್ಬಳು ಈ ರೀತಿಯಾಗಿ ದಾರುಣ ಅಂತ್ಯವಾಗಿದ್ದು ಖೇದಕರ ಸಂಗತಿಯಾಗಿದೆ.

ಸಿನಿಮಾ ಮಾದರಿ ಹತ್ಯೆ
ನೀರು ತುಂಬಿಸುವ ಟ್ಯಾಂಕಿಯಲ್ಲಿ ಸುಮಾರು 100 ಲೀಟರ್‌ ಪೆಟ್ರೋಲ್‌ ತುಂಬಿಸಿ, ಪಂಪ್‌ ಮೂಲಕ ಇಡೀ ಗುಡಿಸಲಿಗೆ ಪೆಟ್ರೋಲ್‌ ಹಾಯಿಸಿ,
ಬೆಂಕಿ ಹಚ್ಚಿ ಇಬ್ಬರನ್ನು ಕೊಂದು ಹಾಕಿರುವ ಭೀಕರ ಘಟನೆ ರನ್ನಬೆಳಗಲಿಯ ಮಹಾಲಿಂಗಪುರ-ಅಕ್ಕಿಮರಡಿ ರಸ್ತೆಯ ಪೆಂಡಾರಿ ತೋಟದಲ್ಲಿ ಮಂಗಳವಾರ ಬೆಳಗಿನ ಜಾವ ನಡೆದಿತ್ತು.

Advertisement

ಸಿನೆಮಾದ ಮಾದರಿಯಲ್ಲಿ ನಡೆದ ಈ ಭೀಕರ ಕೃತ್ಯದಿಂದ ಶೆಡ್‌ನ‌ಲ್ಲಿದ್ದ ತಾಯಿ-ಮಗಳು ಸಜೀವ ದಹನವಾಗಿದ್ದರು. ಜೈಬಾನ ಪೆಂಡಾರಿ (55), ಶಬಾನಾ ಪೆಂಡಾರಿ ಸುಟ್ಟು ಕರಕಲಾಗಿದ್ದರು. ದಸ್ತಗಿರಿಸಾಬ್‌ ಪೆಂಡಾರಿ ಹಾಗೂ ಸುಭಾನ್‌ ಪೆಂಡಾರಿ ಗಂಭೀರವಾಗಿ ಗಾಯಗೊಂಡಿದ್ದಾರೆ.ಅವಘಡದಲ್ಲಿ ಸಿದ್ದಿಕಿ ಎಂಬಾತ ಬಚಾವಾಗಿದ್ದ.

ಚಂದ್ರಶೇಖರ ಮೋರೆ

Advertisement

Udayavani is now on Telegram. Click here to join our channel and stay updated with the latest news.

Next