Advertisement

Rathan Tata Era End: ಅಜ್ಜಿಯ ಆರೈಕೆಯಲ್ಲಿ ಬೆಳೆದ ರತನ್‌ ಟಾಟಾ

05:51 AM Oct 10, 2024 | Team Udayavani |

ರತನ್‌ ಟಾಟಾ ಅವರು 1937 ಡಿಸೆಂಬರ್‌ 28ರಂದು ಮುಂಬಯಿ ಯಲ್ಲಿ ಜನಿಸಿದರು. ತಂದೆ ನೇವಲ್‌ ಟಾಟಾ ಮತ್ತು ತಾಯಿ ಸೋನೂ ಟಾಟಾ. ಆದರೆ, ಟಾಟಾಗೆ 11 ವರ್ಷ ಇದ್ದಾಗಲೇ ತಂದೆ ತಾಯಿ ಇಬ್ಬರೂ ಬೇರ್ಪಟ್ಟರು. ಇಲ್ಲಿಂದಲೇ ಅವರ ಹೋರಾ ಟದ ಜೀವನ ಆರಂಭವಾಯಿತು. ಬಳಿಕ ಇವರು ಬೆಳೆ ದಿ ದ್ದು ಅಜ್ಜಿ ಲೇಡಿ ನವಾಜ್‌ಭಾಯಿ ಅವರ ಆಶ್ರಯದಲ್ಲಿ.

Advertisement

ಮುಂಬೈನ ಕ್ಯಾಂಪಿಯನ್‌ ಶಾಲೆಯಲ್ಲಿ ಓದು ಪೂರೈಸಿದ ರತನ್‌ ಅವರು, ಅಮೆರಿಕದ ಕಾರ್ನೆಲ್‌ ವಿಶ್ವವಿದ್ಯಾಲಯದಿಂದ ಆರ್ಕಿಟೆಕ್ಚರ್‌ ಆ್ಯಂಡ್‌ ಸ್ಟ್ರಕ್ಚರಲ್‌ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದರು. ಮುಂದೆ 1975ರಲ್ಲಿ ಹಾರ್ವರ್ಡ್‌ ಬಿಸಿನೆಸ್‌ ಸ್ಕೂಲ್‌ನಲ್ಲಿ ಅಡ್ವಾನ್ಸ್‌$x ಮ್ಯಾನೇಜ್‌ಮೆಂಟ್‌ ಪ್ರೋಗ್ರಾಮ್‌ ಪೂರ್ತಿಗೊಳಿಸಿದರು.

ಅಮೆರಿಕದಲ್ಲಿ ವಿದ್ಯಾಭ್ಯಾಸ ಪೂರೈಸಿ ಭಾರತಕ್ಕೆ ವಾಪಸ್‌ ಆದ ಬಳಿಕ ರತನ್‌ ಟಾಟಾ ಅವರು 1962ರಲ್ಲಿ ಟಾಟಾ ಕಂಪನಿಯನ್ನು ಸೇರಿಕೊಂಡರು. ಟಾಟಾ ಸ್ಟೀಲ್‌ನಲ್ಲಿ ಶಾಪ್‌ ಫ್ಲೋರ್‌ನಲ್ಲಿ ಕಾರ್ಮಿಕರ ಜತೆ ಕೆಲಸವನ್ನು ಶುರು ಮಾಡಿದರು. ಮುಂದೆ 1971ರಲ್ಲಿ ಅವರನ್ನು ನ್ಯಾಷನಲ್‌ ರೆಡಿಯೋ ಮತ್ತು ಎಲೆಕ್ಟ್ರಾನಿಕ್ಸ್‌ ಲಿ.(ನೆಲ್ಕೋ) ಕಂಪನಿಯ ನಿರ್ದೇಶಕರನ್ನಾಗಿ ನೇಮಿಸಲಾಯಿತು ಮತ್ತು ಗ್ರಾಹಕ ಬಳಕೆಯ ಎಲೆಕ್ಟ್ರಾನಿಕ್‌ ವಿಭಾಗದ ಉಸ್ತುವಾರಿಯನ್ನು ನೀಡಲಾಯಿತು.

1991ರಲ್ಲಿ ಅವರು ಟಾಟಾ ಸನ್ಸ್‌ ಮತ್ತು ಟಾಟಾ ಗ್ರೂಪ್‌ ಚೇರ್ಮನ್ನರಾಗಿ ನೇಮಕ ಮಾಡಲಾಯಿತು. ಭಾರತವು ಉದಾರೀಕರಣಕ್ಕೆ ತೆರೆದುಕೊಳ್ಳುವ ಹಂತದಲ್ಲಿ ಕಂಪನಿಯ ನೇತೃತ್ವವನ್ನು ವಹಿಸಿಕೊಂಡರು. 1998ರಲ್ಲಿ ಟಾಟಾ ಇಂಡಿಕಾ ಕಾರು ಮೂಲಕ ಅವರು ಮೊದಲ ಯಶಸ್ಸು ಸಾಧಿಸಿದರು. 2004ರಲ್ಲಿ ಟಾಟಾ ಕನ್ಸಲ್ಟೆನ್ಸಿ(ಟಿಸಿಎಸ್‌) ಷೇರುಪೇಟೆಗೆ ಪರಿಚಯಿಸಿ ಅದನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದರು. ಹೀಗೆ ಒಂದೊಂದಾಗಿ ಕಂಪನಿಯ ಎಲ್ಲ ವಿಭಾಗಗಳನ್ನು ಉನ್ನತ ಹಂತಕ್ಕೆ ತೆಗೆದುಕೊಂಡು ಹೋದರು. ಅವರ ದೂರದೃಷ್ಟಿಯ ಕಾರಣಕ್ಕೆ ಇದೆಲ್ಲವೂ ಸಾಧ್ಯವಾಯಿತು.

Advertisement

ಉದ್ಯಮದ ಜತೆಗೆ ಮೌಲ್ಯ ಬೆಳೆಸಿದರು!
ಉದ್ಯಮಿಗಳಲ್ಲಿ ಭಿನ್ನವಾಗಿ ನಿಲ್ಲುವ ದಾನ ಶೂರ ಕಂಪೆನಿ ಯಶಸ್ಸಿನ ಉತ್ತುಂಗಕ್ಕೆ ಕೊಂಡೊಯ್ದರು

ಟಾಟಾ ಸಂಸ್ಥೆಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವುದರ ಜತೆಗೆ ಉದ್ಯಮದಲ್ಲಿ ಮೌಲ್ಯಗಳನ್ನು ಬೆಳೆಸಿದ ಕೀರ್ತಿ ರತನ್‌ ನೇವಲ್‌ ಟಾಟಾ ಅವರಿಗೆ ಸಲ್ಲುತ್ತದೆ. ಭಾರತದಲ್ಲಿ ಸಾಕಷ್ಟು ಉದ್ಯಮಪತಿಗಳು, ಆಗರ್ಭ ಶ್ರೀಮಂತರಿದ್ದಾರೆ. ಆದರೆ ಜನಸಾಮಾನ್ಯರೂ ನೆನಪಿಸಿಕೊಳ್ಳುವವರ ಪೈಕಿ ರತನ್‌ ಟಾಟಾ ಮೊದಲಿಗರಾಗಿದ್ದಾರೆ. ರತನ್‌ ಟಾಟಾ ಅವರ ಯೋಜನೆಗಳು, ಉದ್ಯಮದ ನೀತಿಗಳು ಕೇವಲ ಲಾಭಕ್ಕೆ ಮಾತ್ರವೇ ಸೀಮಿತವಾಗಿರಲಿಲ್ಲ.

ಜತೆಗೆ, ಸಮಾಜಕ್ಕೆ ಯಾವ ರೀತಿ ಕೊಡುಗೆಯಾಗಬಲ್ಲುದು ಎಂಬುದಕ್ಕೆ ಉದಾಹರಣೆಯಾಗಿರುತ್ತಿದ್ದವು. ಇದಕ್ಕೆ ಅತ್ಯುತ್ತಮ ನ್ಯಾನೋ ಕಾರ್‌. ಕೇವಲ 1 ಲಕ್ಷ ರೂ.ಗೆ ಕಾರು ನೀಡುವ ಕಲ್ಪನೆಯೇ ಅದ್ಭುತ. ಇದರ ಹಿಂದೆ ಇದ್ದದ್ದು, ಬೈಕ್‌ ಮೇಲೆ ಹೋಗುವವರು ಸುರಕ್ಷಿತವಾಗಿ ಕಾರಲ್ಲಿ ಹೋಗಲಿ ಎಂಬ ಕಳಕಳಿ! ಈ ವಿಷಯವನ್ನು ಸ್ವತಃ ಅವರೇ ಬಹಿರಂಗ ಪಡಿಸಿದ್ದರು ಕೂಡ. ಇದು ಕೇವಲ ಉದಾಹರಣೆಯಷ್ಟೇ. ಅವರ ಹಲವು ನೀತಿ ಮತ್ತು ಅವುಗಳ ಜಾರಿಯಲ್ಲಿ ಇಂಥದೊಂದು ಸಾಮಾಜಿಕ ಜವಾಬ್ದಾರಿಯನ್ನು ನಾವು ಗುರುತಿಸಬಹುದಾಗಿದೆ. 1991ರಲ್ಲಿ ಟಾಟಾ ಗ್ರೂಪ್‌ ಚೇರ್ಮನ್ನರಾದರು.

ಆ ಬಳಿಕ, ಟಾಟಾ ಕಂಪೆನಿಯು ಸಾಕಷ್ಟು ಉನ್ನತಿಯನ್ನು ಸಾಧಿಸಿತು. ರತನ್‌ ಟಾಟಾ ಅವಧಿಯಲ್ಲಿ ಟೆಟ್ಲೀ, ಜಾಗ್ವಾರ್‌ ಮತ್ತು ರೋವರ್‌, ಕೋರುಸ್‌ನಂಥ ಕಂಪೆನಿಗಳನ್ನು ಸ್ವಾಧೀನ ಮಾಡಿಕೊಳ್ಳಲಾಯಿತು. ಭಾರತ ಕೇಂದ್ರಿತ ಟಾಟಾವನ್ನು ಬಹು ರಾಷ್ಟ್ರೀಯ ಕಂಪೆನಿಯನ್ನಾಗಿ ರೂಪಿಸುವುದರಲ್ಲಿ ಅವರು ಯಶಸ್ವಿಯಾದರು. ಉದ್ಯಮಿಯಾಗಿ ರತನ್‌ ಟಾಟಾ ಭಿನ್ನವಾಗಿ ನಿಲ್ಲಲು ಇನ್ನೂ ಒಂದು ಕಾರಣವಿದೆ.

ತಮ್ಮ ಒಟ್ಟು ಆದಾಯದ ಪೈಕಿ ಶೇ. 60ರಿಂದ 65ರಷ್ಟು ಸಂಪತ್ತನ್ನು ದಾನ ಮಾಡಿ ಇತರರಿಗೆ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ. ಜತೆಗೆ, ಸಾಕಷ್ಟು ನವೋದ್ಯಮಗಳನ್ನು ಬೆಳೆಸುವಲ್ಲಿ ಹೂಡಿಕೆ ಮಾಡಿದ್ದಾರೆ. ಹೆಚ್ಚು ಕಡಿಮೆ ಈವರೆಗೆ 30 ಸ್ಟಾರ್ಟ್‌ಅಪ್‌ಗ್ಳಲ್ಲಿ ರತನ್‌ ಟಾಟಾ ಹಣ ಹೂಡಿದ್ದಾರೆ. ಇದು ಅವರ ಹೊಸ ಐಡಿಯಾಗಳನ್ನು ಉತ್ತೇಜಿಸುವುದಕ್ಕೆ ಉದಾಹರಣೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next