Advertisement

Kanahosahalli: ಹೋಬಳಿಯಾದ್ಯಂತ ಭಾರಿ ಮಳೆ; ಹಳ್ಳದಲ್ಲಿ ಕೊಚ್ಚಿಹೋದ ಮಿನಿ ಲಾರಿ

10:22 AM Oct 05, 2024 | Team Udayavani |

ಕಾನಾಹೊಸಹಳ್ಳಿ (ವಿಜಯನಗರ): ಕಾನಾಹೊಸಹಳ್ಳಿ, ಹುಲಿಕೆರೆ, ಬಯಲ ತುಂಬರಗುದ್ದೆ, ಕಾನಾಮಡುಗು, ಆಲೂರು, ಹಿರೇಕುಂಬಳಗುಂಟೆ, ಇಮಡಾಪುರ, ಸೇರಿದಂತೆ ಹೋಬಳಿಯಾದ್ಯಂತ ಆ.4ರ ಶುಕ್ರವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತಗೊಂಡಿದೆ.

Advertisement

ಪಿಚಾರಹಟ್ಟಿಯಿಂದ ಕೆಂಚಮಲ್ಲನಹಳ್ಳಿ ಮಾರ್ಗವಾಗಿ ಚಿತ್ರದುರ್ಗಕ್ಕೆ ಕೂಲಿ ಕಾರ್ಮಿಕರನ್ನು ಕರೆದುಕೊಂಡು ಹೋಗುತ್ತಿದ್ದ ಮಿನಿ ಗೂಡ್ಸ್‌ ವಾಹನವೊಂದು ಪಿಚಾರಹಟ್ಟಿ ಹೊರಹೊಲಯದ ಹಳ್ಳ ದಾಟುವ ಸಂದರ್ಭದಲ್ಲಿ ಕೊಚ್ಚಿ ಹೋಗಿದ ಘಟನೆ ನಡೆಯಿತು.

ಮಿನಿ ಗೂಡ್ಸ್‌ ಚಾಲಕ ದಾದಪಿರ್ ವಾಹನ ಚಲಾಯಿಸುತ್ತಿದ್ದು, ಆತನ ಸಮಯಪ್ರಜ್ಞೆಯಿಂದ ವಾಹನದಲ್ಲಿದ್ದ 10ಕ್ಕೂ ಹೆಚ್ಚು ಜನರನ್ನು ಕೆಳಗಡೆ ಇಳಿಸಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಉಳಿದಂತೆ ಕಾನಾಹೊಸಹಳ್ಳಿಯಲ್ಲಿನ ಗುಜುರಿ ಅಂಗಡಿಗೆ ನೀರು ನುಗ್ಗಿ, ಗುಜರಿ ಕಬ್ಬಿಣದ ಚೀಲಗಳು ಬಸ್  ನಿಲ್ದಾಣಕ್ಕೆ ಬಂದಿವೆ.

Advertisement

ರಾಷ್ಟ್ರೀಯ ಹೆದ್ದಾರಿ 50ರ ದಲಿತ ಕಾಲೋನಿಯ ಸರ್ವೀಸ್ ರಸ್ತೆಯಲ್ಲಿ ನೀರು ನಿಂತು ವಾಹನ ಸಂಚಾರ ಬಂದ್ ಆಗಿದೆ. ಸಿದ್ದಾಪುರದ ದೊಡ್ಡಹಳ್ಳ, ಹುಡೇಂ, ತಾಯಕನಹಳ್ಳಿಯ ಚಿನ್ನಹಗರಿ ತುಂಬಿ ಹರಿಯುತ್ತಿದೆ ಹಾಗೂ ಹುಲಿಕೆರೆ, ಕಾನಾಹೊಸಹಳ್ಳಿ ಕೆರೆಗಳಿಗೆ ಅರ್ಧದಷ್ಟು ನೀರು ಬಂದಿದ್ದು ಮತ್ತಷ್ಟು ನೀರು ಹರಿದು ಬರುತ್ತಿದೆ.

ಅನೇಕ ಮನೆಗಳಿಗೆ ನೀರು ನುಗ್ಗಿದ್ದು, ರೈತರು ಬೆಳೆದ ಮೆಕ್ಕೆಜೋಳ ಹಾಗೂ ಸಜ್ಜೆ, ಸೂರ್ಯಕಾಂತಿ ಬೆಳೆಗಳಿಗೆ ಹಾನಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next