Advertisement

ಕಾಮಗಾರಿಗಾಗಿ ಉರುಳಿದ ಮಹಾಲಿಂಗೇಶ್ವರ ಪ್ರವೇಶ ದ್ವಾರ

08:14 PM Apr 23, 2020 | Sriram |

ಪಡುಬಿದ್ರಿ: ನೆನೆಗುದಿಗೆ ಬಿದ್ದದ್ದ ಪಡುಬಿದ್ರಿ ಸರ್ವಿಸ್‌ ರಸ್ತೆ ಕಾಮಗಾರಿಗೆ ಇದೀಗ ವೇಗ ದೊರೆತಿದ್ದು, ಇದಕ್ಕಾಗಿ ಸುಮಾರು 35 ವರ್ಷ ಹಳೆಯದಾದ ಪಡುಬಿದ್ರಿಯ ದಿ| ಅಣ್ಣಾಜಿ ರಾಯರು ನಿರ್ಮಿಸಿಕೊಟ್ಟಿದ್ದ ಶ್ರೀ ಮಹಾಲಿಂಗೇಶ್ವರ ಪ್ರವೇಶ ದ್ವಾರವನ್ನು ಎ. 23ರಂದು ಕೆಡವಲಾಗಿದೆ.

Advertisement

ಕಳೆದ ವಾರವಷ್ಟೇ ಪಶ್ಚಿಮ ಬದಿಯ ಮೆಟಲಿಂಗ್‌ ವರ್ಕ್‌ ಮುಗಿದಿದೆ. ಸುಮರು 2 ವರ್ಷಗಳ ಹಿಂದೆ ಚತುಃಷ್ಪಥ ಕಾಮಗಾರಿ ಮುಗಿದ ತತ್‌ಕ್ಷಣ ಜೆಲ್ಲಿ ಹೊದೆಸಿದ್ದ ಹೆದ್ದಾರಿಯ ಪೂರ್ವ ಬದಿಯ ಸರ್ವಿಸ್‌ ರಸ್ತೆಗೆ ಇನ್ನೂ ಡಾಮರೀಕರಣಗೊಳ್ಳುವ ಭಾಗ್ಯ ಲಭಿಸಿಲ್ಲ. ಒಳಚರಂಡಿ ಕಾಮಗಾರಿಗಳೂ ಇನ್ನೂ ಅಸಮರ್ಪಕವಾಗಿವೆ.

ಈ ಕಾಮಗಾರಿಗಳ ಕುರಿತಾಗಿ ನವಯುಗ ನಿರ್ಮಾಣ ಕಂಪೆನಿ ಹಿಂದಿನಿಂದಲೂ ನಿರ್ಲಕ್ಷ್ಯವನ್ನೇ ಪ್ರದರ್ಶಿಸುತ್ತಾ ಬಂದಿದೆ. ಅಲ್ಲಲ್ಲಿ ಒಳಚರಂಡಿಯ ಕಾಂಕ್ರೀಟ್‌ ಹೊದಿಕೆಗಳು ಚರಂಡಿಯ ಒಳಗೂ ಬಿದ್ದಿವೆ. ಕಬ್ಬಿಣದ ಸರಳುಗಳೂ ಅಪಾಯಕಾರಿ ಸ್ಥಿತಿಯಲ್ಲಿವೆ. ಜಿಲ್ಲಾಡಳಿತವು ಇದರ ಸಕ್ಷಮ ಉಸ್ತುವಾರಿ ನಿರ್ವಹಿಸದಿದ್ದಲ್ಲಿ ಅರೆಬರೆಯಾಗಿಯೇ ಎಲ್ಲವನ್ನೂ ಮುಗಿಸಿ ಕಾಲ್ಕಿಳಬಹುದಾಗಿಯೂ ಜನತೆ ಆರೋಪಿಸುತ್ತಿವೆ. ಹೆದ್ದಾರಿ ಮತ್ತು ಸರ್ವಿಸ್‌ ರಸ್ತೆ ಕಾಮಗಾರಿಗಳು ಪೂರ್ಣಗೊಂಡಾಗಲಷ್ಟೇ ಹೆದ್ದಾರಿಯಲ್ಲಿ ಈಗಾಗಲೇ ನೆಟ್ಟಿರುವ ವಿದ್ಯುತ್‌ದೀಪಗಳು ಉರಿಯಬಹುದಾಗಿದೆ. ಆ ಬಳಿಕ ಇನ್ನಷ್ಟು ಟೋಲ್‌ ದರ ಏರಿಕೆಯೊಂದಿಗೆ ಉಡುಪಿ ಜಿಲ್ಲೆಯ ಈ ಭಾಗವನ್ನು ಹಾದುಹೋಗುವ ವಾಹನಗಳ ಮಾಲಕರಿಗೆ ಮತ್ತಷ್ಟು ಬರೆ ಬೀಳಲಿದೆ.

ನವಯುಗ ಕಾಮಗಾರಿಗಳ ಕುರಿತಾಗಿ ಸದ್ಯ ಆಂಧ್ರದಲ್ಲಿದ್ದುಕೊಂಡೇ ಕಾಮಗಾರಿಗಳ ಉಸ್ತುವಾರಿ ನಿರ್ವಹಿಸುತ್ತಿರುವ ನವಯುಗ ಚೀಫ್‌ಎಂಜಿನಿಯರ್‌ ಶಂಕರ್‌ ರಾವ್‌ಅವರನ್ನು ಮಾತನಾಡಿಸಿದಾಗ ಸದ್ಯ ಮೆಟಲಿಂಗ್‌ ಕಾಮಗಾರಿ ಪೂರ್ಣಗೊಂಡಿದೆ. ಒಳಚರಂಡಿ ಕಾಮಗಾರಿ ಹಾಗೂ ಡಾಮರೀಕರಣ ಕಾರ್ಯಗಳಿಗೆ ಕಾರ್ಮಿಕರ ಕೊರತೆ ತಮ್ಮನ್ನು ಬಾಧಿಸುತ್ತಿದೆ. ಪಶ್ಚಿಮ ಬಂಗಾಲ ಮುಂತಾದೆಡೆಗಳಿಂದ ಕಾರ್ಮಿಕರನ್ನು ಕರೆಸಿಕೊಳ್ಳಲು ಸದ್ಯ ಕೋವಿಡ್ 19 ಮಹಾಮಾರಿ ಅಡೆತಡೆಯಾಗಿದೆ. ತಿಂಗಳಾಂತ್ಯದಲ್ಲಿ ಡಾಮರೀಕರಣದ ಕಾರ್ಯವನ್ನು ಆರಂಭಿಸುವುದಾಗಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next