Advertisement

ವರದಿ ಪ್ರಸಾರವಾಗುತ್ತಿದ್ದಂತೆ ಪುರಸಭೆ ಆಡಳಿತ ಮಂಡಳಿಯ ಪಟ್ಟಿಯಲ್ಲಿ ಅಧ್ಯಕ್ಷರ ಹೆಸರು ದಾಖಲು

03:09 PM Nov 02, 2022 | Team Udayavani |

ಮಹಾಲಿಂಗಪುರ: ಪುರಸಭೆಯ ಹಾಲಿ ಅಧ್ಯಕ್ಷ ಬಸವರಾಜ ಹಿಟ್ಟಿನಮಠ ಅವರು ಅಧ್ಯಕ್ಷರಾಗಿ ಮೂರುವರೆ ತಿಂಗಳುಗಳೇ ಕಳೆದರೂ ಸಹ ಪುರಸಭೆಯ ಮುಖ್ಯಾಧಿಕಾರಿಗಳು ಸೇರಿದಂತೆ ಅಲ್ಲಿನ ಅಧಿಕಾರಿಗಳು ಮತ್ತು ಸಿಬ್ಬಂದಿ ಅಲಕ್ಷ್ಯದಿಂದಾಗಿ ಪುರಸಭೆಯ ಆಡಳಿತ ಮಂಡಳಿ ಮಾಹಿತಿ ಫಲಕದಲ್ಲಿ ನೂತನ ಅಧ್ಯಕ್ಷರ ಹೆಸರನ್ನು ಬರೆದಿರಲಿಲ್ಲ. ಈ ಕುರಿತು ಬುಧವಾರ ಮುಂಜಾನೆ ಉದಯವಾಣಿ ಡಿಜಿಟಲ್ ನಲ್ಲಿ ವರದಿ ಪ್ರಕಟಿಸುತ್ತಿದ್ದಂತೆ ಎಚ್ಚೆತ್ತ ಪುರಸಭೆ ಅಧಿಕಾರಿಗಳು ಮತ್ತು ಸಿಬ್ಬಂದಿಯು ಪೆಂಟರ್ ಅವರನ್ನು ಕರೆಸಿ, ಹಿಂದಿನ ಅಧ್ಯಕ್ಷರ ಹೆಸರಿನ ಮೇಲೆ ಅಂಟಿಸಿದ್ದ ಬಿಳಿಕಾಗದ ತೆಗೆದು, ಮಾಜಿ ಅಧ್ಯಕ್ಷರ ಹೆಸರು ತೆಗೆದು ನೂತನ ಅಧ್ಯಕ್ಷರ ಹೆಸರು ಬರೆಸಿದರು.

Advertisement

ಈ ಕುರಿತು ಪ್ರತಿಕ್ರೀಯಿಸಿದ ಪುರಸಭೆಯ ಮುಖ್ಯಾಧಿಕಾರಿ ಜೆ.ಎಸ್.ಈಟಿ ಅವರು ಉದಯವಾಣಿ ಪ್ರತಿನಿಧಿಯೊಂದಿಗೆ ಮಾತನಾಡಿ ನಜರಚೂಕಿಯಿಂದ ಪುರಸಭೆ ಆಡಳಿತ ಮಂಡಳಿ ಸದಸ್ಯರ ಪಟ್ಟಿಯಲ್ಲಿ ನೂತನ ಅಧ್ಯಕ್ಷರ ಹೆಸರು ಬರೆಯುವದು ವಿಳಂಬವಾಗಿತ್ತು. ಈಗ ನೂತನ ಅಧ್ಯಕ್ಷರ ಹೆಸರು ಬರೆಸಲಾಗಿದೆ. ವರದಿ ಮೂಲಕ ನಮ್ಮನ್ನು ಎಚ್ಚರಿಸಿದ ಉದಯವಾಣಿ ಪತ್ರಿಕೆಗೆ ಧನ್ಯವಾದಗಳನ್ನು ತಿಳಿಸಿದರು.

ಇದನ್ನೂ ಓದಿ : ಗೆಹ್ಲೋಟ್ ಕೂಡಾ ಗುಲಾಂ ನಬಿ ಆಜಾದ್ ಹಾದಿ ಹಿಡಿಯಬಹುದು: ಪ್ರಧಾನಿ ಹೊಗಳಿಕೆಗೆ ಪೈಲಟ್…

 

Advertisement

Udayavani is now on Telegram. Click here to join our channel and stay updated with the latest news.

Next