Advertisement
ಬೆಂಗಳೂರು ಟೇಕ್ವಾಂಡೋ ಅಸೋಷಿಯೇಷನ್, ಸ್ಪೋರ್ಟ್ಸ ಅಥಾರಿಟಿ ಆಫ್ ಇಂಡಿಯಾ, ಕರ್ನಾಟಕಾ ಓಲಂಪಿಕ್ ಅಸೋಷಿಯೇಷನ್ ಅವರ ಸಹಯೋಗದಲ್ಲಿ ಪ್ರತಿವರ್ಷ ಬೆಂಗಳೂರಿನಲ್ಲಿ ನಡೆಯುವ ಈ ಕ್ರೇಡೆಗಳು ಇದೀಗ ಅತ್ಯಂತ ಜನಪ್ರೀಯತೆಯನ್ನು ಪಡೆದುಕೊಳ್ಳುತ್ತಿರುವದು ವಿಶೇಷವಾಗಿದೆ.
Related Articles
Advertisement
ಇದನ್ನೂ ಓದಿ : 1050 ಖಾಸಗಿ ಫೈನಾನ್ಸ್: ಅಕ್ರಮ ಬಡ್ಡಿ ಕಾಟ ತಪ್ಪಿಸಲು ಸೌಹಾರ್ದ ಕ್ಷೇತ್ರ ಬೆಳೆಸಿ
ದಿಯಾ ಟೇಕ್ವಾಂಡೋದಲ್ಲಿರುವ ಎರಡು ರೀತಿಯ ಸಮರಕಲೆಗಳಲ್ಲಿ ಕಿಯೋರುಗಿ ಕಲೆಯನ್ನು ಕರಗತ ಮಾಡಿಕೊಂಡಿದ್ದಾಳೆ. ಮುಧೋಳದ ಸಾಯಿನಿಕೇತನ ಶಾಲೆಯಲ್ಲಿ5 ನೇ ತರಗತಿಯಲ್ಲಿ ಓದುತ್ತಿರುವ ದಿಯಾ ಪೂಜಾರಿ ಸ್ಥಳೀಯ ಆರ್ ಎಂ ಜಿ ಕಾಲೇಜು ಪಕ್ಕದಲ್ಲಿರುವ ಸ್ಪೋರ್ಟ್ಸ ಕ್ಲಬ್ ನಲ್ಲಿ ಕಲಿಸುವ ಟೇಕ್ವಾಂಡೋ ಕ್ರೀಡೆಯ ತರಬೇತಿ ಪಡೆಯುತ್ತಿದ್ದು, ಇವರಿಗೆ ಅನೀಲ ಮುನವಳ್ಳಿ, ಸಚಿನ್ ಜಾದವ್, ಮನೋಜ ಇವರು ತರಬೇತುದಾರರಾಗಿದ್ದಾರೆ. ಮುಧೋಳ ರನ್ನನ ಮುಖಾಂತರ ಸಾಹಿತ್ಯಕವಾಗಿ ಹೆಸರುವಾಸಿಯಾದರೆ, ಇಲ್ಲಿನ ಘೋರ್ಪಡೆ ಮಹಾರಾಜರು ಬೆಳೆಸಿದ ವಿಶೇಷ ಬೇಟೆನಾಯಿ ತಳಿ ಇದೀಗ ಭಾರತೀಯ ಸೇನೆಯಲ್ಲಿ ಸೇರ್ಪಡೆಗೊಂಡು ಮುಧೋಳದ ಕೀರ್ತಿ ಹೆಚ್ಚಿಸಿದೆ, ಇಲ್ಲಿನ ಕುಸ್ತಿ ಪಟುಗಳು ದೇಶ ವಿದೇಶಗಳಲ್ಲಿ ಆಡಿ ಮುಧೋಳ ಶಕ್ತಿಪ್ರದರ್ಶನದಲ್ಲೂ ಹಿಂದೆ ಬಿದ್ದಿಲ್ಲ ಎಂದು ಸಾಬೀತು ಪಡಿಸಿದ್ದಾರೆ. ಇದೀಗ ವಿದೇಶ ಯುದ್ಧ ಅಥವಾ ಸಮರ ಕಲೆ, ಸ್ವಯಂ ರಕ್ಷಣೆಗೋಸ್ಕರ ಆಡುವ ಟೇಕ್ವಾಂಡೋ ದಲ್ಲಿ ದಿಯಾಳಂಥ ಪ್ರತಿಭೆಗಳು ಚಾಂಪಿಯನ್ ಳಾಗಿ ಹೊರಹೊಮ್ಮುತ್ತಿರುವದು ಮತ್ತಷ್ಟು ಹೆಮ್ಮೆಪಡುವಂಥ ವಿಷಯವಾಗಿದೆ.