Advertisement

Mahalingapur: ಆಧುನಿಕತೆಯಲ್ಲಿ ಮೂಲ ಸಂಸ್ಕೃತಿ ಮರೆಯಬೇಡಿ

05:45 PM Oct 19, 2023 | Team Udayavani |

ಮಹಾಲಿಂಗಪುರ: ಮಹಿಳೆಯರು ಆಧುನಿಕತೆ ಹೆಸರಿನಲ್ಲಿ ದೇಶದ ಮೂಲ ಸಂಸ್ಕೃತಿ ಮರೆಯಬೇಡಿ ಎಂದು ಸಿದ್ಧಾರೂಢ
ಬ್ರಹ್ಮವಿದ್ಯಾಶ್ರಮದ ಸಹಜಾನಂದ ಸ್ವಾಮೀಜಿ ಸಲಹೆ ನೀಡಿದರು.

Advertisement

ಬನಶಂಕರಿ ದೇವಸ್ಥಾನದಲ್ಲಿ ನಡೆಯುತ್ತಿರುವ ನವರಾತ್ರಿ ದೇವಿ ಪುರಾಣದ ಮೂರನೇ ದಿನ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದ ಅವರು, ಅರಿಶಿಣ-ಕುಂಕುಮ, ಕಾಲುಂಗರ, ಬಳೆ, ತಾಳಿ, ರೇಷ್ಮೆ ಸೀರೆಗಳು ಮುತ್ತೈದೆಯರಿಗೆ ಸೌಭಾಗ್ಯದ ಭೂಷಣಗಳಾಗಿವೆ. ಮುಖ್ಯವಾಗಿ ಅವುಗಳಿಗೆ ಅಷ್ಟೇ ಮಹತ್ವವಾದ ಧಾರ್ಮಿಕ ಹಿನ್ನೆಲೆ ಇರುವ ಕಾರಣ, ಸಾಂಪ್ರದಾಯಿಕ ಉಡುಗೆ-ತೊಡುಗೆಗಳನ್ನು ಹೆಚ್ಚಾಗಿ ಬಳಸುವ ಮೂಲಕ ಭಾರತೀಯ ಸಂಸ್ಕೃತಿ ಉಳಿಸಿ ಬೆಳೆಸಬೇಕಾಗಿದೆ ಎಂದರು.

ರನ್ನಬೆಳಗಲಿಯ ಮಹಾಲಿಂಗಶಾಸ್ತ್ರಿ ಯವರು ದೇವಿಯ ಪುರಾಣ ಆಧರಿಸಿ ಪ್ರವಚನ ನೀಡಿ ಮನುಷ್ಯನಿಗೆ ಅಹಂ ಇರಬಾರದು.
ತಂದೆ-ತಾಯಿ, ಗುರುಹಿರಿಯರು, ಸತ್ಸಂಗ, ದೇವರು, ಆಧ್ಯಾತ್ಮದತ್ತ ಒಲವು ಹೊಂದಿ, ಸದಾ ಸದಾಚಾರಿಗಳಾಗಿ ಬದುಕಿ ಜೀವನ
ಸಾರ್ಥಕ ಮಾಡಿಕೊಳ್ಳಬೇಕು ಎಂದರು.

ಮೂರನೇ ದಿನದ ನವರಾತ್ರಿ ಉತ್ಸವದಲ್ಲಿ ಮೇದಾರ, ಮಾಳಿ, ಭೋವಿ ಸಮಾಜಗಳ ಹಿರಿಯರು-ಯುವಕರು ಭಾಗವಹಿಸಿ ದೇವಿ
ಬೆಳ್ಳಿಮೂರ್ತಿಗೆ ಪೂಜೆ ಸಲ್ಲಿಸಿದರು. ಹೆಸ್ಕಾಂ ಅಧಿ ಕಾರಿ ರಾಜೇಶ ಬಾಗೋಜಿ, ಪ್ರಸಾದ ದಾನಿಗಳಾದ ಕಿರಗಟಗಿ ಸಹೋದರರನ್ನು
ಸನ್ಮಾನಿಸಲಾಯಿತು.

ದಾಖಲೆಯ ಕುಂಕುಮಾರ್ಚನೆ: ನವರಾತ್ರಿಯ ಮಂಗಳವಾರದ ನಿಮಿತ್ತ ಶ್ರೀ ಅನ್ನಪೂರ್ಣೇಶ್ವರಿ ನೇಕಾರ ಮಹಿಳಾ ಸಂಘದಿಂದ
ಬನಶಂಕರಿ ದೇವಸ್ಥಾನದಲ್ಲಿ ಏಕಕಾಲಕ್ಕೆ 5 ಸಾವಿರಕ್ಕಿಂತ ಅಧಿ ಕ ಮಹಿಳೆಯರು ದೇವಿಗೆ ಕುಂಕುಮಾರ್ಚನೆ ನಡೆಸಿದ್ದು, ರಾಜ್ಯದ
ಇತಿಹಾಸದಲ್ಲಿಯೇ ಮೊದಲ ಪ್ರಯತ್ನವಾಗಿದೆ ಎಂದು ಮಹಾಲಿಂಗ ಶಾಸ್ತ್ರಿಯವರು ಹರ್ಷವ್ಯಕ್ತಪಡಿಸಿದರು.

Advertisement

ಪ್ರವಚನದ ನಂತರ ದಸರಾ ಸಾಂಸ್ಕೃತಿಕ ಉತ್ಸವದಲ್ಲಿ ಪಟ್ಟಣದ ವಿ.ಕೆ.ಡಾನ್ಸ್‌ ಮತ್ತು ಫಿಟ್‌ನೆಸ್‌ ಅಕಾಡೆಮಿ ತಂಡದಿಂದ ನವಶಕ್ತಿವೈಭವ ನೃತ್ಯ ಕಾರ್ಯಕ್ರಮಗಳು ಜರುಗಿದವು.

ಹಿರಿಯರಾದ ಪ್ರಕಾಶ ಮಮದಾಪೂರ, ಶಂಕರ ಪಾತ್ರೋಟ, ಬಸವರಾಜ ಬಂಡಿವಡ್ಡರ, ಹಣಮಂತ ಬುರುಡ, ಮಲ್ಲಪ್ಪ ಬುರುಡ, ಭೀಮಸಿ ಬುರುಡ, ಈರಪ್ಪ ಬುರುಡ, ಮಹಾಲಿಂಗಪ್ಪ ಬಾಳಿಕಾಯಿ, ಈರಪ್ಪ ಮಾಳಿ, ಚನ್ನಪ್ಪ ಬಾಳಿಕಾಯಿ, ಮಹಾಲಿಂಗ ಮಾಳಿ, ನಿಂಗಪ್ಪ ಬಾಳಿಕಾಯಿ, ಬನಶಂಕರಿ ದೇವಸ್ಥಾನದ ಟ್ರಸ್ಟ್‌ ಕಮಿಟಿ ಹಿರಿಯರು, ಯುವಕ ಸಂಘದ ಸದಸ್ಯರು,
ಅನ್ನಪೂರ್ಣೇಶ್ವರಿ ನೇಕಾರ ಮಹಿಳಾ ಸಂಘದ ಸದಸ್ಯರಾದ ಶಶಿಕಲಾ ಚಮಕೇರಿ, ಶೋಭಾ ಭಾವಿಕಟ್ಟಿ, ಅನುರಾಧಾ ಬಾಣಕಾರ, ರೂಪಾ ಚಮಕೇರಿ, ರಾಜೇಶ್ವರಿ ಹುಣಶ್ಯಾಳ, ರಾಧಾ ಭಾವಿಕಟ್ಟಿ, ರಂಜನಾ ಜಮಖಂಡಿ, ರಾಣಿ ಬಾಡನವರ, ಮಹಾಲಕ್ಷ್ಮೀ ಹುಲ್ಯಾಳ, ಗೀತಾ ಹುಣಶ್ಯಾಳ, ಗೀತಾ ಕಿರಗಟಗಿ, ಮಹಾದೇವಿ ಗಲಗಲಿ, ಸುನಂದಾ ಹಿಕಡಿ, ಸುನೀತಾ ಮುನ್ನೋಳ್ಳಿ, ಜಯಶ್ರೀ ಸೋರಗಾಂವಿ, ಶೋಭಾ ಹುಣಶ್ಯಾಳ, ದ್ರಾಕ್ಷಾಯಿಣಿ ಮಂಡಿ ಇದ್ದರು. ಗುರುಪಾದ ಅಂಬಿ ಸ್ವಾಗತಿಸಿದರು.ಬಿ.ಸಿ. ಪೂಜಾರಿ ನಿರೂಪಿಸಿದರು. ಮಲ್ಲಪ್ಪ ಭಾವಿಕಟ್ಟಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next