Advertisement
ಗರ್ಭದಾನದಿಂದ ಅಂತ್ಯೇಷ್ಠಿಯವರೆಗೆ ಒಬ್ಬ ಮನುಷ್ಯ ಷೋಡಶ ಸಂಸ್ಕಾರಗಳ ಘಟ್ಟವನ್ನು ದಾಟಿ ಬರುವುದು ಹಿಂ ದೂ ಧರ್ಮ ಸಂಸ್ಕೃ ತಿಯ ಅಪೂರ್ವ ಪದ್ಧತಿ ಪರಂಪರೆ. ಅಂತ್ಯೇಷ್ಠಿಯ ಲ್ಲಿ ವ್ಯಕ್ತಿಯ ಮರಣೋತ್ತರ ವಿಧಿವಿಧಾನಗಳು ಆತನ ಮಕ್ಕಳಿಂದ ನೆರವೇರಿಸಲ್ಪಡುತ್ತವೆ. ಈ ಮೂಲಕ ತನ್ನ ತಂದೆಯ ಋಣವನ್ನು ಮಕ್ಕಳು ತೀರಿಸಬೇಕು. ಮಾಸಿಕ ಶ್ರಾದ್ಧ, ವರ್ಷಾಂತಿಕ ಶ್ರಾದ್ಧ, ಇತ್ಯಾದಿ ಶ್ರಾದ್ಧ ತರ್ಪಣಾದಿಗಳನ್ನು ಮಾಡುವುದರ ಜತೆಗೆ ಪ್ರತೀ ವರ್ಷ ವಾರ್ಷಿಕ ಶ್ರಾದ್ಧವನ್ನು ಮಾಡಬೇಕೆಂದಿದೆ. ಇದು ಪಿತೃಗಳನ್ನು ಸಂವತ್ಸರದಲ್ಲೊಮ್ಮೆ ನೆನಪಿಸಿಕೊಳ್ಳುವ ದಿವಸ. ಅಂದು ನಮ್ಮ ಪೂರ್ವಜರಿಗೂ ಶ್ರಾದ್ಧ ತರ್ಪಣ, ದಾನಾದಿಗಳನ್ನು ನೀಡಬೇಕು. ಅಂತಹ ಒಂದು ಪಕ್ಷವನ್ನೇ ಅಂದರೆ 15 ದಿನಗಳುಳ್ಳ ಅವಧಿಯನ್ನು ಪಿತೃಗಳಿಗಾಗಿಯೇ ನಮ್ಮ ಪ್ರಾಚೀನರು ಮೀಸಲಿಟ್ಟಿದ್ದಾರೆ. ಅದು ಪಿತೃ ಪಕ್ಷ. ಭಾದ್ರಪದ ಮಾಸ ಕೃಷ್ಣ ಪಕ್ಷ, ಪಿತೃ ಪಕ್ಷ. ಅಪರ ಪಕ್ಷ. ಆ ಪಕ್ಷದ ಕೊನೆಯ ದಿನ ಮಹಾಲಯ ಅಮಾವಾಸ್ಯೆ ಅಥವಾ ಪಿತೃಪಕ್ಷ ಅಮಾವಾಸ್ಯೆ. ನವರಾತ್ರಿ ಹಬ್ಬವೂ ಮಹಾಲಯದ ಮರುದಿನವೇ ಆರಂಭ.
ಪತಂತಿ ಪಿತರೋ ಹ್ಯೇಷಾಂ ಲುಪ್ತಪಿಂಡೋದಕಕ್ರಿಯಾಃ ||
Related Articles
Advertisement
ಜೀವಾತ್ಮನು ಶರೀರವನ್ನು ತ್ಯಜಿಸಿದ ಬಳಿಕ ದೇವಯಾನ (ಬ್ರಹ್ಮಲೋಕ) ಅಥವಾ ಪಿತೃಯಾನ (ಚಂದ್ರಲೋಕ)ದಲ್ಲಿ ಸಂಚರಿಸುತ್ತಾನೆ ಎಂದು ಉಪನಿಷದ್ ಮತ್ತು ಭಗವದ್ಗೀತೆಯಲ್ಲಿ ತಿಳಿಸಿದೆ. ಪಿತೃಲೋಕದಲ್ಲಿ ಗತಿಸಿಹೋದ ನಮ್ಮ ಪೂರ್ವಜರು ನೆಲೆಸುತ್ತಾರೆ ಎಂದು ಹೇಳುತ್ತದೆ ಋಗ್ವೇದ. ಅದು ಪಿತೃಯಾನದಲ್ಲಿರುವ ಒಂದು ತಂಗುದಾಣ ಎಂದು ಬೃಹದಾರಣ್ಯಕ ಉಪನಿಷತ್ ಉಲ್ಲೇಖ.
ಪಿತೃಪಕ್ಷ: ಹೆಸರೇ ತಿಳಿಸುವಂತೆ ಒಂದು ಪಕ್ಷವೇ ಪಿತೃ ಗಳಿಗೆ ಮೀಸಲು. ಪಿತೃಪಕ್ಷ. ಭಾದ್ರಪದ ಕೃಷ್ಣ ಪಕ್ಷದಲ್ಲಿ ಬರುವುದು ಅಥವಾ ಮಹಾಲಯ ಪಕ್ಷ ಎಂದೂ ಕರೆಯುವುದಿದೆ. ಈ ದಿನಗಳಲ್ಲಿ ಪೂರ್ವಿಕರಿಗೆ ಶ್ರಾದ್ಧ, ತರ್ಪಣ, ದಾನದಿಂದ ತೃಪ್ತಿಯಾಗುತ್ತದೆ. ಸಮಸ್ತ ಕುಲವನ್ನು ಹರಸುತ್ತಾರೆ. ಪಿತೃ ಪಕ್ಷದಲ್ಲಿ ಅನ್ನದಾನದ ಮಹತ್ವವನ್ನು ಮಹಾ ಭಾರತದಲ್ಲಿ ಕರ್ಣನ ಕಥೆಯೊಂದು ಪುರಸ್ಕರಿ ಸುತ್ತದೆ. ಕರ್ಣ ದೇಹಾಂತ ಗೊಂಡು ಪರಲೋಕಕಕ್ಕೆ ಹೋದಾಗ ಆತನಿಗೆ ಉಣ್ಣಲು ತಿನ್ನಲು ಆಹಾರವೇ ದೊರಕ ಲಿಲ್ಲವಂತೆ. ಆದರೆ ಬೆಳ್ಳಿ, ಚಿನ್ನ ಹೇರಳವಾಗಿ ಸಿಕ್ಕಿತು. ಕಾರಣ ಕರ್ಣ ತನ್ನ ಜೀವಿತ ಕಾಲದಲ್ಲಿ ಅಪಾರ ಸುವರ್ಣ, ರಜತವನ್ನು ದಾನವಾಗಿ ನೀಡಿದ್ದ. ಆಹಾರ ಸಿಗದಿದ್ದಾಗ ಕರ್ಣ ಯಮನಲ್ಲಿ ಪ್ರಾರ್ಥಿಸಿದ. ಆಗ ಯಮನು ಮಹಾಲಯ ಪಕ್ಷದಲ್ಲಿ ಕರ್ಣನನ್ನು ಭೂಮಿಗೆ ಕಳಿಸಿ ಕೊಟ್ಟನು. ಆ ಅವಧಿಯಲ್ಲಿ ಕರ್ಣ ಹಸಿದವರಿಗೆ ಅನ್ನದಾನವನ್ನು ಮಾಡಿ ಮರಳಿ ಪರಲೋಕಕ್ಕೆ ತೆರಳಿದನಂತೆ. ಪಿತೃ ಪಕ್ಷದಲ್ಲಿ ಮಾಡಿದ ಅನ್ನದಾನ ಗತಿಸಿಹೋದ ಸಮಸ್ತ ಪಿತೃ ಗಣಕ್ಕೆ ಸಲ್ಲುತ್ತದೆ. ಶ್ರಾದ್ಧ, ತರ್ಪಣ ಮತ್ತು ಪಿಂಡದಾನ ಮಹಾಲಯ ಶ್ರಾದ್ಧದ ವೈಶಿಷ್ಟ್ಯ.
ಆನ್ಪೋಟಯಂತಿ ಪಿತರಃ ಪ್ರನೃತ್ಯಂತಿ ಪಿತಾಮಹಃವೈಷ್ಣವೋ ಅಸ್ಮತುಲೇ ಜಾತಃ ಸ ನಃ ಸಂತಾರಯಿಷ್ಯತಿ || – ಕೃಷ್ಣಾಮೃತಮಹಾರ್ಣವದ ಉಕ್ತಿಯಂತೆ, ವಿಷ್ಣು ಭಕ್ತನು ಹುಟ್ಟಿದಾಗ, ಆ ವಂಶದ ಸಮಸ್ತ ಪಿತೃಗಳು ಕುಣಿ ಯುತ್ತಾರೆ. ಈತ ನಮ್ಮೆಲ್ಲರನ್ನೂ ಬಂಧ ಮುಕ್ತಗೊಳಿಸುವನು ಎಂದು ಅವರ ಆನಂದಕ್ಕೆ ಕಾರಣ. ದೇವಪಿತೃ ಕಾರ್ಯಾ ಭ್ಯಾಂ ನ ಪ್ರಮದಿತವ್ಯಂ ಎಂಬ ಶ್ರುತಿಯ ನುಡಿಯಂತೆ ವಿಧಿಬದ್ಧವಾಗಿ ಪಿತೃ ಕರ್ಮ ಗಳನ್ನು ನಡೆಸುವುದೂ ಮುಖ್ಯ. ದೇವ ಕಾರ್ಯಕ್ಕಿಂತಲೂ ಪಿತೃಕಾರ್ಯವು ಮುಖ್ಯ. ಮಹಾಲಯ: ಮಹಾ ಅಂದರೆ ಶ್ರೇಷ್ಠ ಅಥವಾ ದೊಡ್ಡದಾದ. ಲಯ – ನಾಶ. ದೇವ ದಾನವರ ನಡುವೆ ನಡೆದ ಘೋರ ಯುದ್ಧದಲ್ಲಿ ಅಪಾರ ಸಂಖ್ಯೆಯಲ್ಲಿ, ದೇವತೆಗಳು ಋಷಿಗಳು ದಾನವರ ಕೈಯಿಂದ ಮಡಿದರು. ಭಾದ್ರಪದ ಬಹುಳ ಪಾಡ್ಯದಿಂದ ಅಮಾವಾಸ್ಯೆಯ ಅವಧಿಯಲ್ಲಿ ಈ ಯುದ್ಧ ನಡೆದಿತ್ತು ಎಂದು ಒಂದು ಕಥೆ. ಮಹಾನಾಶ. ಮಹಾಲಯ! ದೇವತೆಗಳು ಮತ್ತು ಋಷಿಗಳು ಬೇರಾರೂ ಅಲ್ಲ, ನಮ್ಮ ಪೂರ್ವಜರೇ. ಗೋದಾನ – ಸೇವೆ: ಗೋವು ಸಮಸ್ತ ಮಾನವರಿಗೂ ತಾಯಿ, ವೃಷಭ ತಂದೆ. ಪಿತೃಪಕ್ಷದಲ್ಲಿ ಗತಿಸಿಹೋದ ನಮ್ಮ ಪೂರ್ವಜರನ್ನು ಸ್ಮರಿಸಿದಂತೆಯೇ ಜೀವಂತ ಮಾತಾ ಪಿತೃಗಳಾದ ನಮ್ಮ ಗೋವುಗಳ ದಾನ, ಸೇವೆಯನ್ನು ಮಾಡಿ ಋಣ ಸಂದಾಯವನ್ನು ಮಾಡುವ ಚಿಂತನೆ. ಪಿಂಡ ಪ್ರದಾನ, ತರ್ಪಣದಂತೆಯೇ ಪಿತೃ ಪಕ್ಷದಲ್ಲಿ ಗೋದಾನ, ಸೇವೆಯೂ ಅತ್ಯಂತ ಫಲಪ್ರದ ಹಾಗೂ ಪುಣ್ಯಪ್ರದ. ಜಲಂಚಾರು ರಘುಪತಿ ತಂತ್ರಿ