Advertisement

ನಡುಗಟ್ಟೆಗೆ ದೇವಿ-ಇಂದು ರಥೋತ್ಸವ

09:24 AM Oct 30, 2021 | Team Udayavani |

ಜೇವರ್ಗಿ: ಪಟ್ಟಣದ ಆರಾಧ್ಯ ದೇವತೆ ಶ್ರೀ ಮಹಾಲಕ್ಷ್ಮೀ ಜಾತ್ರಾ ಮಹೋತ್ಸವ ಅಂಗವಾಗಿ ಜಿಲ್ಲೆಯ ವಿವಿಧ ಭಾಗಗಳಿಂದ ದೇವಿ ದರ್ಶನಕ್ಕೆ ಭಕ್ತ ಸಾಗರವೇ ಹರಿದುಬರುತ್ತಿದೆ.

Advertisement

ಮಹಾಲಕ್ಷ್ಮೀ ಜಾತ್ರೆಗೆ ಕಳೆದ ಮಂಗಳವಾರ ಅದ್ಧೂರಿ ಚಾಲನೆ ಸಿಕ್ಕಿದ್ದು, ಬುಧವಾರ, ಗುರುವಾರ ಬಡಿಗೇರ ಮನೆಯಲ್ಲಿ ದೇವಿ ಉತ್ಸವ ಮೂರ್ತಿ ಪ್ರತಿಷ್ಠಾಪಿಸಲಾಗಿತ್ತು. ಗುರುವಾರ ರಾತ್ರಿ ಚಿಕ್ಕಜೇವರ್ಗಿ ಪೊಲೀಸ್‌ ಗೌಡರ ಮನೆಯಿಂದ ವಿವಿಧ ಬಾಜಾ ಭಜಂತ್ರಿ ಹಾಗೂ ಕಲಾ ತಂಡಗಳ ಮೆರವಣಿಗೆ ಮೂಲಕ ದೇವಿ ಮಂಟಪ ಬಡಿಗೇರ ಮನೆಗೆ ಬಂದು ತಲುಪಿತು.

ರಾತ್ರಿ 11 ಗಂಟೆಗೆ ಬಡಿಗೇರ ಮನೆಯಿಂದ ಹೊರಟ ದೇವಿಯ ರಥ ಶುಕ್ರವಾರ ಬೆಳಗ್ಗೆ 5:30 ಗಂಟೆಗೆ ನಡುಗಟ್ಟೆಗೆ ಆಗಮನವಾಯಿತು. ನಂತರ ಸಾಗರೋಪಾದಿಯಲ್ಲಿ ಭಕ್ತರು ಸಾಲುಗಟ್ಟಿ ನಿಂತು ದರ್ಶನ ಪಡೆಯುವ ದೃಶ್ಯ ಕಂಡುಬಂತು.

ಮಹಿಳೆಯರು, ಮಕ್ಕಳು ದೀಡ್‌ ನಮಸ್ಕಾರ, ಉಡಿ ತುಂಬಿ ಹರಕೆ ತೀರಿಸಿದರು. ಜಾತ್ರೆ ಅಂಗವಾಗಿ ಮಹಾಲಕ್ಷ್ಮೀ ಟ್ರಸ್ಟ್‌ ಕಮಿಟಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿದೆ. ಅಖಂಡೇಶ್ವರ ಸರ್ಕಲ್‌ನಿಂದ ದೇವಸ್ಥಾನಕ್ಕೆ ತೆರಳುವ ಒಂದು ಕಿ.ಮೀ ರಸ್ತೆಯಲ್ಲಿ ವಾಹನಗಳಿಗೆ ನಿಷೇಧ ಹೇರಲಾಗಿದೆ.

ಇದನ್ನೂ ಓದಿ: ಪುನೀತ್ ಸಾವಿನಿಂದ ಆಘಾತಗೊಂಡ ಅಭಿಮಾನಿ ಹೃದಯಾಘಾತದಿಂದ ನಿಧನ

Advertisement

ಶುಕ್ರವಾರ ದರ್ಶನಕ್ಕೆ ಬಂದ ಭಕ್ತಾದಿಗಳಿಗೆ ಮಹಾಲಕ್ಷ್ಮೀ ಟ್ರಸ್ಟ್‌ ಕಮಿಟಿ, ಪಟ್ಟಣದ ವಿವಿಧ ಸಂಘಟನೆಗಳು ಹಾಗೂ ಉದ್ಯಮಿಗಳು ಅನ್ನ ಪ್ರಸಾದ, ಹಣ್ಣು ವಿತರಣೆ ಮಾಡಿದರು. ಶನಿವಾರ ಸಾವಿರಾರು ಭಕ್ತಾದಿಗಳ ನಡುವೆ ಅದ್ಧೂರಿ ರಥೋತ್ಸವ ಜರುಗುವುದು.

ಶಾಸಕ ಡಾ| ಅಜಯಸಿಂಗ್‌, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಟ್ರಸ್ಟ್‌ ಕಮಿಟಿ ಬಸವರಾಜ ಸಾಹು ಗೋಗಿ, ಮುಖಂಡರಾದ ಸೋಮಣ್ಣ ಕಲ್ಲಾ, ದಂಡಪ್ಪಗೌಡ ಪೊಲೀಸ್‌ ಪಾಟೀಲ, ನೀಲಕಂಠ ಅವಂಟಿ, ರವಿ ಕೋಳಕೂರ, ಗುಂಡಣ್ಣ ಬಡಿಗೇರ, ಜಗಧೀಶ ಬಡಿಗೇರ, ಮಲ್ಲಿಕಾರ್ಜುನ ಪತ್ತಾರ, ರಾಮಣ್ಣ ಪೂಜಾರಿ, ಶರಣಗೌಡ ಸರಡಗಿ, ಸಂಗಮೇಶ ಕೊಂಬಿನ್‌, ಚಂದ್ರು ಕೊಡಚಿ, ರಾಜು ತಳವಾರ, ಭೀಮು ತಳವಾರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next