Advertisement

ಅವಳಿ ನಗರದಲ್ಲಿ  ಮಹದಾಯಿ ಜಲೋತ್ಸವ

04:04 PM Aug 15, 2018 | |

ಹುಬ್ಬಳ್ಳಿ: ಮಹದಾಯಿ ವಿಷಯವಾಗಿ ನ್ಯಾಯಾಧಿಕರಣದ ತೀರ್ಪು ಸ್ವಾಗತಿಸಿ ವಿವಿಧ ರೈತಪರ ಹಾಗೂ ಕನ್ನಡಪರ ಸಂಘಟನೆಗಳ ಹೋರಾಟಗಾರರು ಇಲ್ಲಿಯ ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ವಿತರಿಸಿ ವಿಜಯೋತ್ಸವ ಆಚರಿಸಿದರು.

Advertisement

ನ್ಯಾಯಾಧಿಕರಣದಿಂದ ರಾಜ್ಯಪರ ಮಹದಾಯಿಯ ತೀರ್ಪು ಹೊರಬೀಳುತ್ತಿದ್ದಂತೆ ನೂರಾರು ಹೋರಾಟಗಾರರು ಕಿತ್ತೂರು ಚನ್ನಮ್ಮ ವೃತ್ತದಲ್ಲಿ ಜಮಾಯಿಸಿ ಪರಸ್ಪರ ಗುಲಾಲು ಎರಚಿದರು. ಪಟಾಕಿ ಸಿಡಿಸಿ ಸಂಭ್ರಮಿಸಿದರು. ಮೈಮೇಲೆ ನೀರು ಸುರಿದುಕೊಂಡು ನೆಲದಲ್ಲಿ ಉರುಳಾಡಿದರು. ಕುಣಿದು ಕುಪ್ಪಳಿಸಿದರು. ಮಹದಾಯಿ ಪರ ವಾದ ಮಂಡಿಸಿದ ವಕೀಲರು ಹಾಗೂ ಸರಕಾರದ ಪರವಾಗಿ ಘೋಷಣೆ ಕೂಗಿದರು. ಮಹಿಳೆಯರೂ ಪಾಲ್ಗೊಂಡಿದ್ದರು. ನಂತರ ಚನ್ನಮ್ಮ ಪುತ್ಥಳಿಗೆ ಹೂಮಾಲೆ ಹಾಕಿ ಸಂಭ್ರಮಿಸಿದರು.

ಕಳಸಾ ಬಂಡೂರಿ, ಮಹದಾಯಿ ಹೋರಾಟ ಸಮಿತಿಯ ರಾಜಣ್ಣ ಕೊರವಿ, ಅಮೃತ ಇಜಾರಿ, ಮಹೇಶ ಪತ್ತಾರ, ವಿಕಾಸ ಸೊಪ್ಪಿನ, ಶಿವಣ್ಣ ಹುಬ್ಬಳ್ಳಿ, ಸಂಗ್ರಾಮ ಸೇನೆಯ ಸಂಜೀವ ದುಮ್ಮಕನಾಳ, ಸಿದ್ದು ತೇಜಿ, ವಿ.ಎಸ್‌. ಪಾಟೀಲ, ಸುಭಾಸಗೌಡ ಪಾಟೀಲ, ರಾಜಶೇಖರ ಮೆಣಸಿನಕಾಯಿ, ಶೇಖರಯ್ಯ ಮಠಪತಿ, ಕರ್ನಾಟಕ ರಕ್ಷಣಾ ವೇದಿಕೆಯ ಮಂಜುನಾಥ ಲೂತಿಮಠ, ಜಯದೇವ ಹೂಗಾರ, ಹೇಮನಗೌಡ ಬಸನಗೌಡ್ರ, ಬಾಬಾಜಾನ ಮುಧೋಳ, ನಾಗಭೂಷಣ ಕಾಳೆ, ಸುರೇಶಗೌಡ ಪಾಟೀಲ, ಎ.ಪಿ. ಗುರಿಕಾರ ಸೇರಿದಂತೆ ವಿವಿಧ ರೈತಪರ, ಕನ್ನಡಪರ ಸಂಘಟನೆ ಕಾರ್ಯಕರ್ತರು ಪಾಲ್ಗೊಂಡಿದ್ದರು. ದುರ್ಗದ ಬಯಲಿನಲ್ಲೂ ವಿವಿಧ ಸಂಘಟನೆ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next