Advertisement

ಮಹದಾಯಿ: 5ಕ್ಕೆ ಶಾಸಕ, ಸಂಸದರ ಸಭೆ

10:56 PM Dec 23, 2019 | Lakshmi GovindaRaj |

ಹುಬ್ಬಳ್ಳಿ: ಕಳಸಾ-ಬಂಡೂರಿ ನಾಲಾ ಯೋಜನೆಗೆ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಇಲಾಖೆ ಒಪ್ಪಿಗೆ ನೀಡಿ, ನಂತರ ಗೋವಾ ಒತ್ತಡಕ್ಕೆ ಮಣಿದು ಹಿಂಪಡೆದಿದ್ದನ್ನು ಖಂಡಿಸಿ ಹಾಗೂ ಮಹದಾಯಿ ಅಧಿಸೂಚನೆಗೆ ಒತ್ತಾಯಿಸಿ ಹೋರಾಟ ಗಟ್ಟಿಗೊಳಿಸಲು ಜ.5ರಂದು ಬೆಳಗಾವಿ ವಿಭಾಗದ ಶಾಸಕರು, ಸಂಸದರ ಸಭೆ ಕರೆಯಲು ತೀರ್ಮಾನಿಸಲಾಗಿದೆ.

Advertisement

ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ, ಮಾಜಿ ಶಾಸಕ ಎನ್‌.ಎಚ್‌. ಕೋನರಡ್ಡಿ, ಹುಬ್ಬಳ್ಳಿ, ನವಲಗುಂದ, ನರಗುಂದ ಸೇರಿ ವಿವಿಧ ತಾಲೂಕುಗಳಿಂದ ಆಗಮಿಸಿದ್ದ ಹೋರಾಟಗಾರರು, ರೈತ ಮುಖಂಡರು ಸೋಮವಾರ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸಭೆ ನಡೆಸಿ ಸಂಘಟಿತ ಹೋರಾಟ ತೀವ್ರಗೊಳಿಸುವ ಕುರಿತಾಗಿ ನಿರ್ಧರಿಸಿದರು.

ಜ.20ರಂದು ವಿಧಾನಮಂಡಲ ಅಧಿವೇಶನ ಆರಂಭವಾಗಲಿದ್ದು, ಅಷ್ಟರೊಳಗೆ ಈ ಭಾಗದಲ್ಲಿ ಬೃಹತ್‌ ಹೋರಾಟ ಕೈಗೊಳ್ಳುವುದು. ಇದಕ್ಕೆ ಪೂರ್ವಭಾವಿಯಾಗಿ ಬೆಳಗಾವಿ ವಿಭಾಗ ವ್ಯಾಪ್ತಿಯ ಶಾಸಕರು, ಸಂಸದರ ಸಭೆ ಕರೆಯುವುದು.

ಕಾವೇರಿ ಹೋರಾಟದ ಮಾದರಿಯಲ್ಲಿ ಮಹದಾಯಿ ಹೋರಾಟ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಡಿ.23 ಅಥವಾ 29ರಂದು ಪ್ರಮುಖರ ನೇತೃತ್ವದಲ್ಲಿ ಸಂಚಾಲನ ಸಮಿತಿ ರಚಿಸುವ ಕುರಿತು ಚರ್ಚಿಸಲಾಯಿತು. ಎಲ್ಲ ಸಂಘಟನೆಗಳನ್ನು ಒಂದೇ ವೇದಿಕೆಯಡಿ ತಂದು ಒಬ್ಬರ ನಾಯಕತ್ವದಡಿ ಸಾಗುವಂತಾಗಬೇಕು. ಇನ್ನೆರಡು ದಿನಗಳಲ್ಲಿ ಸಮಿತಿ ಹಾಗೂ ಸಮಿತಿಗೆ ನಾಮಕರಣಕ್ಕೆ ನಿರ್ಣಯಿಸಲಾಯಿತು.

ಮಹದಾಯಿ ಕುರಿತ ಎಲ್ಲ ಹೋರಾಟಗಾರರು ಒಂದೇ ವೇದಿಕೆಗೆ ಬರುವ ವಿಶ್ವಾಸವಿದ್ದು, ನ್ಯಾಯಾಧಿಕರಣ ತೀರ್ಪಿನಂತೆ ಅಧಿಸೂಚನೆ ಹೊರಡಿಸಿ ಕಾಮಗಾರಿ ಪೂರ್ಣಗೊಳ್ಳವವರೆಗೂ ಈ ಹೋರಾಟ ನಿರಂತರವಾಗಿ ನಡೆಯಲಿದೆ. ಹೋರಾಟದಲ್ಲಿ ತೊಡಗಿರುವ ಪ್ರಮುಖರೊಬ್ಬರೂ ನೇತೃತ್ವ ವಹಿಸಿಕೊಳ್ಳಬೇಕು.
-ಎನ್‌.ಎಚ್‌. ಕೋನರಡ್ಡಿ, ಮಾಜಿ ಶಾಸಕ

Advertisement
Advertisement

Udayavani is now on Telegram. Click here to join our channel and stay updated with the latest news.

Next