Advertisement

ವಿವಾದಾತ್ಮಕ ಹೇಳಿಕೆ: ಮಹಾರಾಷ್ಟ್ರ ರಾಜ್ಯಪಾಲರ ವಿರುದ್ಧ ಆಡಳಿತ ಪಕ್ಷದ ಪ್ರತಿಭಟನೆ

01:35 PM Mar 03, 2022 | Team Udayavani |

ಮುಂಬಯಿ : ಇತ್ತೀಚೆಗೆ ಛತ್ರಪತಿ ಶಿವಾಜಿ ಮಹಾರಾಜರ ಕುರಿತು ರಾಜ್ಯಪಾಲರು ವಿವಾದಾತ್ಮಕ ಹೇಳಿಕೆ ನೀಡಿದ್ದರು ಎಂದು ಆರೋಪಿಸಿ ಮಹಾರಾಷ್ಟ್ರ ಸರಕಾರದ ಆಡಳಿತ ಪಕ್ಷದ ಶಾಸಕರು ಪ್ರತಿಭಟನೆಗೆ ಇಳಿದಿದ್ದಾರೆ.

Advertisement

ಮಹಾ ವಿಕಾಸ್ ಅಘಾಡಿ ಶಾಸಕರು ಸದನದಲ್ಲಿ ಘೋಷಣೆಗಳನ್ನು ಕೂಗುತ್ತಿದ್ದಂತೆ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಅವರು ತಮ್ಮ ಭಾಷಣವನ್ನು ಮಧ್ಯದಲ್ಲಿಯೇ ಬಿಟ್ಟು ಅಧಿವೇಶನದ ಮೊದಲ ದಿನ ಗುರುವಾರದಂದು ವಿಧಾನಸಭೆಯಿಂದ ನಿರ್ಗಮಿಸಿದ್ದಾರೆ.

ಸದನದ ಹೊರಗೆ ಪ್ರತಿಭಟನೆ ನಡೆಸಲಾಗುತ್ತಿದ್ದು, ಎನ್ ಸಿಪಿ ಶಾಸಕ ಸಂಜಯ್ ದೌನ್ಡ್ ಅವರು ಶೀರ್ಷಾಸನ ಮಾಡಿ ವಿರೋಧ ವ್ಯಕ್ತಪಡಿಸಿ ಗಮನ ಸೆಳೆದರು.

ಗವರ್ನರ್ ಭಗತ್ ಸಿಂಗ್ ಕೋಶ್ಯಾರಿ ಯಾವ ಉಲ್ಲೇಖವನ್ನು ಮಾಡುತ್ತಿದ್ದಾರೆ? ಅವರು ಅದನ್ನು ಹೇಳಬೇಕಾಗಿಲ್ಲ. ಅವರು ಬಿಜೆಪಿಯೊಂದಿಗೆ ಕೈಜೋಡಿಸಿದ್ದಾರೆ ಎಂದು ನಾನು ಭಾವಿಸುತ್ತೇನೆ ಮತ್ತು ಅವರು ಅಧಿವೇಶನದ ಆರಂಭದ ದೃಷ್ಟಿಯಿಂದ ಈ ವಿವಾದವನ್ನು ಎತ್ತಿದ್ದಾರೆ ಎಂದು ಶಿವಸೇನೆ ಶಾಸಕಿ ಮನೀಶಾ ಕಾಯಂದೆ ಕಿಡಿ ಕಾರಿದ್ದಾರೆ.

Advertisement

ನಾನು ಚಂದ್ರಗುಪ್ತ ಮತ್ತು ಶಿವಾಜಿ ಮಹಾರಾಜರ ವ್ಯಕ್ತಿತ್ವವನ್ನು ಕೀಳಲು ಪ್ರಯತ್ನಿಸುತ್ತಿಲ್ಲ. ತನ್ನ ಮಗುವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ತಾಯಿಯಂತೆ. ಅದೇ ರೀತಿ ನಮ್ಮ ಸಮಾಜದಲ್ಲಿ ಗುರುವಿನ (ಶಿಕ್ಷಕ) ಪಾತ್ರಕ್ಕೆ ದೊಡ್ಡ ಸ್ಥಾನವಿದೆ.ಶಿವಾಜಿಯನ್ನು ಗುರು ಸಮರ್ಥ್ ರಾಮದಾಸ್ ಅವರು ಶಿವಾಜಿಯನ್ನು ರೂಪಿಸಿದ್ದರು ಎಂದು ಹೇಳಿಕೆ ನೀಡಿದ್ದರು.

ದೇವೇಂದ್ರ ಫಡ್ನವಿಸ್ ಕಿಡಿ

ಅವರ ರಾಜೀನಾಮೆಯನ್ನು ತೆಗೆದುಕೊಳ್ಳಲು ಸರ್ಕಾರ ಏಕೆ ಬಯಸುವುದಿಲ್ಲ? ಇದು ‘ದಾವೂದ್ ಸಮರ್ಪಿತ್’, ‘ದಾವೂದ್ ಶರಣ್’ ಸರ್ಕಾರ. ದಾವೂದ್ ಜೊತೆ ಸಂಬಂಧ ಇಟ್ಟುಕೊಂಡಿರುವ ಜನರನ್ನು ಉಳಿಸಲು ಈ ಸರ್ಕಾರ ಒಗ್ಗೂಡುತ್ತಿದೆ. ಅದಕ್ಕಾಗಿಯೇ ನಾವು ಪ್ರತಿಭಟನೆಗಳನ್ನು ಪ್ರಾರಂಭಿಸಿದ್ದೇವೆ ಮತ್ತು ಅವರ ರಾಜೀನಾಮೆಯನ್ನು ತಕ್ಷಣವೇ ತೆಗೆದುಕೊಳ್ಳಬೇಕೆಂದು ನಾವು ಒತ್ತಾಯಿಸುತ್ತೇವೆ ಎಂದು ದೇವೇಂದ್ರ ಫಡ್ನವಿಸ್ ಕಾಂಗ್ರೆಸ್, ಶಿವಸೇನೆ ಮತ್ತು ಎನ್ ಸಿಪಿ ವಿರುದ್ಧ ಕಿಡಿ ಕಾರಿದ್ದಾರೆ.

ಮಹಾರಾಷ್ಟ್ರದಲ್ಲಿ ಮೊದಲ ಬಾರಿಗೆ ಸಚಿವ ನವಾಬ್ ಮಲಿಕ್ ಕಂಬಿ ಹಿಂದೆ ಬಿದ್ದಿದ್ದಾರೆ ಆದರೆ ಅವರ ರಾಜೀನಾಮೆಯನ್ನು ತೆಗೆದುಕೊಳ್ಳಲಾಗಿಲ್ಲ. ಇದು ಅನಿರೀಕ್ಷಿತ. ಅವರು ಸಣ್ಣ ವಿಷಯಕ್ಕೆ ಜೈಲು ಪಾಲಾಗಿಲ್ಲ, ದಾವೂದ್ ಇಬ್ರಾಹಿಂ ಕುಟುಂಬದೊಂದಿಗೆ ವ್ಯವಹರಿಸಿದ್ದಾರೆ ಎಂಬ ಆರೋಪವಿದೆ ಎಂದು ಕಿಡಿ ಕಾರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next