Advertisement

ಜಗಜ್ಯೋತಿ ಕಲಾವೃಂದ ಡೊಂಬಿವಲಿ ವತಿಯಿಂದ ಮಹಾಶಿವರಾತ್ರಿ 

01:04 PM Mar 12, 2019 | |

ಡೊಂಬಿವಲಿ: ಜಗಜ್ಯೋತಿ ಕಲಾವೃಂದ ಡೊಂಬಿವಲಿ ವತಿಯಿಂದ ಮಹಾಶಿವರಾತ್ರಿ ಆಚರಣೆಯು ಪ್ರತೀ ವರ್ಷದಂತೆ ಈ ವರ್ಷವೂ ಸಂಸ್ಥೆಯ ಕಚೇರಿಯಲ್ಲಿ ಮಾ. 4ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.

Advertisement

ಬಹು ಸಂಖ್ಯೆಯಲ್ಲಿ ನೆರೆದ ತುಳು-ಕನ್ನಡಿಗ ಭಕ್ತಾದಿಗಳ ಉಪಸ್ಥಿತಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಪೂಜಾ ವಿಧಿ-ವಿಧಾನಗಳಲ್ಲಿ ಸಂಘದ ಸಕ್ರಿಯ ಸದಸ್ಯರಾದ ಚಂದ್ರಕಾಂತ್‌ ನಾಯಕ್‌, ಜಯಶ್ರೀ ನಾಯಕ್‌ ದಂಪತಿ ಸಹಕರಿಸಿದರು. ಪೂಜಾ ವಿಧಿ-ವಿಧಾನಗಳನ್ನು ಶ್ರೀ ರಾಧಾಕೃಷ್ಣ ಮತ್ತು ಶ್ರೀ ಶನೀಶ್ವರ ಮಂದಿರದ ಪ್ರಧಾನ ಅರ್ಚಕ ಕಾನಂಗಿ ಪ್ರಕಾಶ್‌ ಭಟ್‌ ನೆರವೇರಿಸಿದರು.

ಈ ಸಂದರ್ಭದಲ್ಲಿ ಚಿಣ್ಣರ ಬಿಂಬ ಡೊಂಬಿವಲಿ ಶಾಖೆ, ಸಿರಿನಾಡ ವೆಲ್ಫೆàರ್‌ ಅಸೋಸಿಯೇಶನ್‌ ಡೊಂಬಿವಲಿ, ತುಳು ವೆಲ್ಫೆàರ್‌ ಅಸೋಸಿಯೇಶನ್‌ ಡೊಂಬಿವಲಿ, ಶ್ರೀ ಲಕ್ಷ್ಮೀ ಭಜನಾ ಮಂಡಳಿ, ಪಶ್ಚಿಮ ವಿಭಾಗದ ನವರಾತ್ರೊÂàತ್ಸವ ಮಂಡಳಿ, ಮುಂಬ್ರಾ ಮಿತ್ರ ಭಜನಾ ಮಂಡಳಿಗಳ ಸದಸ್ಯರಿಂದ ನಿರಂತರವಾಗಿ ಭಜನಾ ಕಾರ್ಯಕ್ರಮವನ್ನುಆಯೋಜಿಸಲಾಗಿತ್ತು.

ತಿರುಪತಿ ದಾಸ ಸಾಹಿತ್ಯದ ವತಿಯಿಂದ ಪುರಂದರ ದಾಸರ ದಾಸ ಪ್ರಶಸ್ತಿ ಪಡೆದ ಪ್ರಸಿದ್ಧ ಕೀರ್ತನೆಕಾರರಾದ ಅನಂತ ಪದ್ಮನಾಭ ಭಟ್‌ ಕಲಾವೃಂದದ ಸದಸ್ಯರು ಹಾಗೂ ಡೊಂಬಿವಲಿ ಪರಿಸರದ ಹೆಚ್ಚಿನ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದು ಪ್ರಸಾದ ಸ್ವೀಕರಿಸಿದರು. ಜಗಜ್ಯೋತಿ ಕಲಾವೃಂದದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next