Advertisement

ಹಸಿರಾಯಿತು ಬರಡು ಭೂಮಿ! 30 ಸಾವಿರ ಗಿಡ ಬೆಳೆಸಿದ ನಿಸರ್ಗ ಪ್ರೇಮಿಗಳು

12:10 AM Nov 04, 2021 | Team Udayavani |

ಮುಂಬೈ: ಮಾಲಿನ್ಯ ಕಡಿಮೆಯಾಗಬೇಕೆಂದರೆ, ಗಿಡಗಳನ್ನು ನೆಡಬೇಕೆನ್ನುವ ಮಾತನ್ನು ಎಲ್ಲರೂ ಹೇಳುತ್ತಾರಾದರೂ ಕಾರ್ಯರೂಪಕ್ಕೆ ತರುವವರು ಎಲ್ಲೋ ಕೆಲವರು ಮಾತ್ರ. ಅದೇ ರೀತಿ ಮಹಾರಾಷ್ಟ್ರದಲ್ಲಿ ಬರಡು ಭೂಮಿಯಾಗಿದ್ದ ಬೆಟ್ಟವೊಂದನ್ನು ಒಂದಿಷ್ಟು ಜನರು ಸೇರಿಕೊಂಡು ಹಚ್ಚ ಹಸಿರಿನ ಕಾಡಾಗಿಸಿದ್ದಾರೆ.

Advertisement

ಲಾತೂರ್‌ ಜಿಲ್ಲೆಯ ರಾಮ್‌ವಾಡಿ ಗ್ರಾಮದಲ್ಲಿ 61 ಎಕರೆ ಜಾಗದಲ್ಲಿದ್ದ ಬೆಟ್ಟವೊಂದು ಬರಡಾಗಿತ್ತು. ಅದನ್ನು ಕಂಡು ಬೇಸರಗೊಂಡ ನಟ ಸಯಾಜಿ ಶಿಂಧೆ “ಸಹ್ಯಾದ್ರಿ ದೇವ್ರಾಯ್‌’ ಹೆಸರಿನ ಎನ್‌ಜಿಒ ಸ್ಥಾಪಿಸಿ, ಅದರ ಮೂಲಕ ಆ ಪ್ರದೇಶದಲ್ಲಿ ಗಿಡ ನೆಡಲಾರಂಭಿಸಿದರು. 2018ರಿಂದ ಈವರೆಗೆ ಅಲ್ಲಿ 35 ಸಾವಿರಕ್ಕೂ ಅಧಿಕ ಗಿಡಗಳನ್ನು ನೆಡಲಾಗಿದೆ. ಅದರಲ್ಲಿ ಪ್ರಸ್ತುತ 30 ಸಾವಿರ ಗಿಡಗಳು ಬೆಳೆದು ದೊಡ್ಡ ಮರಗಳಂತಾಗಿವೆ ಎನ್ನಲಾಗಿದೆ.

ಗಿಡಗಳಿಗೆ ನೀರು ಪೂರೈಸುವ ಹಿನ್ನೆಲೆಯಲ್ಲಿ ಬೆಟ್ಟದ ಹಲವೆಡೆ “ಪಾನಿ ಆದ್ವಾ, ಪಾನಿ ಜಿರ್ವಾ’ ಎನ್ನುವ ಸಿಸ್ಟಂ ಮೂಲಕ ಇಂಗುಗುಂಡಿಗಳನ್ನು ರಚಿಸಲಾಗಿದೆ. ಭಾರತೀಯ ತಳಿಗಳಾದ ಆಲ, ಬೇವು ಸೇರಿ ಒಟ್ಟು 60 ಜಾತಿಯ ಗಿಡಗಳನ್ನು ಬೆಳೆಸಲಾಗಿದೆ.

ಇದನ್ನೂ ಓದಿ:ಶಿಕ್ಷಕರ ನೇಮಕಾತಿಗೆ ಸಿಇಟಿ ಪರೀಕ್ಷೆ: ಸಚಿವ ನಾಗೇಶ್‌

ಶಿಂಧೆ ಸ್ಫೂರ್ತಿ:
ಸಯಾಜಿ ಶಿಂಧೆ ಅವರು 2018ರಲ್ಲಿ ಲಾತೂರ್‌ನ 400 ವರ್ಷಗಳಷ್ಟು ಹಳೆಯ ಆಲದ ಮರ ನೋಡಲೆಂದು ಆಗಮಿಸಿದ್ದರು. ಆ ಮರದ ಕೆಳಗೇ ವರ್ಕ್‌ಶಾಪ್‌ ಒಂದನ್ನು ಮಾಡಿದ್ದರು. ಅದಾದ ನಂತರ ಜನರು ಹೆಚ್ಚಾಗಿ ಗಿಡ ನೆಡುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾಗಿ ಸಹ್ಯಾದ್ರಿ ದೇವ್ರಾಯ್‌ ಎನ್‌ಜಿಒ ಜಿಲ್ಲಾ ಸಂಯೋಜಕರಾಗಿರುವ ಸುಪಣ್‌ì ಜಗ³ತ್‌ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next