ಮುಂಬೈ: “ಮಹಾರಾಷ್ಟ್ರ ಸರ್ಕಾರ ದಕ್ಷತೆಯಿಂದ ಕೆಲಸ ಮಾಡುತ್ತಿದೆ. ಇಲ್ಲಿ ಲವ್ ಜಿಹಾದ್ ನಿಯಂತ್ರಿಸುವಂಥ ಯಾವುದೇ ಕಾನೂನಿನ ಅವಶ್ಯಕತೆ ಇಲ್ಲ ಎಂದು ಸಿಎಂ ಉದ್ಧವ್ ಠಾಕ್ರೆಯ ಸಂಪುಟ ಸಹೋದ್ಯೋಗಿ ಅಸ್ಲಾಮ್ ಶೇಖ್ ಹೇಳಿಕೆ ನೀಡಿದ್ದಾರೆ.
ಲವ್ ಜಿಹಾದ್ ನಿಯಂತ್ರಣಕ್ಕೆ ಕಾನೂನು ರೂಪಿಸುತ್ತಿರುವ ಉತ್ತರ ಪ್ರದೇಶ, ಮಧ್ಯಪ್ರದೇಶ ಸರ್ಕಾರಗಳ ನಿಲುವಿಗೆ ಅಸ್ಲಾಮ್ ಈ ಪ್ರತಿಕ್ರಿಯೆ ನೀಡಿದ್ದಾರೆ.
“ಆಡಳಿತಾತ್ಮಕ ಕೊರತೆ ಇದ್ದ ರಾಜ್ಯಗಳಷ್ಟೇ ಇಂಥ ಕಾನೂನನ್ನು ತರಲು ಯತ್ನಿಸುತ್ತಿವೆ. ಆದರೆ ಮಹಾರಾಷ್ಟ್ರ ಸರ್ಕಾರ ಸಮರ್ಪಕವಾಗಿ ಕೆಲಸ ಮಾಡುತ್ತಿದೆ. ಲವ್ ಜಿಹಾದ್ ನಿಯಂತ್ರಿಸುವಂಥ ಯಾವುದೇ ಕಾನೂನುಗಳನ್ನು ಜಾರಿ ತರುವ ಅವಶ್ಯಕತೆ ಇಲ್ಲಿಲ್ಲ’ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ:ರೈಲ್ವೆಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ 1ಕೋಟಿ ರೂ. ವಂಚನೆ :ಪೊಲೀಸರ ಬಲೆಗೆ ಬಿದ್ದ ಆರೋಪಿ
“ರಾಜ್ಯ ಸರ್ಕಾರ ಸಂವಿಧಾನಬದ್ಧವಾಗಿಯೇ ಕಾರ್ಯನಿರ್ವಹಿಸುತ್ತಿದೆ. ಅಸಂಬದ್ಧ ಸಂಗತಿಗಳ ಬಗ್ಗೆ ಅದು ಆಲೋಚಿಸುವುದಿಲ್ಲ. ಈ ದೇಶದಲ್ಲಿ ಜನರು ಎಲ್ಲೂ ವಾಸಿಸಬಹುದು, ಯಾವುದೇ ಧರ್ಮವನ್ನೂ ಅನುಸರಿಸಬಹುದು, ಯಾವ ಧರ್ಮದವರನ್ನೂ ಬೇಕಾದರೂ ವಿವಾಹವಾಗಲು ಸಂವಿಧಾನ ಅನುಮತಿಸಿದೆ. ಇದಕ್ಕಾಗಿ ಪ್ರತ್ಯೇಕ ಕಾನೂನಿನ ಅವಶ್ಯಕತೆ ಬೀಳುವುದಿಲ್ಲ’ ಎಂದು ತಿಳಿಸಿದ್ದಾರೆ.