ವೆಲ್ಲಿಂಗ್ಟನ್: ಇತ್ತೀಚೆಗಷ್ಟೇ ಗೇಬ್ರಿಯಲ್ ಚಂಡಮಾರುತಕ್ಕೆ ತತ್ತರಿದ್ದ ನ್ಯೂಜಿಲೆಂಡ್ ನಲ್ಲಿ ಗುರುವಾರ ಪ್ರಬಲ ಭೂಕಂಪನವಾಗಿರುವ ಬಗ್ಗೆ ವರದಿಯಾಗಿದೆ.
ಯುಎಸ್ ಜಿಯೋಲಾಜಿಕಲ್ ಸರ್ವೆ ಪ್ರಕಾರ, 10 ಕಿಮೀ ಆಳದಲ್ಲಿ ಭೂಮಿ ಕಂಪಸಿದೆ. ನ್ಯೂಜಿಲೆಂಡ್‌ನ ಉತ್ತರದಲ್ಲಿರುವ ಕೆರ್ಮಾಡೆಕ್ ದ್ವೀಪಗಳಲ್ಲಿ ಭೂಮಿ ಕಂಪಿಸಿದೆ. ರಿಕ್ಟರ್ ಮಾಪಕದಲ್ಲಿ 7.1 ತೀವ್ರತೆಯ ಪ್ರಮಾಣ ದಾಖಲಾಗಿದೆ.
ರಾಷ್ಟ್ರೀಯ ತುರ್ತು ನಿರ್ವಹಣಾ ಸಂಸ್ಥೆ, ಕೆರ್ಮಾಡೆಕ್ ದ್ವೀಪಗಳಲ್ಲಿ ಸಂಭವಿಸಿದ ಭೂಕಂಪನದಿಂದ ಯಾವುದೇ ರೀತಿಯ ಸುನಾಮಿಯ ಭೀತಿಯಿಲ್ಲ ಎಂದಿದೆ.
ಇದನ್ನೂ ಓದಿ: ಕೆಸಿಆರ್ ಪುತ್ರಿ ಕವಿತಾ ಇಡಿ ವಿಚಾರಣೆ: ತೆಲಂಗಾಣದಲ್ಲಿ ಬಿಜೆಪಿ ವಿರುದ್ದ ಪೋಸ್ಟರ್ ವಾರ್
ನ್ಯೂಜಿಲೆಂಡ್ ನಲ್ಲಿ ಈ ರೀತಿಯ ಭೂಕಂಪನ ಸಾಮಾನ್ಯವಾಗಿರುತ್ತದೆ ಏಕೆಂದರೆ ಇದು ವಿಶ್ವದ ಎರಡು ಪ್ರಮುಖ ಟೆಕ್ಟೋನಿಕ್ ಪ್ಲೇಟ್‌ಗಳ ಗಡಿಯಲ್ಲಿದೆ – ಪೆಸಿಫಿಕ್ ಪ್ಲೇಟ್ ಮತ್ತು ಆಸ್ಟ್ರೇಲಿಯನ್ ಪ್ಲೇಟ್. ಇದು ರಿಂಗ್ ಆಫ್ ಫೈರ್ ಎಂದು ಕರೆಯಲ್ಪಡುವ ತೀವ್ರವಾದ ಭೂಕಂಪನ ಚಟುವಟಿಕೆಯ ವಲಯದ ಅಂಚಿನಲ್ಲಿದೆ. ಹಾಗಾಗಿ ಇಲ್ಲಿ ನ್ಯೂಜಿಲೆಂಡ್‌ನಲ್ಲಿ ಪ್ರತಿ ವರ್ಷ ಸಾವಿರಾರು ಭೂಕಂಪಗಳು ಸಂಭವಿಸುತ್ತವೆ.