ಕಾಪು: ಇಲ್ಲಿನ ಕೈಪುಂಜಾಲು ಓಂ ಸಾಗರ್ ಜೋಡು ದೋಣಿಯಲ್ಲಿ ಟನ್ ಗಟ್ಟಲೆ ಭೂತಾಯಿ ಮೀನು ಬಲೆಗೆ ಬಿದ್ದಿದೆ.
Advertisement
ಸುಮಾರು 30 ಟನ್ ಗೂ ಅಧಿಕ ಭೂತಾಯಿ ಮೀನು ಬಲೆಗೆ ಬಿದ್ದಿದ್ದು, 30 ಲಕ್ಷ ರೂಪಾಯಿಗೂ ಹೆಚ್ಚಿನ ಬೆಲೆಗೆ ಮೀನು ಮಾರಾಟವಾಗಿದೆ.
ಇದನ್ನೂ ಓದಿ: ಸುರತ್ಕಲ್ ಬೀಚ್‌ನಲ್ಲಿ ಭಾರಿ ಪ್ರಮಾಣದ ತೈಲ ಜಿಡ್ಡು ಪತ್ತೆ
ಅಸಾನಿ ಚಂಡ ಮಾರುತದ ಪರಿಣಾಮದಿಂದ ಕಡಲು ಪ್ರಕ್ಷ್ಯುಬ್ದ ಗೊಂಡಿದ್ದು, ಭೂತಾಯಿ ಮೀನು ಗಂಗೊಳ್ಳಿಯಿಂದ ಮಂಗಳೂರು ಕರಾವಳಿ ತೀರದಲ್ಲಿ ಹೆಚ್ಚಾಗಿದೆ ಎಂದು ಮೀನುಗಾರರು ತಿಳಿಸಿದ್ದಾರೆ.