Advertisement

ಉಪ್ಪುಂದ: ಕಾರ್ಯಾರಂಭವಾಗದ ಮ್ಯಾಗ್ನೆಟಿಕ್‌ ಘನತ್ಯಾಜ್ಯ ಘಟಕ

06:00 AM Jul 22, 2018 | Team Udayavani |

ಉಪ್ಪುಂದ: ಬೈಂದೂರು ಕ್ಷೇತ್ರದ ಪ್ರಧಾನ ವಾಣಿಜ್ಯ ಕೇಂದ್ರವಾಗಿ ಬೆಳೆಯುತ್ತಿರುವ  ಉಪ್ಪುಂದ ಗ್ರಾಮದಲ್ಲಿ ತ್ಯಾಜ್ಯ ಸಮಸ್ಯೆ ಪ್ರತಿದಿನ ಹೆಚ್ಚುತ್ತಿದೆ. ಆದ್ದ‌ರಿಂದ ಮ್ಯಾಗ್ನೆಟಿಕ್‌ ಘನತ್ಯಾಜ್ಯ ನಿರ್ವಹಣೆ ಘಟಕ ನಿರ್ಮಾಣಕ್ಕೆ ಪಂಚಾಯತ್‌ ಮುಂದಾಗಿತ್ತು. ಇದೀಗ ಉದ್ಘಾಟನೆಯಾದರೂ ಘಟಕ ಕಾರ್ಯಾರಂಭಿಸದ ಕಾರಣ ಉಪಯೋಗ ಶೂನ್ಯವಾಗಿದೆ.

Advertisement

ವಿರೋಧ
ಸ್ಥಳೀಯರ ವಿರೋಧ ವ್ಯಕ್ತವಾಗಿರುವುದರಿಂದ ಬಹು ನಿರೀಕ್ಷೆಯ ಘಟಕ ನಿರ್ಮಾಣಕ್ಕೆ ಆರಂಭದಲ್ಲಿ ಹಿನ್ನಡೆ ಉಂಟಾಗಿತ್ತು. 
ಜಿಲ್ಲೆಯಲ್ಲಿ ಪ್ರಥಮ, ರಾಜ್ಯದ ಮೂರನೇಯ ಘನತ್ಯಾಜ್ಯ ನಿರ್ವಹಣೆಯ ನೂತನ ಅಯಸ್ಕಾಂತೀಯ ಘನತ್ಯಾಜ್ಯ ಘಟಕಕ್ಕೆ ಸ್ಥಳೀಯಾಡಳಿತ ಸಾರ್ವಜನಿಕರಿಂದ 10ಲಕ್ಷ ರೂ. ಹಾಗೂ ಬೈಂದೂರು ರೋಟರಿ ಕ್ಲಬ್‌ 20ಲಕ್ಷ ರೂ. ಹಾಗೂ 12 ಲಕ್ಷ ರೂ. ದಾನಿಗಳಿಂದ ದೇಣಿಗೆ ಕ್ರೋಢಿಕರಿಸಿ, ಯಂತ್ರವನ್ನು ತಂದು ಘಟಕದ ಉದ್ಘಾಟನೆಯನ್ನು ಮಾಡಿತ್ತು.

ಜಿ.ಪಂ. ಗ್ರೀನ್‌ ಸಿಗ್ನಲ್‌
ಗ್ರಾ.ಪಂ.ಉಪ್ಪುಂದ ಹಾಗೂ ಬೈಂದೂರು ರೋಟರಿ ಕ್ಲಬ್‌ ಗೋÉಬಲ್‌ ಅನುದಾನದಡಿ ನೂತನ ಅಯಸ್ಕಾಂತೀಯ ಘನತ್ಯಾಜ್ಯ ಘಟಕಕ್ಕೆ ಉಪ್ಪುಂದ ಮಾರ್ಕೆಟ್‌ ಸಮೀಪದಲ್ಲಿ ನಿರ್ಮಾಣ ಕೆಲಸ ನಡೆದಿತ್ತು. ಸ್ಥಳೀಯ ನಿವಾಸಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಆತಂಕವನ್ನು ವ್ಯಕ್ತಪಡಿಸಿರುವ ದೂರ ಬಂದಿರುವುದರಿಂದ ಘಟಕದ ನಿರ್ಮಾಣ ಕಾರ್ಯಕ್ಕೆ ತಾಲೂಕು ಪಂಚಾಯತ್‌, ಜಿಲ್ಲಾ ಪಂಚಾಯತ್‌ ಬ್ರೇಕ್‌ ನೀಡಿದ್ದು ಇದೀಗ ಸಾಧಕ ಭಾದಕಗಳ ಕುರಿತು ಚರ್ಚಿಸಿ ಕೆಲವೊಂದು ಷರತ್ತುಗಳನ್ನು ವಿಧಿಸಿ ಪೇಟೆಯಲ್ಲಿ ಘಟಕದ ಚಾಲನೆಗೆ ಗ್ರೀನ್ ಸಿಗ್ನಲ್‌ ನೀಡಿದೆ. 

ಸದ್ಯದಲ್ಲೇ ಮುಕ್ತಿ
ಉಪ್ಪುಂದ ಗ್ರಾಮ ಪಂಚಾಯತ್‌ನ ಕೇಂದ್ರ ಬಿಂದುವಾದ ಪೇಟೆ ಯಾವಾಗಲೂ ಕಸದ ರಾಶಿಯಿಂದ ಕೂಡಿರುತ್ತದೆ. ತ್ಯಾಜ್ಯಗಳನ್ನು ದನಕರುಗಳು ತಿನ್ನುತ್ತಿರುವ ದೃಶ್ಯ ಸಾಮಾನ್ಯ ಎಂಬಂತಿತ್ತು. ದಶಕಗಳಿಂದ ಸ್ಥಳೀಯಾಡಳಿತಕ್ಕೆ ದೊಡ್ಡ ತಲೆ ನೋವಾಗಿದ್ದ ತ್ಯಾಜ್ಯ ಸಮಸ್ಯೆಗೆ ಸದ್ಯದಲ್ಲೇ ಮುಕ್ತಿ ಸಿಗಲಿದೆ. 1 ಟನ್‌ ತ್ಯಾಜ್ಯವನ್ನು 8 ಗಂಟೆಯ ಅವಧಿ ಯಲ್ಲಿ ಸುಡುವ ಈ ಯಂತ್ರವು ಈಗಾಗಲೇ ಬೆಂಗಳೂರು, ಶಿವಮೊಗ್ಗದಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. 

ಡಂಪಿಂಗ್‌ ಯಾರ್ಡ್‌ ರಚನೆಗೆ ಸೂಕ್ತ ಸ್ಥಳಾವಕಾಶದ ಕೊರತೆ ಹಿನ್ನಲೆಯಲ್ಲಿ ಸ್ಥಳೀಯಾಡಳಿತ ಮ್ಯಾಗ್ನೆಟಿಕ್‌ ಘನತ್ಯಾಜ್ಯ ನಿರ್ವಹಣೆ ಘಟಕ ನಿರ್ಮಾಣಕ್ಕೆ ಮುಂದಾಗಿತ್ತು. 

Advertisement

3 ಟನ್‌ ತ್ಯಾಜ್ಯ
ಇಲ್ಲಿ ವಾರದ ಸಂತೆ ನಡೆಯುತ್ತಿರುವುದರಿಂದ ಕೊಳೆತ ಹಣ್ಣು ಹಂಪಲು, ತರಕಾರಿಗಳು ಸೇರಿದಂತೆ ದಿನಕ್ಕೆ ಸುಮಾರು 3ಟನ್‌ ತ್ಯಾಜ್ಯ ಸಂಗ್ರಹವಾಗುತ್ತಿದೆ. ಇವುಗಳನ್ನು ವಿಲೇವಾರಿ ಮಾಡಲು ಸೂಕ್ತ ಜಾಗದ ಸಮಸ್ಯೆ ಕಾಡುತಿತ್ತು. 

ಈ ನಿಟ್ಟಿನಲ್ಲಿ ತ್ಯಾಜ್ಯ ಸಮಸ್ಯೆಗೆ ಮುಕ್ತಿ 
ದೊರಕಿಸುವ ಉದ್ದೇಶದಿಂದ ಗ್ರಾಮ ಪಂಚಾಯತ್‌ ತ್ಯಾಜ್ಯ ಘಟಕದ ನಿರ್ಮಾಣಕ್ಕೆ ನಿರ್ಧರಿಸಿತ್ತು. ಸ್ಥಳೀಯ ನಾಗರಿಕರು ಆಕ್ಷೇಪ ವ್ಯಕ್ತಪಡಿಸಿರುವುದರಿಂದ ಕಾರ್ಯನಿರ್ವಹಿಸಲು ವಿಳಂಬವಾಗಿದೆ.

ಗಾಳಿ ಒತ್ತಡ ಜಾಸ್ತಿ
ಗ್ರಾಮ ಪಂಚಾಯತ್‌ಗೆ

ತ್ಯಾಜ್ಯ ನಿರ್ವಹಣೆ ದಿನದಿಂದ ದಿನಕ್ಕೆ ದೊಡ್ಡ ಸಮಸ್ಯೆಯಾಗಿತ್ತು. ಅಯಸ್ಕಾಂತೀಯ ಘನತ್ಯಾಜ್ಯ ಘಟಕಕ್ಕೆ ತಡೆಯಾಜ್ಞೆ ಬಂದಿರುವುದರಿಂದ ತ್ಯಾಜ್ಯಕ್ಕೆ ಮುಕ್ತಿ ದೊರಕಿಸಿ ಕೊಡುವ ಪ್ರಯತ್ನಕ್ಕೆ ಆರಂಭದಲ್ಲಿ ಹಿನ್ನಡೆಯಾಗಿದೆ. ತಡೆಯಾಜ್ಞೆ ತೆರವುಗೊಂಡಿದ್ದು ಸಮಸ್ಯೆಗೆ ಬಗೆಹರಿಯಲಿದೆ. 
– ದುರ್ಗಮ್ಮ ಖಾರ್ವಿ, 
ಅಧ್ಯಕ್ಷರು, ಗ್ರಾ.ಪಂ. ಉಪ್ಪುಂದ 

ಶೀಘ್ರದಲ್ಲೇ ಕಾರ್ಯಾರಂಭ
ಕಟ್ಟಡ ಕಾಮಗಾರಿಯು ಶೇ.90ರಷ್ಟು ಮುಗಿದಿದ್ದು, ಕೆಲವೇ ದಿನಗಳಲ್ಲಿ ಉಳಿದ ಕೆಲಸಗಳು ಮುಗಿಯಲಿದ್ದು, ಸದ್ಯದಲ್ಲೇ ಘಟಕ ಕಾರ್ಯಾರಂಭಗೊಳ್ಳಲಿದೆ. 
– ಹರೀಶ ಮೊಗವೀರ, 
ಪಿಡಿಒ, ಗ್ರಾ.ಪಂ. ಉಪ್ಪುಂದ  

Advertisement

Udayavani is now on Telegram. Click here to join our channel and stay updated with the latest news.

Next