Advertisement

ಅಧಿಕಾರ ಬಿಟ್ಟು ತೊಲಗಲಿ: ಪ್ರತಿಭಟನೆ

09:48 PM Jun 14, 2021 | Team Udayavani |

ಮಂಡ್ಯ: ಪೆಟ್ರೋಲ್‌, ಡೀಸೆಲ್‌, ಗ್ಯಾಸ್‌ ಬೆಲೆ ಏರಿಕೆಖಂಡಿಸಿ 3ನೇ ದಿನವಾದ ಭಾನುವಾರ ಹೋಬಳಿವ್ಯಾಪ್ತಿಯ ತಗ್ಗಹಳ್ಳಿ ಜಿಲ್ಲಾ ಪಂಚಾಯತ್‌ ಕ್ಷೇತ್ರದ ಕಾಂಗ್ರೆಸ್‌ಪದಾ ಧಿಕಾರಿಗಳು ಪ್ರತಿಭಟನೆ ನಡೆಸಿದರು.

Advertisement

ತಾಲೂಕಿನ ತಗ್ಗಹಳ್ಳಿ ಗ್ರಾಮದಲ್ಲಿರುವ ಭಾರತ್‌ಪೆಟ್ರೋಲಿಯಂ ಬಂಕ್‌ ಬಳಿ ಜಮಾವಣೆಗೊಂಡಪ್ರತಿಭಟನಾಕಾರರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳವಿರುದ್ಧ ಧಿಕ್ಕಾರ ಕೂಗಿ, ಆಕ್ರೋಶ ವ್ಯಕ್ತಪಡಿಸಿದರು.

ಜನರ ಶೋಷಣೆ ಮಾಡುವುದೇ ಕೇಂದ್ರ ಹಾಗೂ ರಾಜ್ಯಸರ್ಕಾರಗಳ ನೀತಿಯಾಗಿದೆ ಎಂಬುದಕ್ಕೆ ಇದೇ ಸಾಕ್ಷಿಯಾಗಿದೆ. ಪ್ರತಿದಿನ ಪೆಟ್ರೋಲ್‌, ಡೀಸೆಲ್‌, ಗ್ಯಾಸ್‌ ಬೆಲೆ ಏರಿಕೆಮಾಡಿಕೊಂಡು, ಜನರ ಆರ್ಥಿಕ ಸಂಕಷ್ಟಕ್ಕೆ ಮತ್ತಷ್ಟು ಬರೆಎಳೆಯುತ್ತಿದ್ದಾರೆ. ವಿದ್ಯುತ್‌ ದರ, ಕೃಷಿ ರಸಗೊಬ್ಬರ,ಔಷಧ, ಅಡುಗೆ ಎಣ್ಣೆ, ಸಿಮೆಂಟ್‌, ಕಬ್ಬಿಣದ ಬೆಲೆ ಗಗನಕ್ಕೆಏರುತ್ತಿದೆ. ಕ್ರಿಮಿನಾಶಕಗಳು, ರಸಗೊಬ್ಬರಗಳ ಬೆಲೆಯೂಹೆಚ್ಚಾಗಿದೆ. ಈ ಸರ್ಕಾರ ಜನರಿಂದ ಪಿಕ್‌ ಪಾಕೆಟ್‌ಮಾಡುತ್ತಿದೆ.

ಹೀಗಾಗಿ ಇಂಥ ಅವೈಜಾnನಿಕ ಆಡಳಿತನಡೆಸುವ ಬಿಜೆಪಿ ಸರ್ಕಾರ ತೊಲಗಲಿ. ಮತ್ತೆಂದೂಅ ಧಿಕಾರಕ್ಕೆ ಬಾರದಿರುವಂತೆ ಜನರು ಎಚ್ಚರ ವಹಿಸಬೇಕುಎಂದರು.ಮಾಜಿ ಶಾಸಕ ರಮೇಶ್‌ಬಾಬು ಬಂಡಿಸಿದ್ದೇಗೌಡ,ಜಿಪಂ ಸದಸ್ಯ ಮಂಜುನಾಥ್‌, ತಾಪಂ ಮಾಜಿ ಸದಸ್ಯರಮೇಶ್‌ಮಿತ್ರ, ತಗ್ಗಹಳ್ಳಿ ಕೃಷ್ಣ, ಯಶೋಧ, ಪಲ್ಲವಿ, ಕೆಪಿಸಿಸಿ ಸದಸ್ಯ ನಾಗರಾಜು ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next