ಮಂಡ್ಯ:ಜಿಲ್ಲೆಯಲ್ಲಿ ನಡೆಯುತ್ತಿರುವಅಕ್ರಮ ಹಾಗೂ ಸಕ್ರಮ ಗಣಿಗಾರಿಕೆಗಳ ಬಗ್ಗೆ ಗಣಿ ಮತ್ತು ಭೂವಿಜ್ಷಾನ ಇಲಾಖೆಯ ಬಳಿ ಮಾಹಿತಿಯೇ ಇಲ್ಲ ಎಂಬಂತೆ ಉತ್ತರ ನೀಡುತ್ತಿದ್ದಾರೆ.
ಜಿಲ್ಲೆಯ ಯಾವ ಭಾಗದಲ್ಲಿ ಎಲ್ಲೆಲ್ಲಿ ಎಷ್ಟು ಅಕ್ರಮಗಣಿಗಾರಿಕೆ ನಡೆಯುತ್ತಿದೆ, ಸಕ್ರಮ ಎಷ್ಟು, ಗಣಿಗಾರಿಕೆಯ ಭೂ ಪ್ರದೇಶದ ವಿಸ್ತೀರ್ಣ, ಎಷ್ಟು ಗಣಿಗಾರಿಕೆಗೆಪರವಾನಗಿ ನೀಡಲಾಗಿದೆ. ದಂಡದ ಮೊತ್ತ, ರಾಜಧನದ ಸಂಪೂರ್ಣ ಮಾಹಿತಿಯೇ ಇಲ್ಲ. ಎಲ್ಲವೂಅಸ ³ಷ್ಟ ಹಾಗೂ ಗೊಂದಲದ ಮಾಹಿತಿ ನೀಡಿ ಅಧಿಕಾರಿಗಳು ನುಣುಚಿಕೊಳ್ಳುವಯತ್ನ ನಡೆಯುತ್ತಲೇ ಇದೆ.
ಸಚಿವರಿಗೂ ಮಾಹಿತಿ ನೀಡದ ಅಧಿಕಾರಿಗಳು:ಜಿಲ್ಲೆಯ ಅಕ್ರಮ ಗಣಿಗಾರಿಕೆ ಹಾಗೂ ಕೆಆರ್‌ಎಸ್‌ಜಲಾಶಯ ಸುರಕ್ಷತೆಗೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ, ಅಧಿಕಾರಿಗಳಸಭೆ ನಡೆಸಿ ಮಾಹಿತಿ ಕೇಳಿದರೆ ಯಾವುದೇ ಸ್ಪಷ್ಟ ಉತ್ತರನೀಡಿಲ್ಲ. ಇದರಿಂದ ಅಧಿಕಾರಿಗಳ ವೈಫಲ್ಯ ಎದ್ದುಕಾಣುತ್ತಿದೆ. ಅಕ್ರಮ ಗಣಿಗಾರಿಕೆಗೆ ಅಧಿಕಾರಿಗಳೇಕಾರಣ. ಇದರಲ್ಲಿ ಅಧಿಕಾರಿಗಳುಶಾಮೀಲಾಗಿದ್ದಾರೆ ಎಂದು ಕಿಡಿಕಾರಿದ್ದರು.
ಸಂಸದೆ ಸುಮಲತಾ ಪ್ರಶ್ನೆಗೆ ಅಧಿಕಾರಿಗಳು ತಬ್ಬಿಬ್ಬು: ಅದರಂತೆ ಸಂಸದೆ ಸುಮಲತಾ ಸಹಎರಡು ಬಾರಿ ಅಧಿಕಾರಿಗಳ ಸಭೆ ನಡೆಸಿದ್ದರೂ,ಜಿಲ್ಲೆಯ ಗಣಿಗಾರಿಕೆ ಬಗ್ಗೆ ಸ್ಪಷ್ಟ ಮಾಹಿತಿನೀಡಿಲ್ಲ. ಮಾಹಿತಿ ನೀಡಲು ಕಾಲಾವಕಾಶತೆಗೆದುಕೊಳ್ಳುವ ಅಧಿಕಾರಿಗಳು ನಂತರ ಅದರಬಗ್ಗೆ ಚಕಾರವೇ ಎತ್ತಲ್ಲ. ಸಂಸದೆ, ಗಣಿಪ್ರದೇಶಗಳಿಗೂ ಭೇಟಿ ನೀಡಿದಾಗಲೂಅಧಿಕಾರಿಗಳು ಗಣಿ ಬಗ್ಗೆ ಮಾಹಿತಿ ನೀಡಲುತಬ್ಬಿಬ್ಟಾದಘಟನೆಗಳು ನಡೆದಿವೆ.
ರಾಜಕೀಯ ಪ್ರಭಾವ: ಗಣಿ ವಿಚಾರದಲ್ಲಿಜಿಲ್ಲೆಯ ಎಲ್ಲ ಪಕ್ಷಗಳ ರಾಜಕೀಯಮುಖಂಡರು ಇರುವುದರಿಂದ ಅಧಿಕಾರಿಗಳಮೇಲೆ ರಾಜಕೀಯ ಪ್ರಭಾವ ಹೆಚ್ಚಾಗಿದೆಎಂಬಮಾತುಗಳುಕೇಳಿ ಬರುತ್ತಿದೆ. ಪಾಂಡವಪುರದ ಬೇಬಿಬೆಟ್ಟ ಸೇರಿದಂತೆ ಸುತ್ತಮುತ ¤ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕದÒ ಮುಖಂಡರು, ನಾಯಕರ ಗಣಿಗಳು ಇವೆ.ಶ್ರೀರಂಗಪಟ್ಟಣದಲ್ಲಿ ಹಾಲಿ ಹಾಗೂ ಮಾಜಿ ಶಾಸಕರು,ಅವರಬೆಂಬಲಿಗರಕ್ವಾರೆಗಳುಇವೆ.ನಾಗಮಂಗಲ, ಮದ್ದೂರು, ಮಂಡ್ಯ, ಕೆ.ಆರ್.ಪೇಟೆ, ಮಳವಳ್ಳಿಯಲ್ಲಿಯೂ ಪಕ್ಷಗಳ ಮುಖಂಡರುಗಣಿಯಲ್ಲಿ ತೊಡಗಿಕೊಂಡಿದ್ದಾರೆ.
ಗಣಿವಿಚಾರಮುನ್ನೆಲೆಗೆ ಬಂದಾಗ ಮಾತ್ರ ಅಧಿಕಾರಿಗಳು ಕಾಟಾಚಾರದದಾಳಿ ನಡೆಸಿ ನಂತರ ಮೌನವಾಗುತ್ತಾರೆ ಎಂಬಆರೋಪಗಳು ರೈತಮುಖಂಡರಿಂದಕೇಳಿಬರುತ್ತಿವೆ. ಟಿ±ರ್³ ಗಳ ಓಡಾಟ ನಿಂತಿಲ್ಲ: ಅಕ್ರಮ ಗಣಿಗಾರಿಕೆಮೇಲೆ ಅಧಿಕಾರಿಗಳು ದಾಳಿ ಮಾಡಿ ಬೀಗಜಡಿಯಲಾಗಿದ್ದರೂ, ಆಪ್ರದೇಶಗಳಲ್ಲಿ ಕಲ್ಲು ತುಂಬಿದಟಿಪ್ಪರ್, ಲಾರಿಗಳ ಓಡಾಟ ನಿಂತಿಲ್ಲ. ಇದರಿಂದ ಗಣಿಗಾರಿಕೆ ಪ್ರದೇಶದ ಗ್ರಾಮಗಳ ರಸ್ತೆಗಳು ಹಾಳಾಗಿರುವುದು ಕುರುಹುಗಳೇ ಸಾಕ್ಷಿ. ದಾಳಿ ಮಾಡಿ ಟಿಪ್ಪರ್,ಲಾರಿ ಸೇರಿದಂತೆ ಇತರೆ ಯಂತ್ರಗಳನ್ನು ವಶಪಡಿಸಿಕೊಳ್ಳುವ ಅಧಿಕಾರಿಗಳು, ದೂರು ದಾಖಲಿಸುತ್ತಾರೆ.ಆದರೆ ಮುಂದಿನ ಕ್ರಮ ಏನು? ಎಂಬುದು ಗೊತ್ತಿಲ್ಲ.ದಂಡ ಪಾವತಿಸಿಕೊಂಡು ಬಿಟ್ಟು ಕಳುಹಿಸುತ್ತಾರೆ.ಅಲ್ಲದೆ, ಅಕ್ರಮ ಗಣಿಗಾರಿಕೆ ಹಾಗೂ ಕ್ರಷರ್‌ಗಳಿಗೆ ಬೀಗ ಮುದ್ರೆ ಹಾಕುವ ಅಧಿಕಾರಿಗಳು ಯಂತ್ರಗಳನ್ನುಅಲ್ಲಿಯೇ ಬಿಡುತ್ತಾರೆ.ಇದರಿಂದ ಮತ್ತೆ ಅಕ್ರಮ ಗಣಿಗಾರಿಕೆಗೆದಾರಿಮಾಡಿಕೊಟ್ಟಂತಾಗುತ್ತದೆ ಎಂದು ಗ್ರಾಮಸ್ಥರುಹೇಳುತ್ತಾರೆ.
ಎಚ್.ಶಿವರಾಜು