ಮದ್ದೂರು: ಕಾಡಿನಿಂದ ನಾಡಿನತ್ತ ಆಗಮಿಸಿರುವಮೂರು ಕಾಡಾನೆಗಳು ರೈತರು ಬೆಳೆದ ಬೆಳೆಯನ್ನುಹಾನಿಗೊಳಿಸಿರುವ ಘಟನೆ ತಾಲೂಕಿನ ವಿವಿಧಗ್ರಾಮಗಳಲ್ಲಿ ವರದಿಯಾಗಿದೆ.
ತಾಲೂಕಿನಕೆ.ಕೋಡಿಹಳ್ಳಿ, ಅಗರಲಿಂಗನದೊಡ್ಡಿ,ಹುಣಸೇಮರದದೊಡ್ಡಿ ಗ್ರಾಮಗಳ ವ್ಯಾಪ್ತಿಯಲ್ಲಿಕಾಣಿಸಿಕೊಂಡಿರುವ ಕಾಡಾನೆಗಳು ಸ್ಥಳೀಯಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸುವ ಜತೆಗೆ ಫಸಲನ್ನುತುಳಿದು ಹಾನಿಗೊಳಿಸಿರುವುದರಿಂದ ಮಾಲೀಕರುಪರಿಹಾರ ಒದಗಿಸುವಂತೆ ಅರಣ್ಯ ಇಲಾಖೆಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ
ಸೋಮವಾರ ರಾತ್ರಿ ಕೂಳಗೆರೆ, ಬನ್ನಹಳ್ಳಿ, ಕೆ.ಬೆಳ್ಳೂರು ಗ್ರಾಮಗಳಲ್ಲಿ ಬೀಡುಬಿಟ್ಟಿದ್ದ ಮೂರು ಗಂಡಾನೆಗಳು ಸುಮಾರು 18 ವರ್ಷದ ವಯೋಮಾನದವಾಗಿದ್ದು, ಮಂಗಳವಾರ ಬೆಳಗ್ಗೆ ಶಿಂಷಾ ನದಿಮೂಲಕ ತಾಲೂಕಿನ ವಿವಿಧ ಗ್ರಾಮಗಳೂ ಸೇರಿದಂತೆಪಟ್ಟಣದ ಶಿಂಷಾನದಿ ಸಮೀಪ ಬೀಡುಬಿಟ್ಟಿವೆ.ಮಳವಳ್ಳಿ ತಾಲೂಕಿನ ಮುತ್ತತ್ತಿ ಕಾಡಿನಿಂದಹಲಗೂರು ಮಾರ್ಗವಾಗಿ ಆಗಮಿಸಿರುವ ಆನೆಗಳನ್ನು ಮಂಗಳವಾರ ಸಂಜೆ ತಮಟೆ ಹಾಗೂಪಟಾಕಿ ಶಬ್ಧ ಕಾರ್ಯಾಚರಣೆ ಕೈಗೊಂಡು ಮರಳಿಕಾಡಿಗೆಕಳುಹಿಸ ಲುಅರಣ್ಯಇಲಾಖೆ ಅಧಿಕಾರಿಗಳುಹಾಗೂ ಸಿಬ್ಬಂದಿಗಳುಕ್ರಮ ವಹಿಸಿದ್ದರು.
ಸ್ಥಳೀಯ ಸಾರ್ವಜನಿಕರು ಜಾಗೃತಿಯಿಂದಿರುವಂತೆ ಮತ್ತು ತಮ್ಮ ಜಮೀನು ಕಡೆಗಳಿಗೆ ಹೋಗದಂತೆ ಜಿಲ್ಲಾ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಬಿ.ಎಸ್.ಶಶಿಧರ್‌ಎಚ್ಚರಿಕೆ ನೀಡಿದ್ದು, ಗ್ರಾಮಗಳಿಗೆಆನೆ ಬಂದಿರುವ ವಿಷಯ ಕಾಡ್ಗಿಚ್ಚಿನಂತೆ ಹರಡಿಆನೆಗಳ ವೀಕ್ಷಣೆಗೆ ಗ್ರಾಮಸ್ಥರು ತಂಡೋಪ ತಂಡವಾಗಿ ಆಗಮಿಸಿ ಮೊಬೈಲ್‌ನಲ್ಲಿ ಫೋಟೊ ಸೆರೆಹಿಡಿಯುತ್ತಿದ್ದ ದೃಶ್ಯ ಕಂಡುಬಂದವು. ಕಾರ್ಯಾಚರಣೆ ವೇಳೆ ವಲಯ ಅರಣ್ಯಾಧಿಕಾರಿ ನಾಗೇಂದ್ರಪ್ರಸಾದ್, ಉಪ ವಲಯ ಅರಣ್ಯಾಧಿಕಾರಿ ರವಿ,ರತ್ನಾಕರ್, ಸಿಬ್ಬಂದಿ ಹಾಜರಿದ್ದರು.