Advertisement

ತಮಿಳುನಾಡಿನಿಂದ ಬಂದು ಕಳ್ಳತನ ಮಾಡುತ್ತಿದ್ದವರ ಸೆರೆ

12:00 PM Apr 05, 2017 | |

ಬೆಂಗಳೂರು: ಬಿಎಂಟಿಸಿ ಬಸ್‌ ಹಾಗೂ ಮನೆಗಳಲ್ಲಿ ಕಳವು ಮಾಡುತ್ತಿದ್ದ ಇಬ್ಬರು ಮಹಿಳೆ ಸೇರಿದಂತೆ ಐವರು ತಮಿಳುನಾಡು ಮೂಲದ ಕಳ್ಳರನ್ನು ಗಿರಿನಗರ ಪೊಲೀಸರು ಬಂಧಿಸಿದ್ದಾರೆ. ತಮಿಳುನಾಧಿಡಿನ ಕೃಷ್ಣಗಿರಿ ಜಿಲ್ಲೆಯ ನಾಗರಾಜ್‌, ಶ್ರೀನಿವಾಸ್‌, ಭಾಗ್ಯಮ್ಮ, ತಿಮ್ಮಯ್ಯ ಮತ್ತು ಅಮರಾವತಿ ಬಂಧಿತರು. ಆರೋಪಿಗಳಿಂದ 15 ಲಕ್ಷ ಮೌಲ್ಯದ 470 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.

Advertisement

ಆರೋಪಿಗಳು ತಮಿಳುನಾಡಿನಿಂದ ರೈಲಿನಲ್ಲಿ ಬಂದು ನಿಲ್ದಾಣದಲ್ಲೇ ತಂಗುತ್ತಿದ್ದರು. ಬಿಎಂಟಿಸಿ ಬಸ್‌ಗಳಲ್ಲಿ ಪ್ರಯಾಣಿಕರ ಸೋಗಿನಲ್ಲಿ ಸಂಚರಿಸಿ ಮಹಿಳೆಯರ ಪರ್ಸ್‌ನಲ್ಲಿರುವ ಮೊಬೈಲ್‌ ಚಿನ್ನಾಭರಣ, ನಗದು, ಬೆಲೆಬಾಳುವ ವಸ್ತುಗಳನ್ನು ಕಳ್ಳತನ ಮಾಡುತ್ತಿದ್ದರು. ಅಲ್ಲದೆ. ಹಗಲು ವೇಳೆ ಬೀಗ ಹಾಕಿದ್ದ ಮನೆಗಳಿಗೆ ನುಗ್ಗಿ ಕಳವು ಮಾಡುತ್ತಿದ್ದರು. ರಾತ್ರಿ ವೇಳೆ ಕಿಟಕಿ ಮೂಲಕ ಕೈ ಹಾಕಿ ಮಲಗಿದ್ದವರ ಮೈ ಮೇಲಿದ್ದ ಒಡವೆಗಳನ್ನು ಕದಿಯುತ್ತಿದ್ದರು.

ನಕಲಿ ಕೀಯನ್ನು ಬಳಕೆ ಮಾಡಿ ದರೋಡೆ ಮಾಡುವುದನ್ನೆ ವೃತ್ತಿಯನ್ನಾಗಿಸಿಕೊಂಡಿಧಿದ್ದರು. ಕಳ್ಳತನ ಮಾಡಿದ ವಸ್ತುಗಳನ್ನು ಅತ್ತಿಬೆಲೆ, ಜಿಗಣಿ, ಬೇತಮಂಗಲ, ತಮಿಳುನಾಡಿನ ರಾಯಕೋಟೆ, ಸೊಳಗೆರೆ ಅತ್ತಿಕೋಟಂ, ಬೈರಿಕೆ ಮುಂತಾದ ಗಿರವಿ ಅಂಗಡಿಗಳಲ್ಲಿ ಅಡವಿಟ್ಟು ಹಣ ಪಡೆಯುತ್ತಿದ್ದರು ಎಂದು ಪೊಲೀಸರು ತಿಳಿಸಿªದಾರೆ.

Advertisement

Udayavani is now on Telegram. Click here to join our channel and stay updated with the latest news.

Next