ಚೆನ್ನೈ: ತಮಿಳುನಾಡಿನ ವೈದ್ಯಕೀಯ ಕಾಲೇಜುಗಳಲ್ಲಿ ಇರುವ ಸರ್ಕಾರಿ ಕೋಟಾದ ಸೀಟುಗಳಲ್ಲಿ ಶೇ. 10ರಷ್ಟನ್ನು ಅಖಿಲ ಭಾರತ ಕೋಟಾಕ್ಕೆ (ಎ.ಐ.ಕ್ಯು.) ನೀಡುವ ಪದ್ಧತಿಗೆ ಮದ್ರಾಸ್ ಹೈಕೋರ್ಟ್ ತಡೆ ನೀಡಿದೆ.
ಕೇಂದ್ರ ಸರ್ಕಾರದ ಈ ನಿಯಮದ ವಿರುದ್ಧ ತಮಿಳುನಾಡಿನಲ್ಲಿ ಅಧಿಕಾರದಲ್ಲಿರುವ ಡಿಎಂಕೆ ಸರ್ಕಾರ, ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಪೀಠ, ಈ ತೀರ್ಪು ನೀಡಿದೆ.
ಜು. 30ರಂದು ಅಧಿಸೂಚನೆ ಪ್ರಕಟಿಸಿದ್ದ ಕೇಂದ್ರ ಸರ್ಕಾರ, ಇತರೆ ಹಿಂದುಳಿದ ವರ್ಗಗಳಿಗೆ ಎಲ್ಲಾ ರಾಜ್ಯ ಸರ್ಕಾರದಡಿಯ ವೈದ್ಯಕೀಯ ಕಾಲೇಜುಗಳಲ್ಲಿ ಶೇ. 27ರಷ್ಟು ಸೀಟುಗಳನ್ನು ಮೀಸಲಿಡಬೇಕು. ಜೊತೆಗೆ, ಶೇ. 10ರಷ್ಟು ಸೀಟುಗಳನ್ನು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ (ಇ.ಡಬ್ಲ್ಯೂ.ಎಸ್) ಮೀಸಲಿಡಬೇಕು ಎಂದು ಸೂಚಿಸಿತ್ತು.
ಇದನ್ನೂ ಓದಿ:ಪುಲ್ವಾಮಾ ರಕ್ಕಸ ಸಮೀರ್ ದಾರ್ ಇನ್ನೂ ಜೀವಂತ!
ಇದರ ವಿರುದ್ಧ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದ ತಮಿಳುನಾಡು ಸರ್ಕಾರ, ಒಬಿಸಿ ಶೇ. 50ರಷ್ಟು ಮೀಸಲಾತಿ ಕೋರಿತ್ತಲ್ಲದೆ, ಸರ್ಕಾರಿ ಸೀಟುಗಳಲ್ಲಿ ಎ.ಐ.ಕ್ಯು. ಕೋಟಾಕ್ಕೆ ನೀಡುವುದಕ್ಕೆ ವಿನಾಯ್ತಿ ನೀಡಬೇಕೆಂದು ಕೋರಿತ್ತು.