Advertisement

ದೇಶಿ ಜೋಳದ 21 ತಳಿ ಸಂರಕ್ಷಿಸಿದ ರೈತ ಮಡಿವಾಳಪ್ಪ

01:13 PM Jan 08, 2018 | |

ವಿಜಯಪುರ: ವಿಜಯಪುರದ ಹಿಟ್ನಳ್ಳಿ ಕೃಷಿ ಮಹಾವಿದ್ಯಾಲಯದ ಆವರಣದಲ್ಲಿ ನಡೆದಿರುವ ಕೃಷಿ ಮೇಳದಲ್ಲಿ ದೇಶಿ ತಳಿಯ 21 ವಿವಿಧ ತಳಿಯ ಜೋಳದ ಬೀಜ ಸಂರಕ್ಷಣೆ ಮಾಡಿದ್ದು, ಸಾವಯವ ಕೃಷಿಯಲ್ಲೇ ಕಳೆದ ಒಂದು ದಶಕದಿಂದ ಈ ಸಾಧನೆ ಮಾಡಿದ್ದಾರೆ.

Advertisement

ಧಾರವಾಡ ಜಿಲ್ಲೆಯ ಮುಗಳಿ ಗ್ರಾಮದ ಮಡಿವಾಳಪ್ಪ ಹನುಮಂತಪ್ಪ ತೊಟಗಿ ಎಂಬ ರೈತ ಇದೀಗ ಕೃಷಿಮೇಳದಲ್ಲಿ ಇವರು ಬೆಳೆದ ಪ್ರದರ್ಶನಗೊಳ್ಳುತ್ತಿರುವ ಜೋಳಗಳ ಬೆಳೆಗಳು ರೈತರ ಆಕರ್ಷಣೆಯ ಕೇಂದ್ರವಾಗಿದ್ದಾರೆ. ತಮಗಿರುವ 10 ಎಕರೆ ಜಮೀನಿನಲ್ಲಿ 4 ಎಕರೆ ಪ್ರದೇಶದಲ್ಲಿ ಕಳೆದ 10 ವರ್ಷದಿಂದ ಸಗಣಿ ಗೊಬ್ಬರ ಹಾಕಿ ಸಾವಯವ ಪದ್ಧತಿಯಲ್ಲೇ ದೇಶಿ ತಳಿಯ 21 ತಳಿ ಜೋಳಗಳನ್ನು ಬೆಳೆದಿದ್ದಾರೆ.

ಕಡಿಮೆ ಮಳೆಯ ಪ್ರದೇಶದಲ್ಲಿ ಅಧಿಕ ಇಳುವರಿ ನೀಡುವ ದೇಶಿ ಜೋಳದ ತಳಿಗಳಾದ ಗಟ್ಟಿಜೋಳ, ಸಕ್ರಿಮುಕ್ರಿ ಜೋಳ, ಗಿಡಗೆಂಪು ಜೋಳ, ಬಿಳಿ ಮುತ್ತಿನ ಜೋಳ, ಹಳದಿ-ಗೋಲ್ಡನ್‌ ಜೋಳ, ಕೆಂಪುಗೊಂಡೆ ಜೋಳ, ಬಿಳಿಗೊಂಡೆ-ಕಣಮುಚಗಿ ಅರಳಿನ ಜೋಳ, ಕರಿಗೊಂಡೆ ಮುತ್ತಿನ ಜೋಳ, ದೋಸೆ ಜೋಳ, ಪಿಂಜ್ಯಾಳಿ ಜೋಳ, ಗೊಂಡೆ ಜೋಳ, ಕರಿಗುಬ್ಬಿ ಜೋಳ, ಗಿಜಗನ ಜೋಳ-ಬಿಳಿಮುಕ್ಕಿನ ಜೋಳ, ಗಟ್ಟಿತೆನಿ ಜೋಳ, ಸೀತನಿ ಜೋಳ, ಕೆಂಪು ಮುಸುಕಿನ ಜೋಳ, ಅರಳಿನ ಜೋಳ, ನಿಡಗುಂದಿ ಜೋಳ, ಬಿದರಕುಂದಿ ಜೋಳ, ನಂದ್ಯಾಳ ಬಿಳಿಜೋಳ ತಳಿಗಳನ್ನು ಸಂರಕ್ಷಿಸಿ, ರೈತರಿಗೆ ಮಾರಿ ಲಾಭ ಗಳಿಸುತ್ತಿದ್ದಾರೆ.

ದಶಕದ ಹಿಂದೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಗುಂಡೇನಟ್ಟಿಯ ಬೀಜಬ್ಯಾಂಕ್‌ ಮುಖ್ಯಸ್ಥರಾದ ಶಂಕ್ರಣ್ಣ ಲಂಗಟಿ ಅವರ ಸಂಪರ್ಕದ ಬಳಿಕ ದೇಶಿ ಮೂಲದ ಜೋಳದ ವಿವಿಧ ಸ್ಥಾನಿಕ ಬೀಜಗಳನ್ನು ಸಂಗ್ರಹಿಸಿ ಬೀಜೋತ್ಪಾದನೆ ಮಾಡಿಕೊಂಡು, ಇದೀಗ ಸ್ವಯಂ ತಾವೇ ಈ ಜೋಳ ಬೆಳೆಗಳ ಮಾರಾಟಕ್ಕೆ ಮುಂದಾಗಿದ್ದಾರೆ. 

ಆರಂಭಲ್ಲಿ ಕಡಲೆ ಬೆಳೆಯುತ್ತಿದ್ದ ಇವರಿಗೆ ಕೀಟ-ರೋಗ ಬಾಧೆಯ ಹೆಚ್ಚಾದ ಕಾರಣ ಕೀಟ-ರೋಗ ಬಾಧೆ ವಿರಳ ಎನಿಸಿರುವ ದೇಶಿ ಜೋಳ ಬಿತ್ತನೆಗೆ ಮುಂದಾಗಿ ಅದರಲ್ಲಿ ಸಾಧನೆ ಮೆರೆದಿದ್ದಾರೆ. ಹಲವು ಕೃಷಿ ಮೇಳಗಳಲ್ಲಿ ಭಾಗವಹಿಸಿರುವ ಮಡಿವಾಳಪ್ಪ, ರಸಗೊಬ್ಬರ-ವಿದೇಶಿ ತಳಿ ಬೀಜ ಬಿತ್ತನೆಗೆ ಮುಕ್ತಿ ನೀಡಲು ದೇಶಿ ರೋಗ ನಿರೋಧ ಶಕ್ತಿ ಹೊಂದಿರುವ ಹಾಗೂ ಅಧಿಕ ಪೌಷ್ಟಿಕಾಂಶ ಹೊಂದಿರುವ ದೇಶಿ ತಳಿ ಜೋಳ ಬಿತ್ತನೆಜೋಳ ಬೆಳೆಯಲು ಪ್ರೇರೇಪಿಸುತ್ತಿದ್ದಾರೆ. ಲಾಭದಾಯಕ ಮಾತ್ರವಲ್ಲ ಎಂದು ಮೇಳಕ್ಕೆ ಬರುವ ರೈತರನ್ನು ದೇಶಿ ತಳಿಯ ಜೋಳ ಬೆಳೆಯ ಮಹತ್ವ ಸಾರುತ್ತಿದ್ದಾರೆ.

Advertisement

ಪ್ರಸಕ್ತ ಸಂದರ್ಭದಲ್ಲಿ ವಿದೇಶಿ ತಳಿ ಬೀಜಗಳನ್ನುಧಿಕ್ಕರಿಸಿ, ದೇಶಿ ತಳಿಯ ಜೋಳದ ಬೀಜ ಸಂರಕ್ಷಣೆ ಮುಂದಾಗಿರುವ
ಮಡಿವಾಳಪ್ಪ ಅವರ ಕ್ರಮ ಸ್ವಾಗತಾರ್ಹ. ಬರುವ ದವನದ ಹುಣ್ಣಿಮೆ ಸಂದರ್ಭದಲ್ಲಿ ನಮ್ಮ ಗ್ರಾಮದಲ್ಲಿ ಬಸವೇಶ್ವರ ಜಾತ್ರೆಯಲ್ಲಿ ಕೃಷಿ ಮೇಳ ಆಯೋಜಿಸಲು ನಿರ್ಧರಿಸಿದ್ದು, ಅಲ್ಲಿ ಇಂಥವರನ್ನು ಆಹ್ವಾನಿಸುತ್ತೇವೆ.  ಗುರುನಾಥ ಬಿರಾದಾರ ಪ್ರಗತಿಪರ ರೈತ, ಬಸರಕೋಡ-ಮುದ್ದೇಬಿಹಾಳ

„ಜಿ.ಎಸ್‌. ಕಮತರ 

Advertisement

Udayavani is now on Telegram. Click here to join our channel and stay updated with the latest news.

Next