Advertisement

ಮಡಿವಾಳರು ರಾಜಕೀಯವಾಗಿ ಸಂಘಟಿತರಾಗಿ

12:25 PM Feb 11, 2018 | Team Udayavani |

ತಿ.ನರಸೀಪುರ: ಆರ್ಥಿಕವಾಗಿ ಹಿಂದುಳಿದಿರುವ ಮಡಿವಾಳ ಸಮುದಾಯ ರಾಜಕೀಯವಾಗಿ ಸಂಘಟಿತರಾಗುವ ಅನಿವಾರ್ಯತೆ ಇದೆ ಎಂದು ತಲಕಾಡು ಜಿಲ್ಲಾ ಪಂಚಾಯಿತಿ ಸದಸ್ಯ ಟಿ.ಎಚ್‌. ಮಂಜುನಾಥನ್‌ ಹೇಳಿದರು.

Advertisement

ಪಟ್ಟಣದ ಶ್ರೀರಾಂಪುರದಲ್ಲಿರುವ ಶ್ರೀ ವೀರಮಡಿವಾಳ ಮಾಚಿದೇವರ ದೇವಾಲಯದ ಮುಂಭಾಗದಲ್ಲಿ ಮಡಿವಾಳರ ಸಂಘವು ದೇವಾಲಯದ 24 ನೇ ವರ್ಷದ ವಾರ್ಷಿಕೋತ್ಸವ ಹಾಗೂ ಮಾಚಿದೇವರ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದರು.

ಮಡಿವಾಳ ಸಮುದಾಯ ಹಿಂದುಳಿದಿದೆ. ರಾಜಕೀಯವಾಗಿ ಇನ್ನೂ ಪ್ರಬಲವವಾಗಿಲ್ಲ. ಸಮುದಾಯದ ಅಭಿವೃದ್ಧಿಗೆ ಶಿಕ್ಷಣ ಬಹಳ ಮುಖ್ಯ. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಮೂಲಕ ಶೈಕ್ಷಣಿಕವಾಗಿ ಮುಂದೆ ಬರುವಂತೆ ಸಲಹೆ ನೀಡಿದರು.

ಜಾತಿರಹಿತ ಬದುಕು ಸಾಗಿಸಿ: ಮಡಿವಾಳ ಮಾಚಿದೇವರು ಬಸವಣ್ಣ ಅನುಭವ ಮಂಟಪದಲ್ಲಿ ಕಾಯಕ ನಿಷ್ಠೆಯಿಂದ ಸಾಮಾಜಿಕ ಅಸಮಾನತೆ ಹೋಗಲಾಡಿಸಲು ಪ್ರಯತ್ನ ಮಾಡಿದ ಶಿವಶರಣರು, ಬಟ್ಟೆ ತೊಳೆಯುವುದು ಅಲ್ಲ ನಮ್ಮ ಮನಸ್ಸು, ದೇಹವನ್ನು ಶುದ್ಧಮಾಡಿಕೊಂಡು ಜಾತಿರಹಿತವಾದ ಬದುಕನ್ನು ನಾವು ಸಾಗಿಸಬೇಕೆಂಬ ಸಂದೇಶ ನೀಡಿದ್ದಾರೆ. ಅವರ ತತ್ವ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.

ಭವನಕ್ಕೆ ಅನುದಾನ ಮಂಜೂರು: ಕ್ಷೇತ್ರದ ಶಾಸಕ ಹಾಗೂ ಸಚಿವ ಡಾ.ಎಚ್‌.ಸಿ. ಮಹದೇವಪ್ಪಅವರು ತಲಕಾಡು ಹಾಗೂ ಪಟ್ಟಣದ ಮಡಿವಾಳ ಸಂಘಕ್ಕೆ ತಲಾ 10 ಲಕ್ಷ ರೂ.ಅನುದಾನವನ್ನು ಭವನಕ್ಕೆ ಮಂಜೂರು ಮಾಡಿದ್ದು, ಅಗತ್ಯ ದಾಖಲೆಗಳನ್ನು ನೀಡಿ ಅನುದಾನ ಪಡೆಯುವಂತೆ ಅವರು ಸಲಹೆ ನೀಡಿದರು

Advertisement

ಜಯಂತಿಯಿಂದ ಸಂಘಟಿತರಾಗಿ: ಸಂಘದ ಕಾರ್ಯದರ್ಶಿ ಲಾಂಡ್ರಿ ಮಹೇಶ್‌ ಮಾತನಾಡಿ, ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಮೇಲೆ ನಮ್ಮ ಸಮುದಾಯಕ್ಕೆ ಸೇರಿದ ಶಿವಶರಣ ಮಡಿವಾಳ ಮಾಚಯ್ಯ ಜಯಂತಿ ಆಚರಣೆಗೆ ಅವಕಾಶ ನೀಡಿದ್ದಾರೆ. ಇದರಿಂದ ಸಮುದಾಯ ಸಂಘಟಿತರಾಗಲು ಅವಕಾಶ ದೊರಕಿದೆ ಎಂದರು.

ಇದಕ್ಕೂ ಮುನ್ನಾ ಶ್ರೀ ಗುಂಜಾನರಸಿಂಹಸ್ವಾಮಿ ದೇವಾಲಯದಿಂದ ಮಾಚಿದೇವರ ಭಾವಚಿತ್ರವನ್ನು ಪೂಜೆ ಸಲ್ಲಿಸಿ, ವೀರಗಾಸೆ ಕಲಾ ತಂಡದೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಪುರಸಭಾಧ್ಯಕ್ಷ ಸಿ. ಉಮೇಶ್‌(ಕನಕಪಾಪು),ಕಸಾಪ ಅಧ್ಯಕ್ಷ ಎಂ. ರಾಜು, ಪುರಸಭಾ ಸದಸ್ಯರಾದ ರಾಘವೇಂದ್ರ, ರಾಜಮ್ಮ, ತಾಲೂಕು ಮಡಿವಾಳ ಸಂಘದ ಅಧ್ಯಕ್ಷ ಮಹದೇವಸ್ವಾಮಿ, ಮಾಜಿ ಅಧ್ಯಕ್ಷ ಬಸವರಾಜು,

ಉಪಾಧ್ಯಕ್ಷ ಸಿದ್ಧಪ್ಪ, ಆಲಗೂಡು ಬಸವರಾಜು, ಮಹಿಳಾ ಜಿಲ್ಲಾ ಕಾರ್ಯದರ್ಶಿ ಜಯಲಕ್ಷ್ಮೀ, ಅಹಿಂದ ಜಿಲ್ಲಾಧ್ಯಕ್ಷ ಅನೂಪ್‌ ಗೌಡ, ಉಪನ್ಯಾಸಕ ಮೂಗೂರು ಕುಮಾರಸ್ವಾಮಿ, ಮುಖಂಡರಾದ ಸಿದ್ದಶೆಟ್ಟಿ, ದಯಾನಂದ, ಪ್ರಕಾಶ್‌, ಮೇದನಿ ಸಿದ್ದರಾಜು ಕೃಷ್ಣ,, ಸೋಮಣ್ಣ, ಶಾಂತರಾಜು, ರಂಜಿತ, ಸಿದ್ದರಾಜು, ಗುರು, ರಾಜು, ರೋಹಿತ್‌, ನಾಗ, ರಂಗಸ್ವಾಮಿ, ಯೋಗೇಶ್‌, ಶಂಕರ್‌, ಕಿರಣ ಪ್ರಕಾಶ್‌, ವೇದಮಲ್ಲ  ಮತ್ತಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next