Advertisement

ಮಡಿಕೇರಿ ದಸರಾಕ್ಕೆ ಚಾಲನೆ

12:22 PM Oct 18, 2020 | Suhan S |

ಮಡಿಕೇರಿ ಅ.17: ಕೋವಿಡ್‌ ಸಂಕಷ್ಟ ಮತ್ತು ಅತೀವೃಷ್ಟಿ ಹಾನಿಯ ನಡುವೆ ಐತಿಹಾಸಿಕ ಮಡಿಕೇರಿ ದಸರಾಕ್ಕೆ ಕರಗೋತ್ಸವದ ಮೂಲಕ ಚಾಲನೆ ನೀಡಲಾಗಿದೆ.

Advertisement

ನಗರದ ನಾಲ್ಕು ಶಕ್ತಿ ದೇವತೆಗಳಾದ ಶ್ರೀ ಕುಂದುರು ಮೊಟ್ಟೆ ಚೌಟಿ ಮಾರಿಯಮ್ಮ, ಶ್ರೀ ಕಂಚಿಕಾಮಾಕ್ಷಿಯಮ್ಮ, ಶ್ರೀದಂಡಿನ ಮಾರಿಯಮ್ಮ ಹಾಗೂ ಶ್ರೀಕೋಟೆ ಮಾರಿ ಯಮ್ಮ ದೇವಾಲಯಗಳ ಕರಗಗಳಿಗೆ ಪಂಪಿನ ಕೆರೆ ಬಳಿ ಸಾಂಪ್ರದಾಯಿಕ ಪೂಜೆ, ವಿಧಿ ವಿಧಾನಗಳನ್ನು ನೆರವೇರಿಸುವುದ ರೊಂದಿಗೆ ನವರಾತ್ರಿಯ ದೇವಿ ಪೂಜೆಗೆ ಮಳೆಯ ಸಿಂಚನದ ನಡುವೆ ಚಾಲನೆ ನೀಡಲಾಯಿತು.

ಕರಗಗಳು ಪಂಪಿನಕೆರೆಯಿಂದ ಬನ್ನಿ ಮಂಟಪ, ಶ್ರೀಕೋದಂಡರಾಮ ದೇವಾಲಯ, ಶ್ರೀ ಚೌಡೇಶ್ವರಿ ದೇವಾ ಲಯ, ಶ್ರೀಕನ್ನಿಕಾ ಪರಮೇಶ್ವರಿ ದೇವಾ ಲಯ, ಇತಿಹಾಸ ಪ್ರಸಿದ್ಧ ಪೇಟೆ ಶ್ರೀರಾಮ ಮಂದಿರ ದೇವಾಲಯಗಳಲ್ಲಿ ಪೂಜೆ ಯನ್ನು ಸ್ವೀಕರಿಸಿದವು. ಅನಂತರ ತಮ್ಮ ತಮ್ಮ ದೇವಾಲಯಗಳಿಗೆ ತೆರಳಿದವು.

ಕರಗೋತ್ಸವಕ್ಕೆ ಚಾಲನೆ ನೀಡುವ ಸಂದರ್ಭ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ, ಶಾಸಕ ಎಂ.ಪಿ.ಅಪ್ಪಚ್ಚುರಂಜನ್‌, ವಿಧಾನ ಪರಿಷತ್‌ ಸದಸ್ಯ ಎಂ.ಪಿ.ಸುನಿಲ್‌ ಸುಬ್ರಮಣಿ ಮತ್ತಿತರ ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತ ಅಧಿಕಾರಿಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next