Advertisement

ಕೆಟ್ಟಿದ್ದ ರಸ್ತೆ ದುರಸ್ತಿ ಮಾಡಿದ್ರು, ಉದ್ಘಾಟಿಸಿದ್ರು..!

12:04 PM Jan 02, 2017 | Team Udayavani |

ದಾವಣಗೆರೆ: ರಸ್ತೆ ತುಂಬೆಲ್ಲಾ ಮಾರುದ್ದುದ ಗುಂಡಿಗಳು, ವಾಹನಗಳು ಇರಲಿ ಜನರು ಓಡಾಡುವುದಕ್ಕೂ ಯೋಚಿಸಬೇಕಾದ ಸ್ಥಿತಿ. ಸರಿಪಡಿಸುವಂತೆ ಮಹಾನಗರ ಪಾಲಿಕೆಗೆ ಮನವಿ ಮಾಡಿಕೊಂಡರು. ಆದರೆ, ಎಂದಿನಂತೆ ಪ್ರಯೋಜನವಾಗಲಿಲ್ಲ.

Advertisement

ಏನು ಮಾಡುವುದು ಎಂದು ಯೋಚಿಸಿದ ನಿವಾಸಿಗಳು ತಾವೇ ರಸ್ತೆ ದುರಸ್ತಿಗೆ ಮುಂದಾದರು. ತಾತ್ಕಾಲಿಕವಾಗಿ ದುರಸ್ತಿ ಮಾಡಿದರು ಮಾತ್ರವಲ್ಲ ತಾವೇ ಉದ್ಘಾಟಿಸಿದರು. ಇದು ಮಹಾನಗರ ಪಾಲಿಕೆ ವ್ಯಾಪ್ತಿಯ 17ನೇ ವಾರ್ಡಿನಲ್ಲಿರುವ ಮೈಸೂರು ಮಠದ ರಸ್ತೆ ನಿವಾಸಿಗಳ ಕಥೆ.

ತುಂಬಾ ಗುಂಡಿಗಳಿಂದ ಹಾಳಾಗಿದ್ದು, ವಾಹನ ಸಂಚಾರ ಮತ್ತು ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿತ್ತು. ಈ ವಿಷಯವನ್ನು ಸಂಬಂಧಪಟ್ಟ ಮಹಾನಗರ ಪಾಲಿಕೆಯ ಅಧಿಧಿಕಾರಿಗಳ ಗಮನಕ್ಕೆ ತರಲಾಯಿತು. ಯಾವ ಅಧಿಧಿಕಾರಿಗಳು ಗಮನ ಹರಿಸಲಿಲ್ಲ. ಕೊನೆಗೆ ಸ್ಥಳೀಯ ನಾಗರಿಕರು ಹಾಗೂ ಯುವಕರು ತಾತ್ಕಾಲಿಕವಾಗಿ ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚಿ ವಾಹನ ಮತ್ತು ಸಾರ್ವಜನಿಕರಿಗೆ ಅನುಕೂಲ ಮಾಡಿದ್ದಾರೆ.

ಹಾಳಾಗಿದ್ದ ರಸ್ತೆಯನ್ನು ದುರಸ್ತಿ ಮಾಡಿ ಉದ್ಘಾಟನೆಯನ್ನೂ ಮಾಡಿದರು. ರಾಜು ನೀಲಗುಂದ (ಕಭಿ), ರಾಕೇಶ್‌ ಜಾಧವ್‌, ಮಲ್ಲಿಕಾರ್ಜುನ್‌, ಬೇಕರಿ ವಿರುಪಾಕ್ಷ, ಮಂಜು, ಸಿ.ಸಿ. ತಿಲಕ್‌ , ಉಮೇಶ್‌, ಪ್ರಭು, ಸಂತೋಷ್‌, ಮಧು, ಮಾಲತೇಶ್‌, ಪರಶು, ಅಂಜಿನಿ, ಮುಬಾರಕ್‌, ಪವನ್‌, ಮಲ್ಲೇಶ್‌, ಪ್ರಭು, ರಮೇಶ್‌ ಇತರರು ಈ ಕಾರ್ಯದಲ್ಲಿ ಕೈ ಜೋಡಿಸಿದವರು. 

Advertisement

Udayavani is now on Telegram. Click here to join our channel and stay updated with the latest news.

Next