Advertisement

ಮಡಂತ್ಯಾರು: ಇಂದು ಬಳ್ಳಮಂಜ ಜೋಡುಕರೆ ಕಂಬಳ

10:41 AM Dec 10, 2017 | Team Udayavani |

ಬಂಟ್ವಾಳ : ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದ ತೇರ ಬಾಕಿಮಾರು ಗದ್ದೆಯಲ್ಲಿ ನಡೆಯುವ ಶೇಷ ನಾಗ ಜೋಡುಕರೆ ಕಂಬಳ ದೇವರ ಕಂಬಳ ಎಂದೇ ಹೆಸರುವಾಸಿಯಾಗಿದೆ. ಪ್ರತೀ ವರ್ಷ ಷಷ್ಠಿ ಮಹೋತ್ಸವ ಮುಗಿದ ಬಳಿಕ ಕಂಬಳ ನಡೆಯುತ್ತದೆ.

Advertisement

ಹಲವು ವರ್ಷಗಳ ಹಿಂದಿನಿಂದ ನಡೆಕೊಂಡು ಬಂದ ಕಂಬಳ ಕಾರಣಾಂತರದಿಂದ ಒಮ್ಮೆ ನಿಂತು ಬಳಿಕ ಆಪತ್ತು ನಿವಾರಣೆಗಾಗಿ ಕಂಬಳವನ್ನು ಆರಂಭಿಸಲಾಗಿತ್ತು. ಇದೀಗ ಮತ್ತೆ ಕಂಬಳಕ್ಕೆ ತಡೆ ಉಂಟಾಗಿದ್ದು ಮುಂದೆ ಏನಾಗಬಹುದು ಎನ್ನುವ ಪ್ರಶ್ನೆ ಕೂಡ ಎದುರಾಗಿದೆ. ಈ ವರ್ಷ ಮಾತ್ರ ಡಿ. 10 ರಂದು ದೇವಸ್ಥಾನದ ತೇರಬಾಕಿ ಮಾರು ಗದ್ದೆಯಲ್ಲಿ ಕಂಬಳ ನಡೆಯುತ್ತದೆ. ಮುಂದೆ ನ್ಯಾಯಾಲಯದ ತೀರ್ಪನ್ನೇ ಅನುಸರಿಸಬೇಕಾಗುತ್ತದೆ.

ತುಳುವರ ಉತ್ಸಾಹ ಕುಂದಿಲ್ಲ
 ಕಂಬಳಕ್ಕೆ ಪೂರ್ವಭಾವಿಯಾಗಿ ಕರೆ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದ್ದು ಇದರಲ್ಲಿ ತುಳುವರ ಪಾಲ್ಗೊಳ್ಳುವಿಕೆ
ಗಮನಿಸಿದಾಗ ಕಂಬಳದ ಮೇಲೆ ಇರುವ ಅಭಿಮಾನ ಇನ್ನೂ ಇದೇ ಎಂದು ತಿಳಿಯುತ್ತದೆ. ಕೃಷಿ ಭೂಮಿ ಕಡಿಮೆಯಾಗಿದ್ದು ಗದ್ದೆಯಲ್ಲಿ ದುಡಿಯುವವರ ಸಂಖ್ಯೆ ಕಡಿಮೆಯಾಗಿದೆ. ಆದರೆ ತುಳುವರ ಉತ್ಸಾಹ ಮಾತ್ರ ಕುಂದಿಲ್ಲ. ಗದ್ದೆ ಕೆಲಸದಲ್ಲಿ ಅನುಭವ ಇಲ್ಲದವರು ಕೂಡ ಕಂಬಳಕ್ಕಾಗಿ ದುಡಿಯುತ್ತಿದ್ದಾರೆ. 

ಕಂಬಳ ನಿಲ್ಲದು
ಕಂಬಳ ತುಳುನಾಡಿನ ಸಾಂಪ್ರದಾಯಿಕ ಆಚರಣೆಗಳಲ್ಲಿ ಒಂದಾಗಿದ್ದು ಇದು ತುಳು ನಾಡಿನ ಆಸ್ತಿ. ಕಂಬಳ ಕೋಣಗಳು
ಮಕ್ಕಳಿದ್ದಂತೆ. ಅವುಗಳಿಗೆ ಪೆಟ್ಟು ಕೊಟ್ಟರೆ ಮಕ್ಕಳಿಗೆ ಪೆಟ್ಟು ಕೊಟ್ಟಂತೆ. ಅವುಗಳನ್ನು ಯಾರೂ ಹಿಂಸೆ ಮಾಡುವುದಿಲ್ಲ, ಬದಲಾಗಿ ಮಕ್ಕಳಿಗಿಂತ ಹೆಚ್ಚಾಗಿ ಪ್ರೀತಿಸುತ್ತಾರೆ. ಪ್ರಾಣಿ ಹಿಂಸೆ ಎನ್ನುವ ಕಾರಣ ಹೇಳಿ ನಿಷೇಧ ಮಾಡುವುದು ಸರಿ
ಯಲ್ಲ. ಕರಾವಳಿ ಜನ ಯಾವ ಹೋರಾಟಕ್ಕೂ ಸಿದ್ಧ. ಕಂಬಳ ನಿಲ್ಲಲು ಸಾಧ್ಯವಿಲ್ಲ.
ಸುಬ್ಬಯ್ಯ ಶೆಟ್ಟಿ ಕೋರಬೆಟ್ಟು,
   ಬಳ್ಳಮಂಜ ಕಂಬಳ ಸಮಿತಿ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next