Advertisement

24 ಕಿ.ಮೀ. ಸೈಕಲ್‌ ತುಳಿದಾಕೆಗೆ ಶೇ. 98.75 ಅಂಕ! ; 10ನೇ ತರಗತಿ ಫ‌ಲಿತಾಂಶದಲ್ಲಿ ಮೇಲುಗೈ

03:31 AM Jul 06, 2020 | Hari Prasad |

ಭಿಂಡ್‌: ಶಾಲೆಗೆ ಹೋಗಿಬರಲು ಪ್ರತಿದಿನ 24 ಕಿ.ಮೀ. ಸೈಕಲ್‌ ತುಳಿಯುತ್ತಿದ್ದ ಮಧ್ಯಪ್ರದೇಶದ ಭಿಂಡ್‌ ಜಿಲ್ಲೆಯ ರೋಶನಿ ಭದೋರಿಯಾ, ಇತ್ತೀಚೆಗೆ ಅಲ್ಲಿ ನಡೆದಿದ್ದ ರಾಜ್ಯಮಟ್ಟದ 10ನೇ ತರಗತಿ ಪರೀಕ್ಷೆಯಲ್ಲಿ ಶೇ. 98.75ರಷ್ಟು ಅಂಕಗಳನ್ನು ಗಳಿಸಿ ಗಮನ ಸೆಳೆದಿದ್ದಾಳೆ. ಮುಂದೆ ನಾಗರಿಕ ಸೇವೆಯಲ್ಲಿ ತೊಡಗಿಸಿಕೊಳ್ಳುವ ಮಹದಾಸೆ ಈಕೆಯದು.

Advertisement

ಚಂಬಲ್‌ ಪ್ರಾಂತ್ಯದ ಭಿಂಡ್‌ ಜಿಲ್ಲೆಯ ಅಜ್ನೋಲ್‌ ಎಂಬ ಹಳ್ಳಿಯ ನಿವಾಸಿಯಾದ ಈಕೆಯ ತಂದೆ ಪುರುಷೋತ್ತಮ್‌ ಭದೋರಿಯಾ ಒಬ್ಬ ಸಾಮಾನ್ಯ ರೈತ.

ಮಗಳನ್ನು ಚೆನ್ನಾಗಿ ಓದಿಸಲೇಬೇಕು ಎಂಬ ಹಂಬಲದಿಂದ ಆಕೆಯನ್ನು ಸಮೀಪದ ಶಾಲೆಯೊಂದಕ್ಕೆ ಸೇರಿಸಿದ್ದರು.
ಆ ಶಾಲೆಗೆ ಹೋಗಿ ಬರಲು ಬಸ್‌ ಸೌಕರ್ಯವಿತ್ತು. 8ನೇ ತರಗತಿವರೆಗೆ ಆ ಶಾಲೆಯಲ್ಲಿ ಕಲಿತ ಆಕೆಯನ್ನು ಅನಂತರ ತಮ್ಮ ಗ್ರಾಮಕ್ಕೆ ಸ್ವಲ್ಪ ದೂರದಲ್ಲಿರುವ ಮೇಗಾಂವ್‌ನಲ್ಲಿರುವ ಸರಕಾರಿ ಹೈಸ್ಕೂಲಿಗೆ ಸೇರಿಸಿದರು. ಆದರೆ ಆ ಶಾಲೆಗೆ ಹೋಗಿಬರಲು ಬಸ್‌ ಅಥವಾ ಇನ್ಯಾವುದೇ ಸಾರಿಗೆ ಸೌಕರ್ಯವಿರಲಿಲ್ಲ. ಹಾಗಾಗಿ ಆಕೆಗೆ ಸೈಕಲ್‌ ತುಳಿಯುವ ಅನಿವಾರ್ಯತೆ ಸೃಷ್ಟಿಯಾಯಿತು.

‘ಶಾಲೆಗೆ ಸರಿಯಾದ ಸಮಯಕ್ಕೆ ಹೋಗಿ ಬರುತ್ತಿದ್ದೆ. ಪ್ರತಿದಿನ ಶಾಲೆಗೆ ಹಿಂದಿರುಗಿದ ಅನಂತರ 6ರಿಂದ 7 ಗಂಟೆಯ ವರೆಗೆ ಅಧ್ಯಯನ ಮಾಡುತ್ತಿದ್ದೆ. ಹಾಗಾಗಿಯೇ ಉತ್ತಮ ಅಂಕ ಗಳಿಸಲು ಸಾಧ್ಯವಾಯಿತು. ಮುಂದೆ ನಾಗರಿಕ ಸೇವೆಗೆ ಸೇರ್ಪಡೆಯಾಗುವ ಗುರಿ ಹೊಂದಿದ್ದೇನೆ’ ಎಂದು ರೋಶನಿ ತನ್ನ ಮನದಿಂಗಿತವನ್ನು ಹಂಚಿಕೊಂಡಿದ್ದಾಳೆ.
ಮಗಳ ಸಾಧನೆಯನ್ನು ಮೆಚ್ಚಿಕೊಂಡಿರುವ ರೋಶನಿಯ ತಂದೆ, ಮಗಳ ಮುಂದಿನ ವಿದ್ಯಾಭ್ಯಾಸಕ್ಕಾಗಿ ಆಕೆಗೆ ಸಾರಿಗೆ ವ್ಯವಸ್ಥೆ ಕಲ್ಪಿಸುವುದಾಗಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next