Advertisement

ಸಚಿವರ ಖಾತೆ ಬದಲಾವಣೆ: ಮುನಿಸಿಕೊಂಡ ಮಾಧುಸ್ವಾಮಿ, ಸಂಪುಟ ಅತೃಪ್ತರ ಸಭೆ, ರಾಜೀನಾಮೆ?

10:30 AM Jan 21, 2021 | Team Udayavani |

ಬೆಂಗಳೂರು: ನೂತನ ಸಚಿವರುಗಳಿಗೆ ಖಾತೆ ಹಂಚಿಕೆ ಮಾಡಿ, ಹಲವು ಸಚಿವರ ಖಾತೆ ಬದಲಾವಣೆ ಮಾಡಿರುವ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಈಗ ಸಚಿವರ ಅತೃಪ್ತಿ ಎದುರಿಸಬೇಕಾಗಿದೆ. ತಮ್ಮಲ್ಲಿದ್ದ ಮಹತ್ವದ ಖಾತೆಗಳನ್ನು ಕಳೆದುಕೊಂಡ ಸಚಿವರುಗಳು ಸಿಎಂ ಬಿಎಸ್ ವೈ ವಿರುದ್ಧ ಮುನಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.

Advertisement

ತಮ್ಮಲ್ಲಿದ್ದ ಕಾನೂನು, ಸಂಸದೀಯ ವ್ಯವಹಾರ ಮತ್ತು ಸಣ್ಣ ನೀರಾವರಿ ಖಾತೆಯನ್ನು ಹಿಂಪಡೆದು ವೈದ್ಯಕೀಯ ಶಿಕ್ಷಣ, ಕನ್ನಡ-ಸಂಸ್ಕೃತಿ ಇಲಾಖೆ ನೀಡಿರುವ ಬಗ್ಗೆ ಸಚಿವ ಮಾಧುಸ್ವಾಮಿ ಗರಂ ಆಗಿದ್ದಾರೆ. ಸಿಎಂ ಬಿಎಸ್ ವೈ ನಡೆಗೆ ಮುನಿಸಿಕೊಂಡಿರುವ ಮಾಧುಸ್ವಾಮಿ ಸಂಪುಟ ಸಭೆಯಿಂದ ದೂರ ಉಳಿಯಲು ನಿರ್ಧಾರ ಮಾಡಿದ್ದಾರೆ.

ತಮ್ಮಲ್ಲಿದ್ದ ವೈದ್ಯಕೀಯ ಶಿಕ್ಷಣ ಖಾತೆಯನ್ನು ಕಳೆದುಕೊಂಡ ಆರೋಗ್ಯ ಸಚಿವ ಕೆ.ಸುಧಾಕರ್ ಕೂಡಾ ಅಸಮಾಧಾನಗೊಂಡಿದ್ದಾರೆ. ಸಿಎಂ ಬಳಿ ತೆರಳಿ ತಮ್ಮ ಮುನಿಸು ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ:ಕೊನೆಗೂ ನೂತನ ಸಚಿವರಿಗೆ ಖಾತೆ ಹಂಚಿಕೆ: ಅಂಗಾರಗೆ ಮೀನುಗಾರಿಕೆ; ಎಂಟಿಬಿಗೆ ಅಬಕಾರಿ

ಆಹಾರ ಖಾತೆ ಸಚಿವರಾಗಿದ್ದ ಗೋಪಾಲಯ್ಯ ಅವರಿಗೆ ಸಕ್ಕರೆ ಮತ್ತು ಪರಿಸರ ಇಲಾಖೆ ನೀಡಲಾಗಿದೆ. ಆದರೆ ಗೋಪಾಲಯ್ಯ ಬಿಎಸ್ ವೈ ನಡೆಗೆ ಅಸಮಾಧಾನ ಗೊಂಡಿದ್ದಾರೆ.

Advertisement

ವಸತಿ ಖಾತೆಯ ಮೇಲೆ ಕಣ್ಣಿಟ್ಟಿದ್ದ ಎಂಟಿಬಿ ನಾಗರಾಜ್ ಗೆ ನಿರಾಸೆಯಾಗಿದೆ. ಎಂಟಿಬಿ ಗೆ ಅಬಕಾರಿ ಖಾತೆ ನೀಡಿದ್ದು, ವಸತಿ ಖಾತೆಗಾಗಿ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.

ಖಾತೆ ಬದಲಾಣೆಯಿಂದ ಅಸಮಾಧಾನಗೊಂಡ ಸಚಿವರು ಸಭೆ ನಡೆಸುತ್ತಿದ್ದಾರೆ. ತಮಗೆ ಸಣ್ಣ ನೀರಾವರಿ ಖಾತೆ ಸಿಗದಿದ್ದಲ್ಲಿ ರಾಜೀನಾಮೆ ನೀಡುವುದಾಗಿ ಜೆಸಿ ಮಾಧುಸ್ವಾಮಿ ಹೇಳಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಸರ್ಚ್‌ ವಾರಂಟ್‌ ಮುನ್ನ ಸಮನ್ಸ್‌ನ ಆವಶ್ಯಕತೆ ಇಲ್ಲ

ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಅತೃಪ್ತಿ ಎದುರಿಸಿದ್ದ ಸಿಎಂ ಬಿಎಸ್ ವೈ ಗೆ ಇದೀಗ ಖಾತೆ ಹಂಚಿಕೆ ಸಮಯದಲ್ಲೂ ಅಸಮಾಧಾನ ಎದುರಿಸಬೇಕಾಗಿದೆ. ಆದರೆ ಹೊಸ ಖಾತೆ ಹಂಚಿಕೆ ಪಟ್ಟಿಗೆ ರಾಜ್ಯಪಾಲರು ಇನ್ನೂ ಅಂಕಿತ ಹಾಕದೇ ಇರುವುದುರಿಂದ ಪಟ್ಟಿ ಯಾವುದೇ ಸಮಯದಲ್ಲೂ ಬದಲಾಗಬಹುದು.

Advertisement

Udayavani is now on Telegram. Click here to join our channel and stay updated with the latest news.

Next