Advertisement
ಸೋಮವಾರ ಬೆಳಗ್ಗೆ ಸೂರ್ಯೋದಯದಿಂದ ಸೂರ್ಯಾಸ್ತಮಾನದ ತನಕ ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ, ಅರಣಿ ಮಥನ, ಅಗ್ನಿ ಜನನ, ಅಗ್ನಿ ಸಂಸ್ಕಾರ ನಡೆಯಿತು. ಈಶಾವಾಸ್ಯಂ ಯಾಗ ಶಾಲೆಯಲ್ಲಿ ಮಹಾರುದ್ರಯಾಗ ಪ್ರಾರಂಭದ ಬಳಿಕ ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವರಿಗೆ ಲಕ್ಷಾರ್ಚನೆ ನಡೆಯಿತು. ಸಂಜೆ ಮಂಡಲ ಪೂಜೆ, ದ್ರವ್ಯ ಪೂಜೆ, ಅಷ್ಟಾವಧಾನ ಸೇವೆ, ಸಹಸ್ರ ನಾರಿಕೇಳ ಅಷ್ಟದ್ರವ್ಯ ಮುಹೂರ್ತ, ಧಾರ್ಮಿಕ ಸಭೆ ನಡೆಯಿತು. ಆ ಬಳಿಕ ಮಧೂರು ಸಹೋದರಿಯರಿಂದ ಶಾಸ್ತ್ರೀಯ ಸಂಗೀತ, ನಾಟ್ಯ ನಿಲಯ ಬಾಲಕೃಷ್ಣ ಮಾಸ್ತರ್ ಮಂಜೇಶ್ವರ ಅವರ ಶಿಷ್ಯೆಯರಿಂದ ನೃತ್ಯ ವೈಭವ ಜರಗಿತು.
ಇತಿಹಾಸ ಪ್ರಸಿದ್ಧ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಕ್ಷೇತ್ರ ತಂತ್ರಿವರ್ಯರಾದ ಬ್ರಹ್ಮಶ್ರೀ ದೇರೇಬೈಲು ಹರಿಕೃಷ್ಣ ತಂತ್ರಿಗಳವರ ದಿವ್ಯ ನೇತೃತ್ವದಲ್ಲಿ ನಡೆಯುತ್ತಿರುವ ಮಹಾರುದ್ರ ಯಾಗ ಲಕ್ಷಾರ್ಚನೆ, ಚದುರ್ವಿಂಶತ್ಯುತ್ತರ ಸಹಸ್ರ ನಾರಿಕೇಲ ಮಹಾ ಗಣಯಾಗ, ಸಾರ್ವಜನಿಕ ಶ್ರೀ ಸತ್ಯವಿನಾಯಕ ವ್ರತ ಕಾರ್ಯಕ್ರಮದ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಎಡನೀರು ಮಠಾಧೀಶ ಶ್ರೀ ಕೇಶವಾನಂದ ಭಾರತೀ ಸ್ವಾಮಿ ಶ್ರೀಪಾದಂಗಳವರು ದೀಪ ಪ್ರಜ್ವಲನಗೊಳಿಸಿ ಅನುಗ್ರಹ ನೀಡಿದರು. ಕಾರ್ಯಕ್ರಮದಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಯು.ಟಿ. ಆಳ್ವ ಅವರು ಅಧ್ಯಕ್ಷತೆ ವಹಿಸಿದರು. ಕ್ಷೇತ್ರದ ಪವಿತ್ರಪಾಣಿ ರತನ್ ಕುಮಾರ್ ಕಾಮಡ, ಕ್ಷೇತ್ರದ ಪ್ರಧಾನ ಅರ್ಚಕರಾದ ಶ್ರೀಕೃಷ್ಣ ಉಪಾಧ್ಯಾಯ, ಮಧೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಮಾಲತಿ ಸುರೇಶ್, ನ್ಯಾಯವಾದಿ ಕೆ. ಶ್ರೀಕಾಂತ್, ದಿನೇಶ್ ಮಡಪ್ಪುರ, ಶ್ರೀಕೃಷ್ಣ ಶಿವಕೃಪಾ, ದಿನಕರ ಭಟ್ ಮಾವೆ ವಿಟ್ಲ, ಎಂ.ಜಿ. ರಾಮಕೃಷ್ಣನ್, ಮನೋಹರ ಶೆಟ್ಟಿ, ಶಂಕರನಾರಾಯಣನ್, ದಾಸಣ್ಣ ಆಳ್ವ ಮೊದಲಾದವರು ಮಾತನಾಡಿದರು.
Related Articles
Advertisement
ಇಂದಿನ ಕಾರ್ಯಕ್ರಮ ಫೆ.28ರಂದು ವಿವಿಧ ಭಜನ ತಂಡಗಳಿಂದ ಭಜನೆ, ಬೆಳಗ್ಗೆ 6ರಿಂದ ಚತುರ್ವಿಂಶತ್ಯುತ್ತರ ಸಹಸ್ರ ನಾಳಿಕೇರ ಅಷ್ಟದ್ರವ್ಯ ಮಹಾಗಣಯಾಗ, 11ಕ್ಕೆ ಪೂರ್ಣಾಹುತಿಗೊಳ್ಳಲಿದೆ. ಸಂಜೆ 5ರಿಂದ ಸಾರ್ವಜನಿಕ ಶ್ರೀ ಸತ್ಯವಿನಾಯಕ ಪೂಜೆ, ರಾತ್ರಿ 8 ರಿಂದ ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಅವರ ಅಧ್ಯಕ್ಷತೆಯಲ್ಲಿ ನಡೆಯುವ ಧಾರ್ಮಿಕ ಸಭೆಯಲ್ಲಿ ಶ್ರೀಧಾಮ ಮಾಣಿಲದ ಸ್ವಾಮೀಜಿಗಳವರು ಆಶೀರ್ವಚನ ನೀಡುವರು. ಮಧ್ಯಾಹ್ನ 1ರಿಂದ ಶ್ರೀ ಬೊಡ್ಡಜ್ಜ ಯಕ್ಷಭಾರತಿ ಮಧೂರು ಅವರಿಂದ ದಕ್ಷಾಧ್ವರ ಯಕ್ಷಗಾನ ಕೂಟ, ರಾತ್ರಿ 10ರಿಂದ ಅಗ್ರಗಣ್ಯ ಕಲಾವಿದರ ಕೂಡುವಿಕೆಯಿಂದ ಭಸ್ಮಾಸುರ ಮೋಹಿನಿ ಯಕ್ಷಗಾನ ಬಯಲಾಟ ಜರಗಲಿದೆ.