Advertisement

ಬಿಜೆಪಿ ಅಭ್ಯರ್ಥಿಯಾಗಿ ನಟಿ ಮಾಧುರಿ ದೀಕ್ಷಿತ್‌ ಪುಣೆಯಿಂದ ಸ್ಪರ್ಧೆ ?

11:22 AM Dec 07, 2018 | udayavani editorial |

ಮುಂಬಯಿ : 2019ರ ಲೋಕಸಭಾ ಚುನಾವಣೆಗೆ ಪುಣೆ ಕ್ಷೇತ್ರದಿಂದ ಬಾಲಿವುಡ್‌ನ ಜನಪ್ರಿಯ ಸೂಪರ್‌ ಹಿಟ್‌ ನಟಿ ಮಾಧುರಿ ದೀಕ್ಷಿತ್‌ ಅವರನ್ನು ಸ್ಪರ್ಧೆಗೆ ಇಳಿಸುವುದನ್ನು ಬಿಜೆಪಿ ಈಗ ಪರಿಗಣಿಸುತ್ತಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

Advertisement

ಈ ವರ್ಷ ಜೂನ್‌ ನಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರು ಪಕ್ಷದ ಸಂಪರ್ಕ್‌ ಫಾರ್‌ ಸಮರ್ಥನ್‌ ಅಭಿಯಾನದ ಸಂದರ್ಭದಲ್ಲಿ ಮಾಧುರಿ ದೀಕ್ಷಿತ್‌ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿ ಪ್ರಧಾನಿ ನರೇಂದ್ರ ಮೋದಿ ಸರಕಾರ ಸಾಧನೆಗಳನ್ನು ವಿವರಿಸಿದ್ದರು.

ಪುಣೆ ಲೋಕಸಭಾ ಕ್ಷೇತ್ರದಿಂದ ಮಾಧುರಿ ದೀಕ್ಷಿತ್‌ ಅವರನ್ನು ಕಣಕ್ಕಿಳಿಸುವ ನಿಟ್ಟಿನಲ್ಲಿ ಆಕೆಯ ಹೆಸರನ್ನು ಪಕ್ಷವು ಸಂಭಾವ್ಯಕರ ಪಟ್ಟಿಗೆ ಸೇರಿಸಿಕೊಂಡಿದೆ ಎಂದು ರಾಜ್ಯದ ಹಿರಿಯ ಬಿಜೆಪಿ ನಾಯಕರೋರ್ವರು ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next