Advertisement

ನಿಮಗೆ ಇಷ್ಟವಾದದ್ದನ್ನು ಸಿನಿಮಾ ಮಾಡಿ, ತೋರಿದ್ದನ್ನೆಲ್ಲಾ ಅಲ್ಲ: ಮಧುರ್ ಭಂಡಾರಕರ್

12:45 PM Nov 25, 2019 | keerthan |

ಪಣಜಿ: ನಾನು ಪತ್ರಕರ್ತನಾಗಿದ್ದರೂ ಕಥೆ ಹೇಳುವುದು ಸಿನಿಮಾದ ಮೂಲಕ, ಪತ್ರಕರ್ತರು ತಮ್ಮ ಲೇಖನಗಳ ಮೂಲಕ ಕಥೆ ಹೇಳುತ್ತಾರೆ ಎಂದವರು ಖ್ಯಾತ ಸಿನಿಮಾ ನಿರ್ದೇಶಕ ಮಧುರ್ ಭಂಡಾರಕರ್.

Advertisement

ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ [ಇಫಿ] ಸಂವಾದದಲ್ಲಿ ಭಾಗವಹಿಸಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡ ಮಧುರ್, ಬ್ಲಾಗ್, ಪತ್ರಿಕೆ ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಪತ್ರಕರ್ತರು ಸಮಾಜದ ಕಥೆಗಳನ್ನು ಹಂಚಿಕೊಳ್ಳುತ್ತಾರೆ. ನಾನು ಅದೇ ಕಾರ್ಯವನ್ನು ಸಿನಿಮಾಗಳ ಮೂಲಕ ಮಾಡುತ್ತೇನೆ.

ಸಮಾಜದಲ್ಲಿ ಕೆಲವು ಕಥೆಗಳನ್ನು ಮಹಿಳಾ ದೃಷ್ಟಿಕೋನದಿಂದಲೂ ಹೇಳಬೇಕು. ಹಾಗಾಗಿ ಚಾಂದಿನಿ ಬಾರ್ ಮತ್ತಿತರ ಸಿನಿಮಾ ಮಾಡಿದೆ. ನನಗೆ ಒಂದು ಒಳ್ಳೆಯ ಕಥೆಯನ್ನು ಹೇಳುವುದಷ್ಟೇ ಮುಖ್ಯ. ಅದರ ಹೊರತಾಗಿ ಏನೂ ಇಲ್ಲ. ಆ ಒಳ್ಳೆಯ ಕಥೆಯನ್ನು ಹೇಳಲು ಏನು ಬೇಕೋ ಅದನ್ನು ಆಯ್ದುಕೊಳ್ಳುತ್ತೇನೆ. ಹಲವಾರು ಕಥಾವಸ್ತುಗಳಿವೆ. ಅವುಗಳಲ್ಲಿ ಒಳ್ಳೆಯದನ್ನು ಹೇಳಲು ಸಾಧ್ಯವಾಗುವುದನ್ನು ಆಯ್ಕೆ ಮಾಡಿಕೊಳ್ಳುತ್ತೇನೆ.

ನನಗೆ ಸತ್ಯ ಜೀವನಗಾಥೆಗಳು ಬಹಳ ಇಷ್ಟ. ಅವುಗಳಿಂದ ಪ್ರೇರಣೆ ಪಡೆದು ಸಿನಿಮಾಗಳನ್ನು ಮಾಡಲು ಪ್ರಯತ್ನಿಸುವೆ. ಈಗ ಇಡೀ ಸಿನಿ ಉದ್ಯಮವೇ ಸಾಕಷ್ಟು ಬದಲಾಗಿದೆ. ಪ್ರೇಕ್ಷಕರೂ ಸಹ.

ಸಿನಿಮಾದಲ್ಲಿ ಇಂಥದ್ದೇ ಸೂಪರ್ ಹಿಟ್ ಫಾರ್ಮುಲಾ ಎಂಬುದಿಲ್ಲ. ಯಾವುದು ಕೈ ಹಿಡಿಯಬಹುದೋ, ಇಲ್ಲವೋ ಎಂದು ಹೇಳಲು ಸಾಧ್ಯವೇ ಇಲ್ಲ. ಕೆಲವೊಮ್ಮೆ ನಾವಂದುಕೊಂಡದ್ದಕ್ಕಿಂತ ಹೆಚ್ಚು ಸಾಧನೆ ಮಾಡುವ ಸಿನಿಮಾಗಳೂ ಇವೆ. ಪೇಜ್ 3 ಸಿನಿಮಾ ನಾನು ಮಾಡಿದಾಗ, ಜನರೆಲ್ಲಾ ಇದೇನು ನಿಮ್ಮ ಸಿನಿಮಾ ಹೆಸರು ? ಪೇಸ್ಟ್ರೀಯೇ? ಎಂದು ಕೇಳಿದ್ದರು. ಕೆಲವು ಸಮಯದ ಬಳಿಕ ಪ್ರತಿ ನಗರದಲ್ಲೂ ಈಗ ಪೇಜ್ 3 ಮಾದರಿಯ ಪಾರ್ಟಿಗಳು ನಮ್ಮಲ್ಲಿವೆ ಎನ್ನುತ್ತಾರೆ. ಅಂದರೆ ಸಿನಿಮಾ ತಲುಪಿದ ಬಗೆ ನನ್ನನ್ನು ಅಚ್ಚರಿಗೊಳಿಸಿದೆ ಹಾಗೂ ಒಳನಾಡಿನ ಪ್ರೇಕ್ಷಕರನ್ನೂ ತಲುಪಿದ್ದೇನೆ ಎಂದು ಖುಷಿಯೂ ಆಗಿದೆ.
ಡಿಜಿಟಿಲ್ ಮಾಧ್ಯಮ ಒಂದು ಹೊಸ ದಾರಿ. ಅಲ್ಲಿ ಸೆನ್ಸಾರ್ಶಿಪ್ ಎಲ್ಲದೇ ಸತ್ಯ ಕಥೆಗಳನ್ನು ಹೇಳಬಹುದಾಗಿದೆ. ಈ ಮಾಧ್ಯಮಗಳ ಮೂಲಕ ಹಲವು ವಿಷಯಗಳೂ ತಿಳಿಯತ್ತಿವೆ. ಸಿನಿಮಾ ಮಾಡುವವರಿಗೆ ಇದೊಂದು ಒಳ್ಳೆಯ ಮಾಧ್ಯಮ. ನಾನೂ ಒಂದೆರಡು ವಿಷಯಗಳನ್ನು ಅಧ್ಯಯನ ಮಾಡುತ್ತಿದ್ದೇನೆ.
ಇಂದು ಮೊಬೈಲ್ ಫೋನ್ ಮೂಲಕವೂ ಸಿನಿಮಾಗಳನ್ನು ಮಾಡಬಹುದಾಗಿದೆ. ಇದೊಂದು ಒಳ್ಳೆಯ ಅವಕಾಶ ಯುವ ಸಿನಿ ಉತ್ಸಾಹಿಗಳಿಗೆ. ಆದರೆ ನನ್ನ ಕೋರಿಕೆ ಮತ್ತು ಸಲಹೆ ಏನೆಂದರೆ, ನೀವು ನಂಬುವುದನ್ನು, ನಿನಗೆ ಇಷ್ಟವಾದದ್ದನ್ನು ಸಿನಿಮಾ ಮೂಲಕ ಮಾಡಲು ಪ್ರಯತ್ನಿಸಿ, ತೋರಿದ್ದನ್ನೆಲ್ಲಾ ಅಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next