Advertisement
ಮಧುಗಿರಿಜಿಲ್ಲೆಯಾಗಲು ಅರ್ಹತೆಯಿದೆಯಾ?
Related Articles
Advertisement
ಮಧುಗಿರಿ ಜಿಲ್ಲೆಯಾದರೆ ಮೂಲಭೂತ ಸೌಕರ್ಯ ಕೊರತೆಯಿದೆಯಾ?
ಪೊಲೀಸ್ ಎಸ್ಪಿ ಕಚೇರಿ ಹಾಗೂ ಡೀಸಿ ಕಚೇರಿ ಹೊರತುಪಡಿಸಿಎಲ್ಲ ಇಲಾಖೆಗಳ ಉಪವಿಭಾಗವಿದೆ.ಜಿಲ್ಲೆಯಾಗಿಘೋಷಣೆಯಾದರೆ ಸರ್ಕಾರಿ ಕಚೇರಿಗಳಿಗೆ ಕೊರತೆಯಿಲ್ಲ. ಆದರೆ ನೀರಾವರಿ ಹಾಗೂ ಕೈಗಾರಿಕೆಗಳ ಅಭಿವೃದ್ಧಿಗೆ ಮಾತ್ರ ಪೂರಕ ಅನುದಾನ ಒದಗಿಸಬೇಕಾಗುತ್ತದೆ.
ಜಿಲ್ಲಾಕೇಂದ್ರದಿಂದಕೃಷಿ-ಕೈಗಾರಿಕೆಗಳಿಗೇನುಲಾಭ?
ಜಿಲ್ಲಾ ಕೇಂದ್ರವಾದೊಡನೆ ಅನೇಕ ಅನುದಾನ ಹರಿದು ಬರಲಿದೆ. ನೀರಾವರಿ ಯೋಜನೆ ಹಾಗೂಕೈಗಾರಿಕೆಗಳ ಸ್ಥಾಪನೆಗೆ ಮುಂದಾಲಿದ್ದು, ಕೃಷಿಯಲ್ಲೂಉದ್ಯೋಗ, ಮಾರುಕಟ್ಟೆ ವಿಸ್ತರಣೆಯಾಗಲಿದ್ದು,ಕೈಗಾರಿಕಾ ವಲಯದ ಅನುಷ್ಠಾನ ಹಾಗೂ ಎತ್ತಿನಹೊಳೆಯಿಂದ ಅಂತರ್ಜಲ ವೃದ್ಧಿಸಿ ಕೃಷಿಹಾಗೂ ಕೃಷಿಯೇತರ ನಿರುದ್ಯೋಗಿಗಳಿಗೆ ಉದ್ಯೋಗ ಲಭಿಸಲಿದೆ.
ಕ್ಷೇತ್ರದ ಅಭಿವೃದ್ಧಿಗೆ ಬಿಜೆಪಿ ಸರ್ಕಾರದ ಸ್ಪಂದನೆ ಹೇಗಿದೆ ?
ಎಚ್ ಡಿಕೆ ಅವಧಿಯಲ್ಲಿ ತಂದ ಕಾಮಗಾರಿಗಳು ಮಾತ್ರ ನಡೆಯುತ್ತಿದ್ದು, ಸರ್ಕಾರಬದಲಾದ ಮೇಲೆಮಧುಗಿರಿಯ ಮೇಲೆ ಮಲತಾಯಿ ಧೋರಣೆ ತಾಳಲಾಗಿದೆ. ಒಳ್ಳೆಯ ಬೆಳವಣಿಗೆಯಲ್ಲ. ಸಮ್ಮಿಶ್ರ ಸರ್ಕಾರದ ಅನು ದಾನವನ್ನೂ ತಡೆಹಿಡಿದಿದ್ದು, ಕನಿಷ್ಠ ಅನುದಾನವನ್ನೂ ಸಹ ನೀಡದೆ ಅಭಿವೃದ್ಧಿಗೆ ಅಡ್ಡಗಾಲು ಹಾಕಲಾಗುತ್ತಿದೆ. ಈ ಬಗ್ಗೆ ಸದನದಲ್ಲಿ ಹೋರಾಟ ಮಾಡುವೆ.
ಯುಜಿಡಿ ಕಾಮಗಾರಿ ನಡೆಯುತ್ತಿದ್ದು, ಹೇಮಾವತಿಯಿಂದಹೆಚ್ಚುವರಿ ನೀರಿಗೆಯಾವ ಕ್ರಮಕೈಗೊಂಡಿದ್ದೀರಾ ?
ವರ್ಷಕ್ಕೆ 3 ಬಾರಿ ಸಿದ್ದಾಪುರ ಕೆರೆಗೆ ನೀರು ತಂದ ಶಾಸಕ ನಾನು. ಇದು ಇತಿಹಾಸವಾಗಿದ್ದು ಯಾರ ಮೇಲೂ ಗೂಬೆ ಕೂರಿಸಲ್ಲ. ಯುಜಿಡಿ ಅನುಷ್ಠಾನಕ್ಕೆ ಬೇಕಾಗುವ ಅಗತ್ಯ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳಲಾಗುವುದು.
ಜಿಲ್ಲಾ ಕ್ಷೇತ್ರದ ಪ್ರಮುಖ ಸಂಪತ್ತು ಏನು?
ಮಧುಗಿರಿಯಲ್ಲಿವಿಶ್ವದ 2ನೇ ದೊಡ್ಡ ಏಕಶಿಲಾಬೆಟ್ಟವಿದ್ದು, ರಾಜರು,ಬ್ರಿಟಿಷರು ಆಳಿದ ಕೋಟೆ ಕೊತ್ತಲಗಳು ಅನಾವರಣ ಗೊಂಡಿವೆ. ಅಪರೂಪದ ಕೃಷ್ಣಮೃಗ ಅರಣ್ಯ ಧಾಮ, ಕರಡಿವನ್ಯಧಾಮ,ಮಹಾಪುರುಷರು ಕಟ್ಟಿದ ಪ್ರಸಿದ್ಧ ಹರಿಹರರಸಂಗಮದ ದೇಗುಲ. ಗೊರವನಹಳ್ಳಿಯಲಕ್ಷ್ಮೀ ದೇಗುಲ,ಸಿದ್ದರಬೆಟ್ಟ,ಮಿಡಿಗೇಶಿಹಾಗೂ ಪಾವಗಡದಬೆಟ್ಟಗಳು ಇತಿಹಾಸವನ್ನು ಸಾರುತ್ತವೆಹಾಗೂ ನೀರಾವರಿ ಯೋಜನೆ ಜಾರಿಯಾದರೆ ಬಂಗಾರ ಬೆಳೆಯುವಂತ ಮಣ್ಣು ಈ ಕ್ಷೇತ್ರದ ಬಹುಮುಖ್ಯ ಸಂಪತ್ತು. ಇದರಂತೆ ಪ್ರವಾಸಿ ತಾಣವಾದರೆ ಉದ್ಯೋಗ ಸೃಷ್ಟಿಯಾಗಲಿದೆ.