Advertisement

ಬಾಲಿವುಡ್ ಸಿನಿಮಾವಾಗಲಿದೆ ಕಾಶ್ಮೀರದ ಕೊನೆಯ ಹಿಂದೂ ಕ್ವೀನ್! ಯಾರೀಕೆ ಕೋಟ ರಾಣಿ?

10:53 AM Aug 28, 2019 | Team Udayavani |

ಮುಂಬೈ: ಕಾಶ್ಮೀರವನ್ನು ಆಳಿದ್ದ ಕೊನೆಯ ಹಿಂದೂ ರಾಣಿ “ಕೋಟ ರಾಣಿ” ಕಥೆಯನ್ನಾಧರಿಸಿದ ಸಿನಿಮಾ ಬಾಲಿವುಡ್ ನಲ್ಲಿ ಸೆಟ್ಟೇರಲು ಅಣಿಯಾಗಿದೆ. ರಿಲಯನ್ಸ್ ಎಂಟರ್ನೈಮೆಂಟ್ ಮತ್ತು ಫಾನ್ ಟೋಮ್ ಫಿಲ್ಮ್ಸ್ ಈ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದೆ.

Advertisement

14ನೇ ಶತಮಾನದಲ್ಲಿ ಕಾಶ್ಮೀರವನ್ನಾಳಿದ ಸುಂದರ ರಾಣಿ ಈಕೆ. ಅಷ್ಟೇ ಅಲ್ಲ ಚತುರ ಆಡಳಿತ, ಯುದ್ಧ ಕೌಶಲ್ಯ ಹೊಂದಿರುವುದಾಗಿಯೂ ವರದಿ ತಿಳಿಸಿದೆ.

ಇದೊಂದು ಅತೀ ದೊಡ್ಡ ಅಚ್ಚರಿಯ ಕಥಾಹಂದರವಾಗಿದೆ..ಭಾರತೀಯರಿಗೆ ಕೋಟ ರಾಣಿಯಂತಹ ವ್ಯಕ್ತಿತ್ವದ ಬಗ್ಗೆ ಭಾರತೀಯರಿಗೆ ಎಷ್ಟು ತಿಳಿದಿದೆಯೋ ಅಥವಾ ಇಲ್ಲವೋ..ಈಕೆಯನ್ನು ಕ್ಲಿಯೋಪಾತ್ರಾಳಿಗೆ ಹೋಲಿಸಿದರೂ ಅತಿಶಯೋಕ್ತಿಯಾಗಲಾರದು. ಕೋಟ ರಾಣಿ ಕಥೆ ಇವತ್ತು ಕಾಶ್ಮೀರದಲ್ಲಿ ನಡೆಯುತ್ತಿರುವ ಪರಿಸ್ಥಿತಿಗೆ ನೇರವಾಗಿ ಸಂಬಂಧಿಸಿದ್ದಕ್ಕೆ ನಾವು ಈಗ ಸಾಕ್ಷಿಯಾಗಿದ್ದೇವೆ ಎಂದು ಸಿನಿಮಾದ ಸಹ ನಿರ್ಮಾಪಕರಲ್ಲಿ ಒಬ್ಬರಾದ ಮಧು ಮಾಂಟೇನಾ ತಿಳಿಸಿದ್ದಾರೆ.

ಯಾರು ಈ ರಾಣಿ?

ಕಾಶ್ಮೀರದ ಲೋಹ್ರಾ ವಂಶದ ಸುಹಾದೇವ್ ಕಮಾಂಡರ್ ಇನ್ ಚೀಫ್ ಆಗಿದ್ದ. ಈ ಸಂದರ್ಭದಲ್ಲಿ ರಾಮಚಂದ್ರ ಅವರು ಲಡಾಖ್ ಗೆ ರಿನ್ ಚಾನ್ ನನ್ನು ಆಡಳಿತಾಧಿಕಾರಿಯನ್ನಾಗಿ ನೇಮಿಸಿದ್ದರು. ರಾಮಚಂದ್ರ ಅವರ ಮಗಳೇ ಕೋಟ ರಾಣಿ!

Advertisement

ರಿನ್ ಚಾನ್ ಕೊನೆಗೆ ಲಡಾಖ್ ಮೇಲೆ ಹಿಡಿತ ಸಾಧಿಸಬೇಕೆಂಬ ಮಹತ್ವಾಕಾಂಕ್ಷೆ ಹೊಂದುತ್ತಾನೆ. ಈತ ಕಳುಹಿಸಿದ ಸೇನಾಪಡೆ ಯುದ್ಧದಲ್ಲಿ ರಾಮಚಂದ್ರ ಅವರನ್ನು ಹತ್ಯೆಗೈಯುತ್ತದೆ. ಬಳಿಕ ಕೋಟ ರಾಣಿ ಸೇರಿದಂತೆ ಅವರ ಕುಟುಂಬ ವರ್ಗವನ್ನು ಸೆರೆ ಹಿಡಿಯುತ್ತಾರೆ. ಏತನ್ಮಧ್ಯೆ ಸ್ಥಳೀಯರ ಬೆಂಬಲದೊಂದಿಗೆ ರಿನ್ ಚಾನ್ ರಾಮಚಂದ್ರ ಪುತ್ರ ರಾವಾಚಂದ್ರ ನನ್ನು ಲಾರ್ ಮತ್ತು ಲಡಾಖ್ ಗೆ ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡುತ್ತಾನೆ.

ರಿನ್ ಚಾನ್ ರಾವಾಚಂದ್ರನ ಸಹೋದರಿ ಕೋಟ ರಾಣಿಯನ್ನು ವಿವಾಹವಾಗುತ್ತಾನೆ. ನಂತರ ರಿನ್ ಚಾನ್ ಇಸ್ಮಾಂಗೆ ಮತಾಂತರಗೊಂಡು ಸುಲ್ತಾನ್ ಸದ್ರುದ್ದೀನ್ ಹೆಸರಿನಲ್ಲಿ ಆಡಳಿತ ನಡೆಸಿದ್ದ. ಮೂರು ವರ್ಷದ ನಂತರ ಆತನೂ ಕೊಲೆಯಾಗುತ್ತಾನೆ.

ತದನಂತರ ಕೋಟ ರಾಣಿ ಕಾಶ್ಮೀರದ ಹಿಂದೂ ರಾಜನಾಗಿದ್ದ ಸಹದೇವ್ ಸಹೋದರ ಉದಯನ್ ದೇವನನ್ನು ವಿವಾಹವಾಗುತ್ತಾಳೆ. 1338ರಲ್ಲಿ ಉದಯನ್ ದೇವ ವಿಧಿವಶನಾಗುತ್ತಾನೆ. ಕೋಟ ರಾಣಿ ಕಾಶ್ಮೀರದ ಆಡಳಿತವನ್ನು ತನ್ನ ತೆಕ್ಕೆಗೆ ತೆಗೆದುಕೊಂಡ ಪುತ್ರ ಭಟ್ಟಾ ಭಿಕ್ಷಾಣಾನನ್ನು ಪ್ರಧಾನಿಯನ್ನಾಗಿ ನೇಮಕ ಮಾಡುತ್ತಾಳೆ.

Advertisement

Udayavani is now on Telegram. Click here to join our channel and stay updated with the latest news.

Next