Advertisement
ವರದಹಳ್ಳಿಯಲ್ಲಿ ಜನಿಸಿದ್ದ ಮಾಧವಾನಂದ ಸರಸ್ವತಿ ಸ್ವಾಮೀಜಿ ಶ್ರೀಧರ ಸ್ವಾಮೀಜಿಗಳ ಶಿಷ್ಯರಾಗಿ ತಮ್ಮ ಅಧ್ಯಾತ್ಮ ಜೀವನ ಆರಂಭಿಸಿದ್ದರು. ಶ್ರೀಧರರ ಆದೇಶದಂತೆ ಹೊಳೆನರಸೀಪುರದ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿಗಳ ಬಳಿ ಐದು ವರ್ಷಗಳ ಕಾಲ ವೇದಾಂತ ಮತ್ತು ಸಂಸ್ಕೃತ ವಿದ್ಯಾಭ್ಯಾಸ ಮಾಡಿದ್ದರು. ನಂತರ ಕಾವೇರಿ ತೀರ, ಸಜ್ಜನಗಢ, ಹೋಶಂಗಾಬಾದ್, ತ್ರಯಂಬಕೇಶ್ವರದಲ್ಲಿ ಕಠಿಣ ತಪೋ ಸಾಧನೆ ಮಾಡಿದ್ದರು. ಶ್ರೀಧರ ಸ್ವಾಮಿಗಳು ತಮ್ಮ ಏಕಾಂತ ವಾಸದ ಸಂದರ್ಭದಲ್ಲಿ ಮಾಧವಾನಂದರನ್ನು ಆಶ್ರಮದ ಸೇವೆಗೆ ನಿಯೋಜಿಸಿದ್ದರು. ಶ್ರೀಧರರ ಮಹಾಸಮಾಧಿಯ ನಂತರ ಉಜ್ಜಯನಿಯಲ್ಲಿ ಮತ್ತು ಉಗಾರ್‌ನಲ್ಲಿ ಕಠಿಣ ತಪಸ್ಸಾಧನೆ ಮಾಡಿ ಸನ್ಯಾಸ ದೀಕ್ಷೆ ಪಡೆದರು. ನಂತರ ಭಗವಾನ್ ದತ್ತಾತ್ರೇಯರ ಎರಡನೇ ಅವತಾರವಾದ ನರಸಿಂಹ ಸರಸ್ವತಿ ಸ್ವಾಮೀಜಿಗಳಿಂದ ಸ್ಥಾಪಿಸಲ್ಪಟ್ಟ ವಾರಣಾಸಿಯ ದತ್ತಾತ್ರೇಯ ಮಠದ ಮಹಾಂತರಾದರು.
Advertisement
ಮಾಧವಾನಂದಸರಸ್ವತಿ ಸ್ವಾಮೀಜಿ ಇನ್ನಿಲ್ಲ
11:05 AM Oct 16, 2017 | |
Advertisement
Udayavani is now on Telegram. Click here to join our channel and stay updated with the latest news.