Advertisement

ಚೈನಾದಿಂದ ದೂರಾ ದೂರಾ!’ ಮೇಡ್‌ ಇನ್‌ ಚೈನಾ’ಲಿರಿಕಲ್‌ ವಿಡಿಯೋ ಇಂದು ರಿಲೀಸ್‌

12:33 PM Jun 09, 2022 | Team Udayavani |

ನಾಗಭೂಷಣ್‌, ಪ್ರಿಯಾಂಕಾ ತಿಮ್ಮೇಶ್‌, ಗೌರವ್‌ ಶೆಟ್ಟಿ, ಅಶ್ವಿ‌ನ್‌ ರಾವ್‌ ಪಲ್ಲಕ್ಕಿ, ಅರುಣಾ ಬಾಲರಾಜ್‌, ರವಿ ಭಟ್‌ ಮೊದಲಾದವರು ಪ್ರಮುಖ ಭೂಮಿಕೆಯಲ್ಲಿ ಅಭಿನಯಿಸಿರುವ ಕಾಮಿಡಿ ಕಥಾಹಂದರದ “ಮೇಡ್‌ ಇನ್‌ ಚೈನಾ’ ಚಿತ್ರ ಜೂ.17ರಂದು ತೆರೆಗೆ ಬರುತ್ತಿರುವುದು ನಿಮಗೆ ಗೊತ್ತೇ ಇದೆ. ಈಗ ಚಿತ್ರತಂಡ ಹಾಡೊಂದು ಬಿಡುಗಡೆ ಮಾಡಲು ಮುಂದಾಗಿದೆ.

Advertisement

ಚಿತ್ರದ ಲಿರಿಕಲ್‌ ವಿಡಿಯೋ ಇಂದು ಬಿಡುಗಡೆಯಾಗುತ್ತಿದೆ. ಇಂದು “ದೂರಾ ದೂರಾ’ ಎಂಬ ಲಿರಿಕಲ್‌ ವಿಡಿಯೋ ಕ್ರಿಸ್ಟಲ್‌ಮ್ಯೂಸಿಕ್‌ ಯುಟ್ಯೂಬ್‌ನಲ್ಲಿ ಬಿಡುಗಡೆಯಾಗಲಿದೆ.

ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ಹಲವು ಸಿನಿಮಾಗಳಿಗೆ ಛಾಯಾಗ್ರಹಕರಾಗಿ ಕೆಲಸ ಮಾಡಿದ ಅನುಭವವಿರುವ ಪ್ರೀತಂ ತೆಗ್ಗಿನಮನೆ “ಮೇಡ್‌ ಇನ್‌ ಚೈನಾ’ ಈ ಚಿತ್ರವನ್ನು ನಿರ್ದೇಶಿಸುವ ಮೂಲಕ ಛಾಯಾಗ್ರಹಣದಿಂದ ನಿರ್ದೇಶನದತ್ತ ಮುಖ ಮಾಡಿದ್ದಾರೆ. ಜೊತೆಗೆ “ಮೇಡ್‌ ಇನ್‌ ಚೈನಾ’ ಚಿತ್ರಕ್ಕೆ ಪ್ರೀತಂ ತೆಗ್ಗಿನಮನೆ ಅವರೇ ಛಾಯಾಗ್ರಹಣ, ವಿಎಫ್ಎಕ್ಸ್‌ ಮತ್ತು ಸಂಕಲನ ಕೆಲಸವನ್ನೂ ನಿರ್ವಹಿಸಿದ್ದಾರೆ.

ಇದನ್ನೂ ಓದಿ:ಇಂದು 100 ಕಡೆಗಳಲ್ಲಿ ‘777 ಚಾರ್ಲಿ’ ಪ್ರೀಮಿಯರ್‌ ಶೋ

ಇನ್ನು “ಮೇಡ್‌ ಇನ್‌ ಚೈನಾ’ ಚಿತ್ರದ ಕಥಾಹಂದರದ ಬಗ್ಗೆ ಹೇಳುವುದಾದರೆ, ಲಾಕ್‌ಡೌನ್‌ ಸಂದರ್ಭ ದಲ್ಲಿ ಪತಿಯು ವಿದೇಶದಲ್ಲಿ ಲಾಕ್‌ ಆಗುತ್ತಾನೆ. ಹೆಂಡತಿ ಭಾರತ ದಲ್ಲಿರುತ್ತಾಳೆ. ಇವರ ನಡುವೆ ನಡೆಯುವ ಕಥೆಯೇ “ಮೇಡ್‌ ಇನ್‌ ಚೈನಾ’ ಕಥಾವಸ್ತು.

Advertisement

ಅಂದಹಾಗೆ, ಕೋವಿಡ್‌ ಲಾಕ್‌ಡೌನ್‌ ಸನ್ನಿವೇಶಗಳನ್ನು ಎಳೆಯಾಗಿಟ್ಟುಕೊಟ್ಟು ಈ ಸಿನಿಮಾ ಮಾಡ ಲಾಗಿದ್ದು, “ಮೇಡ್‌ ಇನ್‌ ಚೈನಾ’ ಕನ್ನಡದ ಮೊದಲ ವರ್ಚುವಲ್‌ ಸಿನಿಮಾ ಆಗಿದೆ ಎನ್ನುವುದು ಚಿತ್ರತಂಡದ ಮಾತು.

Advertisement

Udayavani is now on Telegram. Click here to join our channel and stay updated with the latest news.

Next