Advertisement

ಪೆಟ್ರೋಲ್, ಡಿಸೇಲ್ ಲೀಟರ್ ಗೆ 17-18 ಪೈಸೆ ಕಡಿಮೆ ಮಾಡಿರುವುದು ಚುನಾವಣೆಯ ತಂತ್ರ : ಗಾಂಧಿ

03:52 PM Mar 28, 2021 | Team Udayavani |

ನವ ದೆಹಲಿ : ನಾಲ್ಕು ರಾಜ್ಯಗಳು ಹಾಗೂ ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭಾ ಚುನಾವಣಾ ಉದ್ದೇಶದಿಂದ ಕೇಂದ್ರ ಸರ್ಕಾರ ಪೆಟ್ರೋಲ್ ಹಾಗೂ ಡಿಸೇಲ್ ಬೆಲೆಯನ್ನು ಪ್ರತಿ ಲೀಟರ್ ಗೆ 17-18 ಪೈಸೆ ಕಡಿಮೆ ಮಾಡಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

Advertisement

ಚುನಾವಣೆಯ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಪೆಟ್ರೋಲ್, ಡಿಸೇಲ್ ಪ್ರತಿ ಲೀಟರ್ ಗೆ 17-18 ಪೈಸೆ ಬೆಲೆಯನ್ನು ಇಳಿಸಿದೆ. ಇಷ್ಟು ಪ್ರಮಾಣದಲ್ಲಿ ಹಣವನ್ನು ಉಳಿತಾಯ ಮಾಡುವುದರಿಂದ ನೀವು ಏನು ಮಾಡುತ್ತೀರಿ ಎಂದು ಪ್ರಶ್ನೆ ಕೇಳಿ ರಾಹುಲ್ ಟ್ವೀಟ್ ಮಾಡಿದ್ದಾರೆ.

ಓದಿ :    ಪ್ರತಿಭಟನೆಗಳು ಎಸ್ಐಟಿ ತನಿಖೆಯ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ: ಬಸವರಾಜ ಬೊಮ್ಮಾಯಿ

ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ಆರ್ಥಿಕ ನೀತಿಯನ್ನು ದೂಷಿಸುತ್ತಲೇ ಬಂದಿದ್ದಾರೆ. ಈ ರೀತಿಯ ಆರ್ಥಿಕ ನೀತಿಯ ಕಾರಣದಿಂದ ದೇಶದಲಲಿ ನಿರುದ್ಯೋಗ ಸಮಸ್ಯೆ, ಬಡತನ ಹೆಚ್ಚಾಗುತ್ತದೆ ಎಂದು ಅವರು ಕಳೆದ ವಾರ ಹೇಳಿದ್ದರು.

ನಾಲ್ಕು ರಾಜ್ಯಗಳಾದ ಪಶ್ಚಿಮ ಬಂಗಾಳ, ಅಸ್ಸಾಂ , ಕೇರಳ, ತಮಿಳುನಾಡು ಹಾಗೂ ಕೇಂದ್ರಾಡಳಿತ ಪ್ರದೇಶವಾದ ಪುದುಚೆರಿಯಲ್ಲಿ ಒಟ್ಟು 824 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತದೆ.

Advertisement

ಈ ರಾಜ್ಯಗಳಲ್ಲಿ ಮಾರ್ಚ್ 27 ರಿಂದ ಮತದಾನ ಆರಂಭವಾಗಿ ಏಪ್ರಿಲ್ 29ರ ತನಕ ಮತದಾನ ನಡೆಯಲಿಕ್ಕಿದೆ. ನಾಲ್ಕು ರಾಜ್ಯಗಳ ಹಾಗೂ ಒಂದು ಕೇಂದ್ರಾಡಳಿತ ಪ್ರದೇಶದ ಮತ ಎಣಿಕೆಯು ಮೇ 2 ರಂದು ನಡೆಯಲಿಕ್ಕಿದೆ.

ತಮಿಳುನಾಡು, ಪಶ್ಚಿಮ ಬಂಗಾಳ, ಕೇರಳ, ಅಸ್ಸಾಂ, ಮತ್ತು ಪುದುಚೇರಿಯ 2.7 ಲಕ್ಷ ಮತಗಟ್ಟೆಗಳಲ್ಲಿ 18.68 ಕೋಟಿ ಮತದಾರರು ಮತ ಚಲಾಯಿಸಲಿದ್ದಾರೆ.

ಓದಿ :    ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಿಗ್‍ಬಾಸ್ ಮಾಜಿ ಸ್ಪರ್ಧಿ ಚೈತ್ರಾ ಕೊಟೂರು

Advertisement

Udayavani is now on Telegram. Click here to join our channel and stay updated with the latest news.

Next