Advertisement
ರಾಜಶೇಖರ ಶೆಟ್ಟಿ ಮಾತನಾಡಿ, ಪೆದ್ಯಾರು ಬಾಬು ಆಚಾರ್ಯ ಮನೆ ಬಳಿಯಿಂದ ಪಾರೆಂಕಿ ದೇವಸ್ಥಾನದ ತನಕ ರಸ್ತೆ ಕಾಂಕ್ರೀಟ್ಗೆ 20 ಲ. ರೂ., ಗ್ರಾ.ಪಂ. ಕಚೇರಿ ಮೇಲ್ಭಾಗದಲ್ಲಿ ಬಾಪೂಜಿ ಸೇವಾ ಭವನ ನಿರ್ಮಾಣಕ್ಕೆ 13 ಲ.ರೂ., ಬಸವನಗುಡಿ ಕಾಲನಿಯ ರಸ್ತೆ ಕಾಂಕ್ರೀಟ್ಗೆ 5 ಲ.ರೂ., ಪುಂಜಾಲಕಟ್ಟೆ ಪ್ರಥಮದರ್ಜೆ ಕಾಲೇಜು ಮುಂಭಾಗದಲ್ಲಿ ಆವರಣ ಗೋಡೆ ನಿರ್ಮಾಣಕ್ಕೆ 10 ಲ.ರೂ. ಅನುದಾನ ಸೇರಿ ಒಟ್ಟು 48 ಲ.ರೂ. ಕಾಮಗಾರಿ ನಡೆಯಲಿದೆ ಎಂದರು.
ಮಡಂತ್ಯಾರು- ಪಾರೆಂಕಿ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಈ ರಸ್ತೆಯ ಕಾಮಗಾರಿ ಬಗ್ಗೆ ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದು ಬಹುತೇಕ ಮಂಜೂರುಗೊಳ್ಳುವ ಹಂತದಲ್ಲಿದ್ದು ಸುಮಾರು 4.3 ಕೋ.ರೂ. ಅನುದಾನ ಸಿಗುವ ಭರವಸೆ ಇದೆ.
– ರಾಜಶೇಖರ ಶೆಟ್ಟಿ ,
ನಿರ್ದೇಶಕರು,ಕರಾವಳಿ ಅಭಿವೃದ್ಧಿ ಪ್ರಾಧಿಕಾರ, ಮಂಗಳೂರು.