ಮುಂಬೈ: ಟೀಂ ಇಂಡಿಯಾದ ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾ ಅವರು ತಂಡಕ್ಕೆ ಮರಳುವುದು ಮತ್ತಷ್ಟು ವಿಳಂಬವಾಗುತ್ತಿದೆ. ಬೆನ್ನು ನೋವಿನಿಂದ ಬಳಲುತ್ತಿರುವ ಬುಮ್ರಾ ಅವರು ಇನ್ನೂ ಹಲವು ತಿಂಗಳುಗಳ ಕಾಲ ವಿಶ್ರಾಂತಿ ಪಡೆಬೇಕಾಗಬಹುದು ಎನ್ನುತ್ತಿದೆ ವರದಿ. ಹೀಗಾಗಿ ಅವರು ಮುಂದಿನ ಐಪಿಎಲ್, ನಂತರದ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ತಪ್ಪಿಸಿಕೊಳ್ಳುವುದು ಬಹುತೇಕ ಖಚಿತವಾಗಿದೆ. ಅಲ್ಲದೆ ವರ್ಷಾಂತ್ಯದಲ್ಲಿ ದೇಶದಲ್ಲೇ ನಡೆಯುವ ಏಕದಿನ ವಿಶ್ವಕಪ್ ಗೂ ವೇಗಿ ಮರಳುವುದು ಅನುಮಾನ ಎನ್ನಲಾಗಿದೆ.
ಭಾರತದ ಮಾಜಿ ವೇಗಿ ಮತ್ತು 1983 ರ ವಿಶ್ವಕಪ್ ವಿಜೇತ ತಂಡದ ಸದಸ್ಯ ಮದನ್ ಲಾಲ್ ಅವರು ಈ ವರ್ಷದ ಬಹುಪಾಲು ದೊಡ್ಡ ಪಂದ್ಯಾವಳಿಗಳಲ್ಲಿ ಬುಮ್ರಾ ಅನುಪಸ್ಥಿತಿಯ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಬುಮ್ರಾ ಅವರು ಸಮಯ ತೆಗೆದು ಕೊಳ್ಳುತ್ತಿರುವ ಕಾರಣ ಸದ್ಯಕ್ಕೆ ನಾವು ಅವರಿಂದ ಹಿಂದೆ ಸರಿಯುವ ಸಮಯ ಬಂದಿದೆ ಎಂದು ಲಾಲ್ ಹೇಳಿದ್ದಾರೆ.
ಇದನ್ನೂ ಓದಿ:ಚಿತ್ರ ವಿಮರ್ಶೆ; ಆದಿವಾಸಿಗಳ ಅರಣ್ಯರೋಧನದ ಚಿತ್ರರೂಪ 19.20.21
ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಗೆ ಮೂವರು ವೇಗಿಗಳ ಜೊತೆಗೆ ಒಬ್ಬ ಸ್ಪಿನ್ನರ್ ಬೇಕು. ಬುಮ್ರಾನನ್ನು ಮರೆತುಬಿಡಿ. ಅವನನ್ನು ಬಿಟ್ಟುಬಿಡಿ, ಅವನು ತಂಡಕ್ಕೆ ಮರಳಿ ಬರುತ್ತಾನೆಂದು ಯಾವ ಗ್ಯಾರಂಟಿ? ಬಂದಾಗ ನೋಡಿಕೊಳ್ಳೋಣ ಎಂದು ಹೇಳಿದ್ದಾರೆ.