Advertisement
ಹತ್ತಾರು ಸಮಸ್ಯೆಇಲ್ಲಿನ ಮಣ್ಣಿನ ರಸ್ತೆಯು ಪ್ರತಿ ಮಳೆಗಾಲದಲ್ಲೂ ಕೆಸರಿನಿಂದ ಕೂಡಿರುತ್ತಿದ್ದು ವಾಹನ ಸಂಚಾರಕ್ಕೆ ಸಮಸ್ಯೆ ಯಾಗಿದೆ. ಶಾಲೆಯ ಮಕ್ಕಳಿಗೂ ಸಮಸ್ಯೆ ಯಾಗಿದೆ. ಶಾಲೆಗೆ ಬರಲು ಎಡ್ಮಲೆ, ಹಂಜ, ಕಾರಿಮನೆಯಿಂದ 6 – 7ಕಿ.ಮೀ. ನಡೆದೇ ಸಾಗಬೇಕು. ಊರಿನಲ್ಲಿ ಅನಾರೋಗ್ಯಕ್ಕೀಡಾದವರನ್ನು ಎತ್ತಿಕೊಂಡೇ ಹೋಗಬೇಕು. ಈ ಊರಿನಲ್ಲಿ ಮೊಬೈಲ್ ನೆಟ್‌ವರ್ಕ್ ಸಮಸ್ಯೆಯೂ ಇದ್ದು, ಒಂದು ಫೋನ್‌ಗಾಗಿ 6-7 ಕಿ.ಮೀ. ದೂರದ ಮಡಾಮಕ್ಕಿಗೆ ಬರಬೇಕು.
ಡಾಮರು ಮಾಡಿಕೊಡಿ ಎಂದು ಜನಪ್ರತಿ ನಿಧಿಗಳ ಬಳಿ ತೆರಳಿದರೆ ಈ ರಸ್ತೆ ಅರಣ್ಯ ಪ್ರದೇಶದಲ್ಲಿದೆ, ಅಸಾಧ್ಯ ಎನ್ನುತ್ತಾರೆ. ಆದರೆ ಪಕ್ಕದ ಕೆಲವು ಊರುಗಳಲ್ಲಿ ರಸ್ತೆಗಳಾಗಿರು ವುದು ಅರಣ್ಯ ಪ್ರದೇಶಗಳಲ್ಲಿ ಅಲ್ಲವೇ ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ. ಅನೇಕ ಬಾರಿ ಮನವಿ
ಈ ರಸ್ತೆಯನ್ನು ಪಂಚಾಯತ್ ಅನುದಾನದಿಂದ ಅಭಿವೃದ್ಧಿಪಡಿಸುವುದು ಕಷ್ಟ. ಹಾಗಾಗಿ ಊರವರು, ಪಂಚಾಯತ್‌ನಿಂದ ಅನೇಕ ಬಾರಿ ಶಾಸಕರು, ಸಂಬಂಧಪಟ್ಟ ಜನಪ್ರತಿನಿಧಿಗಳಿಗೆ ಮನವಿ ನೀಡಿದ್ದೇವೆ. ಆದರೆ ಈ ವರೆಗೆ ಯಾವುದೇ ಅನುದಾನ ಬಂದಿಲ್ಲ. ಇದು ಅರಣ್ಯ ಪ್ರದೇಶವಾದರೆ ಇಲ್ಲಿಯೇ ಅಕ್ಕಪಕ್ಕದ ಅನೇಕ ಊರುಗಳಲ್ಲಿ ಅರಣ್ಯದಲ್ಲಿಯೇ ರಸ್ತೆ ನಿರ್ಮಿಸಿ ಡಾಮರು ಕಾಮಗಾರಿ ನಡೆಸಲಾಗಿದೆ ಅದು ಕಾನೂನು ಉಲ್ಲಂಘನೆಯಲ್ಲವೇ?
-ದಯಾನಂದ ಪೂಜಾರಿ,
ಗ್ರಾ.ಪಂ. ಸದಸ್ಯ