Advertisement

ಅಬ್ಬರಿಸಲು ‘ಮದಗಜ’ರೆಡಿ: ಹಿಟ್‌ ಲಿಸ್ಟ್‌ ಗೆ ಟೈಟಲ್‌ ಟ್ರ್ಯಾಕ್‌

02:21 PM Nov 15, 2021 | Team Udayavani |

ಶ್ರೀಮುರಳಿ ನಟನೆಯ “ಮದಗಜ’ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಚಿತ್ರ ಡಿಸೆಂಬರ್‌ 3ರಂದು ತೆರೆಕಾಣುತ್ತಿದೆ. ಮೊದಲ ಹಂತವಾಗಿ ಚಿತ್ರತಂಡ ಟೀಸರ್‌, ಹಾಡುಗಳ ಮೂಲಕ ಅಬ್ಬರಿಸಲು ಅಣಿಯಾಗಿದೆ.

Advertisement

ಈಗಾಗಲೇ ಬಿಡುಗಡೆಯಾಗಿರುವ ಟೀಸರ್‌ ಹಾಗೂ ಮೆಲೋಡಿ ಹಾಡಿಗೆ ಮೆಚ್ಚುಗೆ ವ್ಯಕ್ತವಾಗಿದ್ದು, ಈಗ ಚಿತ್ರದ ಟೈಟಲ್‌ ಟ್ರ್ಯಾಕ್‌ ರಿಲೀಸ್‌ ಆಗಿದೆ. ನಾಯಕ ಶ್ರೀಮುರಳಿ ಅವರು ಸಖತ್‌ ಸ್ಟೈಲಿಶ್‌ ಆಗಿ ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದು, ನಾಯಕನ ಗುಣಗಾನದ ಸುತ್ತ ಈ ಹಾಡು ಸಾಗುತ್ತದೆ.

ಇದನ್ನೂ ಓದಿ:ಶಿವ-ಹರಿ ಹೆಗಲಿನಲ್ಲಿ ವೃಷಭ ವಾಹನ

“ಯುದ್ಧ ಸಾರಿದ ಚಂಡಮಾರುತ…’ ಎಂಬ ಹಾಡನ್ನು ಸಖತ್‌ ಅದ್ಧೂರಿಯಾಗಿಯೇ ಚಿತ್ರೀಕರಿಸಲಾಗಿದೆ. ಚಿತ್ರದ ಸಾಹಿತ್ಯ, ಸಂಗೀತ ಎರಡೂ ಗಮನ ಸೆಳೆಯುತ್ತದೆ. ಅಂದಹಾಗೆ, ಚಿತ್ರ ಕನ್ನಡವಷ್ಟೇ ಅಲ್ಲದೇ, ಇತರ ಭಾಷೆಗಳಲ್ಲಿ ಬಿಡುಗಡೆಯಾಗಲಿದ್ದು, 1500ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಮಾಡುವ ಯೋಚನೆ ಚಿತ್ರತಂಡಕ್ಕಿದೆ.

“ಮದಗಜ’ ಒಂದು ಪಕ್ಕಾ ಮಾಸ್‌ ಎಂಟರ್‌ಟೈನರ್‌ ಆಗಿದ್ದು, ಮಹೇಶ್‌ ಈ ಚಿತ್ರದ ನಿರ್ದೇಶಕರು. ಈಗಾಗಲೇ “ರಾಬರ್ಟ್‌’ ಚಿತ್ರ ನಿರ್ಮಿಸಿರುವ ಉಮಾಪತಿ ಫಿಲಂಸ್‌ ಈಗ “ಮದಗಜ’ ನಿರ್ಮಿಸಿದೆ. ಚಿತ್ರದಲ್ಲಿ ಆಶಿಕಾ ರಂಗನಾಥ್‌ ನಾಯಕಿಯಾಗಿದ್ದು, ಜಗಪತಿ ಬಾಬು, ದೇವಯಾನಿ ಸೇರಿದಂತೆ ಅನೇಕರು ನಟಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next