Advertisement

ಮದಭಾವಿ ದೂರದೃಷ್ಟಿ ಯೋಜನೆ ನಕ್ಷೆ ಜಾಗೃತಿ

04:36 PM Aug 20, 2022 | Shwetha M |

ವಿಜಯಪುರ: ಬಡತನ ಮುಕ್ತ ಸಮಾಜ ಹಾಗೂ ನೈಸರ್ಗಿಕ ಸಂಪನ್ಮೂಲಕ ಸದ್ಬಳಕೆ ಕುರಿತು ಗ್ರಾಮೀಣ ದೂರದೃಷ್ಟಿ ಯೋಜನೆ ಕುರಿತು ವಿಜಯಪುರ ತಾಲೂಕಿನ ಮದಭಾವಿ ಗ್ರಾಮದಲ್ಲಿ ಜಾಗೃತಿ ಕಾರ್ಯಕ್ರಮ ಜರುಗಿತು.

Advertisement

ಮದಭಾವಿ ಗ್ರಾಮದ ಮನೆ-ಮನೆಗೆ ಭೇಟಿ ನೀಡುವ ಮೂಲಕ ಗ್ರಾಮದ ಸಾಮಾಜಿಕ, ಸಂಪನ್ಮೂಲ ನಕ್ಷೆ ಹಾಗೂ ಮಾರ್ಗಗಳ ಕುರಿತು ರಂಗೋಲಿಯಲ್ಲಿ ಬಿಡಿಸಿ ಜನರಿಗೆ ನೀಡಲಾಯಿತು.

ಬಡತನ ಮುಕ್ತ ಮತ್ತು ಜೀವನೋಪಾಯ ಕೌಶಲ್ಯ ಅಭಿವೃದ್ಧಿ, ಗ್ರಾಮದಲ್ಲಿ ಆರೋಗ್ಯ ಯೋಜನೆ ಗುರಿ ನಿಗದಿಪಡಿಸುವಿಕೆ, ಶಿಕ್ಷಣ ವಲಯ, ಮಹಿಳಾ ಸ್ನೇಹಿ ಹಾಗೂ ಮಕ್ಕಳ ಸ್ನೇಹಿ ಗ್ರಾಪಂ ಯೋಜನೆ, ಜಲ ಸಮೃದ್ಧಿ ಗ್ರಾಮ ನೈಸರ್ಗಿಕ ಸಂಪನ್ಮೂಲಗಳ ನಿರ್ವಹಣೆ, ನಿರ್ವಹಣೆಯಲ್ಲಿ ಸ್ವತ್ಛತೆ ಮತ್ತು ಹಸಿರು ಗ್ರಾಮ, ಸಾಮಾಜಿಕವಾಗಿ ಸುರಕ್ಷಿತವಾಗಿ ಗ್ರಾಮದ ವಿಷಯಗಳ ಬಗ್ಗೆ ಗ್ರಾಮದಲ್ಲಿ ಚರ್ಚಿಸಲಾಯಿತು.

ಈ ವೇಳೆ ಜಿಪಂ ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಗೋಠೆ, ಜಿಪಂ ಯೋಜನಾ ಅಂದಾಜು ಮತ್ತು ಮೌಲ್ಯಮಾಪನ ಅಧಿಕಾರಿ ಎ.ಬಿ. ಅಲ್ಲಾಪೂರ, ಜಿಪಂಯ ಪ್ರಮೋದ ಚಾಂದಕವಟೆ, ಅಬ್ದುಲ್‌ ನಜೀರಸಾಬ ಗ್ರಾಮೀಣಾಭಿವೃದ್ಧಿ ತರಬೇತಿ ಸಂಸ್ಥೆಯ ವಿಜಯಾ ಗಲಗಲಿ, ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಬಾಬು ಸಜ್ಜನ, ಮದಭಾವಿ ಗ್ರಾಪಂನ ಚೇತನ ಬಗಲಿ, ಪಿಡಿಒ ಎಸ್‌.ಆರ್‌. ಕಟ್ಟಿ, ತಾಲೂಕು ಐಇಸಿ ಸಂಯೋಜಕ ರಾಘವೇಂದ್ರ ಭಜಂತ್ರಿ, ಕಾರ್ಯದರ್ಶಿ ಪ್ರಶಾಂತ ಸಜ್ಜನ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next