Advertisement

ವಿಚಿತ್ರ ವ್ಯಕ್ತಿಯ ತಿಕ್ಕಲುತನ

10:15 AM Mar 26, 2018 | Team Udayavani |

ಲಾಸ್‌ ಏಂಜಲೀಸ್‌: ಭೂಮಿ ಚಪ್ಪಟೆಗಿದೆಯೋ ಗುಂಡಗಿದೆಯೋ ಎಂಬ ಜಿಜ್ಞಾಸೆ ಶತಶತಮಾನಗಳ ಹಿಂದೆಯೇ ಉದಯಿಸಿ, ಅನಂತರದ ವಿಜ್ಞಾನದ ಸಾಕ್ಷ್ಯಾಧಾರಗಳಿಂದ ಅಸ್ತಂಗತವೂ ಆಗಿದೆ. ಆದರೆ, ಅಮೆರಿಕದ ಮೈಕ್‌ ಹ್ಯೂಗ್ಸ್‌ ಎಂಬ ಈ ಪುಣ್ಯಾತ್ಮನಿಗೆ ಇದು ಬಗೆಹರಿಯಲಾಗದ ಗೊಂದಲವಾಗಿತ್ತಂತೆ. ತನ್ನೀ ಗೊಂದಲ ಪರಿಹಾರಕ್ಕೆ ಆತ ಮಾಡಿದ್ದೇನು ಗೊತ್ತೇ? ತಾನೇ ರಾಕೆಟ್‌ ತಯಾರಿಸಿ ಅದರಲ್ಲಿ ಕೂತು ಆಕಾಶದತ್ತ ಹಾರಿದ್ದಾನೆ!
ನಂಬಿದ್ರೆ ನಂಬಿ, ಬಿಟ್ರೆ ಬಿಡಿ. ತಕ್ಕಮಟ್ಟಿಗೆ ರಾಕೆಟ್‌ ಸೈನ್ಸ್‌ ಕಲಿತಿದ್ದ ಈತ ನಿಜವಾಗಿಯೂ ಆಕಾಶಕ್ಕೆ ಚಿಮ್ಮಿದ್ದಾನೆ. ಲಾಸ್‌ ಏಂಜಲೀಸ್‌ನಿಂದ 200 ಕಿ.ಮೀ. ದೂರವಿರುವ ಮರಳುಗಾಡು ಪ್ರದೇಶವಾದ ಆ್ಯಂಬೋಯ್‌ ಪ್ರಾಂತ್ಯದಿಂದ ಗಗನಕ್ಕೆ ಹಾರಿದ ಆತನ ರಾಕೆಟ್‌ ಕೇವಲ 1,875 ಅಡಿಯಷ್ಟೆತ್ತರಕ್ಕೆ ಮಾತ್ರ ಹಾರಿ ಮತ್ತೆ ಬಂದು ಭೂಮಿಗೆ ಬಿದ್ದಿದೆ. ಪುಣ್ಯಕ್ಕೆ ಆತನಿಗೇನೂ ಆಗಿಲ್ಲ. ಪ್ಯಾರಾಚೂಟ್‌ ಇದ್ದಿದ್ದರಿಂದ ಬಚಾವಾಗಿದ್ದಾನೆ ಈ ಆಸಾಮಿ. ಅದೇನೇ ಇರಲಿ, ತನ್ನೀ ದುಸ್ಸಾಹಸಕ್ಕಾಗಿ ಭಾರೀ ಸುದ್ದಿಯಾಗಿರುವ ಆತ ಹುಚ್ಚ ಮೈಕ್‌ ಎಂಬ ಕುಖ್ಯಾತಿಗೂ ಕಾರಣವಾಗಿದ್ದಾನೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next