Advertisement
ಸಣ್ಣ ಮತ್ತು ಮಧ್ಯಮ ವರ್ಗದ ರೈತರು ಹೆಚ್ಚು ಹಣ ಹೂಡಿ ಯಂತ್ರಗಳನ್ನು ಕೊಳ್ಳಲಾರರು. ಹಾಗಾಗಿ ಯಂತ್ರಗಳನ್ನು ಕೃಷಿ ಯಂತ್ರಧಾರೆ ಕೇಂದ್ರಗಳಿಂದ ರೈತರಿಗೆ ಒದಗಿಸಿದರೆ ಅನುಕೂಲವಾಗುತ್ತದೆ. ಜತೆಗೆ ಕೂಲಿಯಾಳುಗಳ ಕೊರತೆಯನ್ನೂ ನೀಗಿಸಬಹುದು ಎಂದು ಕೃಷಿ ಇಲಾಖೆ ಸಹಯೋಗದಲ್ಲಿ ಯಂತ್ರ ಧಾರೆ ಕೇಂದ್ರಗಳನ್ನು ತೆರೆಯಲಾಗಿತ್ತು.
ರಾಜ್ಯದ ಉಳಿದೆಲ್ಲ ಜಿಲ್ಲೆಗಳಿಗಿಂತ ಮೊದಲೇ ಕರಾವಳಿಯಲ್ಲಿ ಭತ್ತದ ಕಟಾವು ಮಾಡಲಾಗುತ್ತದೆ. ಹಾಗಾಗಿ ಹೊರ ರಾಜ್ಯ ಹಾಗೂ ಜಿಲ್ಲೆಗಳಲ್ಲಿರುವ ಸಬ್ಸಿಡಿ ಪಡೆದ ಕಟಾವು ಯಂತ್ರಗಳು ಅವಿಭಜಿತ ದ.ಕ. ಜಿಲ್ಲೆಗೆ ಆಗಮಿಸಿದ್ದು, ಖಾಸಗಿ ಯಂತ್ರಗಳಂತೆ ಭತ್ತ ಕಟಾವಿಗೆ ರೈತರಿಂದ ದುಪ್ಪಟ್ಟು ದರ ವಸೂಲಿ ಮಾಡುತ್ತಿರುವ ಆರೋಪ ಕೇಳಿಬಂದಿದೆ. ಈ ಬಗ್ಗೆ ಜಿಲ್ಲಾಡಳಿತ, ಕೃಷಿ ಇಲಾಖೆಗೆ ಮಾಹಿತಿಯಿದ್ದರೂ ಯಾವುದೇ ಕ್ರಮ ಕೈಗೊಳ್ಳದಿರುವುದು ರೈತರ ಬೇಸರಕ್ಕೆ ಕಾರಣವಾಗಿದೆ.
Related Articles
ಸರಕಾರಿ ಸಬ್ಸಿಡಿ ಪಡೆದ ಖಾಸಗಿ ಸಂಸ್ಥೆಗಳೂ ಅಗತ್ಯವಿದ್ದಾಗ ಯಂತ್ರಗಳನ್ನು ಒಂದು ಜಿಲ್ಲೆಯಿಂದ ಇನ್ನೊಂದು ಜಿಲ್ಲೆಗೆ ತರಿಸಿಕೊಳ್ಳಬಹುದು. ಜತೆಗೆ ಆಯಾ ಜಿಲ್ಲಾ ಸಮಿತಿಗಳು ನಿಗದಿ ಪಡಿಸಿದ ದರದಲ್ಲಿ ಕಟಾವು ಮಾಡಿಸಬಹುದು. ಆದರೂ ಉಡುಪಿ ಸೇರಿದಂತೆ ಕರಾವಳಿಯಲ್ಲಿ ಈ ವ್ಯವಸ್ಥೆಯನ್ನು ಆಳವಡಿಸಿಕೊಳ್ಳಲು ಹಿಂದೇಟು ಹಾಕುತ್ತಿರುವುದು ಸಂಶಯಕ್ಕೆಡೆ ಮಾಡಿದೆ.
Advertisement
ಇದನ್ನೂ ಓದಿ:ಚೀನಾ ಸೈನಿಕರ ಪತ್ತೆಗಾಗಿ ಹೊಸ ತಂತ್ರಜ್ಞಾನ : ಗಡಿ ಉಲ್ಲಂಘನೆ ತಪ್ಪಿಸಲು ಈ ಪ್ರಯತ್ನ
ಇಲಾಖೆ ಹಿಡಿತ ಬೇಕು!ಪ್ರಸ್ತುತ ಖಾಸಗಿ ಸಂಸ್ಥೆಗಳಿಗೆ ಭತ್ತದ ಕಟಾವು ಯಂತ್ರಕ್ಕೆ ಸುಮಾರು ಶೇ. 70ರಷ್ಟು ಸಬ್ಸಿಡಿ ನೀಡುತ್ತದೆ. ಆದರೂ ಈ ಸಂಸ್ಥೆಗಳು ರೈತರಿಂದ ಹೆಚ್ಚಿನ ಹಣ ವಸೂಲಿ ಮಾಡುತ್ತಿವೆ. ಒಂದು ವೇಳೆ ಇಲಾಖೆಯ ಅಡಿಯಲ್ಲಿ ಕಟಾವು ಯಂತ್ರಗಳು ಕಾರ್ಯಾಚರಿಸಿದ್ದರೆ, ಅಗತ್ಯ ಸಮಯದಲ್ಲಿ ಬೇರೆ ಜಿಲ್ಲೆಯ ಕಟಾವು ಯಂತ್ರಗಳನ್ನು ಬಳಸಿಕೊಳ್ಳ ಬಹುದಿತ್ತು. ಪ್ರಸ್ತುತ ಇದೂ ಸಾಧ್ಯವಿಲ್ಲದ್ದಾಗಿದೆ. ವ್ಯಕ್ತಿಗತ ಸಬ್ಸಿಡಿ ಕಡಿಮೆ
ಕೃಷಿ ಇಲಾಖೆಯಲ್ಲಿ ವ್ಯಕ್ತಿಗತವಾಗಿ ಕೃಷಿ ಯಂತ್ರಗಳನ್ನು (ಟ್ರ್ಯಾಕ್ಟರ್ ಹೊರತುಪಡಿಸಿ) ಖರೀದಿಸುವ ರೈತರಿಗೆ ಗರಿಷ್ಠ 1 ಲ.ರೂ. ಸಬ್ಸಿಡಿ ಸಿಗಲಿದೆ. ಜತೆಗೆ ರೈತ ಸಂಘ-ಸಂಸ್ಥೆಗಳು, ರೈತ ಉತ್ಪಾದಕ ಘಟಕಗಳು, ಗ್ರಾಮ ಮಟ್ಟದಲ್ಲಿ ಕೃಷಿ ಯಂತ್ರ ಖರೀದಿಗೆ ಗರಿಷ್ಠ 10 ಲ.ರೂ. ಹಾಗೂ ಸಹಕಾರಿ ಸಂಘಗಳ ಖರೀದಿಗೆ (ಡಿಪಿಆರ್) ಆಧಾರದ ಮೇಲೆ ಸಬ್ಸಿಡಿ ನೀಡಲಾಗುವುದು. ಮೇಲಿನ ಅಂಶಗಳು ಗಮನಿಸಿದಾಗ ಇಲ್ಲಿ ವ್ಯಕ್ತಿಗತವಾಗಿ ಖರೀದಿಸುವ ಯಂತ್ರಗಳಿಗೆ ಸಬ್ಸಿಡಿ ಪ್ರಮಾಣ ತೀರಾ ಕಡಿಮೆ ಇದೆ. ಸಂಸ್ಥೆ ಕಾರ್ಯಾಚರಣೆ ಹೇಗೆ?
ಕೃಷಿ ಇಲಾಖೆ ಭತ್ತದ ಕಟಾವು ಯಂತ್ರಗಳ ಖರೀದಿಗೆ ರಾಜ್ಯಾದ್ಯಂತ ಆಸಕ್ತದಾರರಿಂದ ಅರ್ಜಿ ಆಹ್ವಾನಿಸುತ್ತದೆ. ಈ ವೇಳೆ ಆಯ್ಕೆಗೊಂಡ ಸಂಸ್ಥೆಗೆ ಕಟಾವು ಯಂತ್ರ ಖರೀದಿಗೆ ಅಗತ್ಯ ಸಬ್ಸಿಡಿ ನೀಡುತ್ತದೆ. 50 ಲ.ರೂ. ಕಟಾವು ಯಂತ್ರಕ್ಕೆ ಇಲಾಖೆಯಿಂದ 35 ಲ.ರೂ. ಸಿಗಲಿದೆ. ಉಳಿಕೆ ಹಣವನ್ನು ಖಾಸಗಿ ಸಂಸ್ಥೆಯವರು ಪಾವತಿ ಮಾಡಿ ಕೊಂಡು, ರೈತರಿಗೆ ರಿಯಾಯಿತಿ ದರದಲ್ಲಿ ನೀಡುವುದರ ಜತೆಗೆ ಹಾಕಿದ ಬಂಡವಾಳ ವನ್ನೂ ಸಹ ಹಿಂದಿರುಗಿ ಪಡೆಯ ಬಹುದು. ಬೇಡಿಕೆಗಳೇನು?
– ಕಟಾವು ಯಂತ್ರಗಳನ್ನು ಇಲಾಖೆಯ ಹಿಡಿತಕ್ಕೆ ತರಬೇಕು
– ಯಂತ್ರಗಳನ್ನು ಜಿಲ್ಲೆಯಿಂದ ಜಿಲ್ಲೆಗೆ ಸ್ಥಳಾಂತರಿಸುವ ಅವಕಾಶ
– ಸಬ್ಸಿಡಿ ಯಂತ್ರ ಖಾಸಗಿಯಾಗಿ ಕಾರ್ಯಾಚರಿಸುವುದು ರದ್ದು
-ರೈತರಿಗೆ ಭತ್ತದ ಕಟಾವಿಗೆ ವ್ಯವಸ್ಥೆ ಮಾಡಿ ಉಡುಪಿ ಯಂತ್ರಧಾರೆ ಕೇಂದ್ರದ ಕಟಾವು ಯಂತ್ರ ಜಿಲ್ಲಾ ಸಮಿತಿ ನಿಗದಿ ಪಡಿಸಿದ ದರದಲ್ಲಿ ಕಾರ್ಯಾಚರಿಸುತ್ತಿದೆ. ಖಾಸಗಿ ಯಂತ್ರಗಳ ದರ ನಿಗದಿಗೆ ಅವಕಾಶವಿಲ್ಲ. ರೈತರು ಹಾಗೂ ಖಾಸಗಿ ಯಂತ್ರಗಳ ಮಾಲಕರು ಚರ್ಚಿಸಿ, ರೈತರಿಗೆ ಕಡಿಮೆ ದರದಲ್ಲಿ ಒದಗಿಸಬೇಕು. ಭತ್ತದ ಕಟಾವಿಗೆ ನ್ಯಾಯತ ಬೆಲೆ ನಿಗದಿ ಪಡಿಸಬೇಕು.
– ಕೆಂಪೇಗೌಡ ಜಂಟಿ ಕೃಷಿ ನಿರ್ದೇಶಕರು, ಕೃಷಿ ಇಲಾಖೆ ಉಡುಪಿ