ನಿಮ್ಗೆ ಹೇಗೇ ಬೇಕೋ ಹಾಗೆ ಪಾನಿಪುರಿ ಕೈಗಿಡೋ ಮಷಿನ್ನಿನ ಕತೆ ಇದು. ಇದನ್ನು ಬೆಂಗಳೂರಿಗೆ ಪರಿಚಯಿಸಿದ್ದು, , ಮಿ. ಪಾನಿಪುರಿ, ಫಾಸ್ಟ್‌ಫುಡ್ ಸೆಂಟರ್. ಬೆಂಗಳೂರಿನಲ್ಲಿ ಇದು ಪ್ರವೇಶ ಪಡೆದಾಗಿನಿಂದ, ಇದರ ಸುತ್ತ ಪಾನಿಪುರಿ ಪ್ರಿಯರು ಮುತ್ತಿಕ್ಕುತ್ತಿದ್ದಾರೆ…
ಭಯ್ನಾ, ಥೋಡಾ ಮೀಠಾ ಡಾಲ್ ದೋ, ಭಯ್ನಾ, ನಮಕ್ ಜ್ಯಾದಾ ಹೋಗಯಾ… ಪಾನಿಪೂರಿ ತಿನ್ನುವಾಗ ಹೀಗೆ ದೂರು ಹೇಳದವರೇ ಇಲ್ಲವೇನೋ. ಉಪ್ಪು, ಹುಳಿ, ಖಾರ, ಸಿಹಿಯಲ್ಲಿ ಚೂರು ವ್ಯತ್ಯಾಸವಾದರೂ, ಪಾನಿಪೂರಿಯ ಮಜವೇ ಹೊರಟು ಹೋಗುತ್ತದೆ. ಅಷ್ಟಲ್ಲದೆ, ಪಾನಿಪೂರಿ ಗಾಡಿ ಇರುವ ಜಾಗ, ತಯಾರಿಸುವವನ ಸ್ವತ್ಛತೆ ಕಡೆಗೆ ಗಮನ ಹರಿಸದಿದ್ದರೆ ಹೊಟ್ಟೆಗೆ ಪೆಟ್ಟು! ಅಬ್ಬಬ್ಟಾ, ಒಂದು ಪ್ಲೇಟ್ ಪಾನಿಪೂರಿಗೆ ಎಷ್ಟೆಲ್ಲಾ ಯೋಚಿಸಬೇಕು ಅಲ್ವಾ? ಆದರೆ, ಇನ್ಮುಂದೆ ಇವುಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದೇ ಬೇಡ. ಯಾಕಂದ್ರೆ, ನಿಮ್ಮ ಪಾನಿಪೂರಿಯ ರುಚಿ-ಶುಚಿಗಾಗಿ ಯಂತ್ರವೊಂದು ಬಂದಿದೆ.
ಎಟಿಎಂ ಮಷಿನ್‌ನಿಂದ ಗುಂಡಿ ಒತ್ತಿ ಹಣ ತೆಗೆದಂತೆ, ಪಾನಿಪೂರಿ ವೆಂಡಿಂಗ್ ಮಷಿನ್‌ನಿಂದ ನಿಮಗೆ ಬೇಕಾದ ರುಚಿಯ ಪಾನಿಪೂರಿ ಪಡೆಯಬಹುದು. ಸೆನ್ಸಾರ್ ಆಧಾರಿತ ಯಂತ್ರದಲ್ಲಿ ಖಾರ, ಮೀಡಿಯಂ ಮತ್ತು ಸ್ವೀಟ್ ಎಂಬ ಮೂರು ಆಯ್ಕೆಗಳಿರುತ್ತವೆ. ನಿಮಗೇನು ಬೇಕು ಅಂತ ಆಯ್ಕೆ ಮಾಡಿ, ಪೂರಿ ತುಂಬಿದ ತಟ್ಟೆಯನ್ನು ಮಷಿನ್‌ಗೊಡ್ಡಿದರೆ, ಪಾನಿ ಸುರಿಯುತ್ತದೆ. ರುಚಿಯ ಬಗ್ಗೆ ಅಂಗಡಿಯವನನ್ನು ದೂರುವ, ಸ್ವತ್ಛತೆಯ ಬಗ್ಗೆ ಯೋಚಿಸುವ ಅಗತ್ಯವೇ ಇಲ್ಲ.
ಈ ಯಂತ್ರವನ್ನು ಬೆಂಗಳೂರಿಗೆ ತಂದಿರುವುದು, ಮಿ. ಪಾನಿಪುರಿ, ಫಾಸ್ಟ್‌ಫುಡ್ ಸೆಂಟರ್. ಅಹಮದಾಬಾದ್‌ನಲ್ಲಿ ವಾಟರ್‌ಶಾಟ್ಸ್ ಎಂಬ ಪಾನಿಪೂರಿ ಅಂಗಡಿಯು, ಈ ಯಂತ್ರವನ್ನು ಮೊದಲ ಬಾರಿಗೆ ಪರಿಚಯಿಸಿದ್ದು. ಸದ್ಯಕ್ಕೆ ಬಿನ್ನಿಪೇಟೆಯ ಇಟಿಎ ಮಾಲ್ ಮತ್ತು ಮಾಗಡಿ ರಸ್ತೆಯ ಜಿಟಿ ಮಾಲ್‌ನಲ್ಲಿರುವ ಮಿ.ಪಾನಿಪೂರಿ ಸೆಂಟರ್‌ನಲ್ಲಿ ಈ ಮಷಿನ್ ಇದೆ. ಈ ಯಂತ್ರ ಮಾಡಿಕೊಡುವ ಪಾನಿಪುರಿಯನ್ನು ಸವಿಯಲೆಂದೇ ಇಲ್ಲಿ, ಆಹಾರಪ್ರಿಯರು ಸಾಲುಗಟ್ಟಿರುತ್ತಾರೆ. ಮುಂಗಾರು ಮಳೆಯ ಈ ಹೊತ್ತಿನಲ್ಲಿ, ನೀವೂ ಇದರ ಸ್ಪೈಸಿ ರುಚಿ ಸವಿಯಿರಿ…
ಎಲ್ಲೆಲ್ಲಿದೆ?
– ಇಟಿಎ ಮಾಲ್, ಬಿನ್ನಿಪೇಟೆ
– ಜಿಟಿ ಮಾಲ್, ಮಾಗಡಿ ರಸ್ತೆ